Peter The Dolphin: ಪ್ರೀತಿಯಲ್ಲಿ ಬಿದ್ದ ಡಾಲ್ಫಿನ್, ಬ್ರೇಕ್ ಆಪ್ ನಂತರ ಮಾಡಿದ್ದೇನು ಗೊತ್ತಾ? ಇಲ್ಲಿದೆ ಒಂದು ನಿಜಕ್ಕೂ ಡಿಫರೆಂಟ್ ಲವ್ ಸ್ಟೋರಿ

Peter The Dolphin: ಪುರುಷನು ಪ್ರೀತಿಯಲ್ಲಿದ್ದಾಗ, ಅವನು ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂದು ಹೇಳಲಾಗುತ್ತದೆ, ಆದರೆ ಪ್ರಾಣಿಯೊಂದು ಮಹಿಳೆಯನ್ನು ತುಂಬಾ ಪ್ರೀತಿಸಿದ್ದನ್ನು ಎಂದು ನೀವು ಕೇಳಿದ್ದೀರಾ, ಅಷ್ಟೇ ಅಲ್ಲ ನಂತರ ಮಹಿಳೆಯಿಂದ ಬ್ರೇಕ್ ಅಪ್ ಆದ ಬಳಿಕ ತನ್ನನ್ನು ತಾನು ನೀರಿನಲ್ಲಿ ಮುಳುಗಿಸಿ ಡಾಲ್ಫಿನ್ ಮರಣಹೊಂದಿದೆ.

Peter The Dolphin: ಪುರುಷನು ಪ್ರೀತಿಯಲ್ಲಿದ್ದಾಗ, ಅವನು ಯಾವುದೇ ಹಂತಕ್ಕೆ ಹೋಗಲು ಸಿದ್ಧ ಎಂದು ಹೇಳಲಾಗುತ್ತದೆ, ಆದರೆ ಪ್ರಾಣಿಯೊಂದು ಮಹಿಳೆಯನ್ನು ತುಂಬಾ ಪ್ರೀತಿಸಿದ್ದನ್ನು ಎಂದು ನೀವು ಕೇಳಿದ್ದೀರಾ, ಅಷ್ಟೇ ಅಲ್ಲ ನಂತರ ಮಹಿಳೆಯಿಂದ ಬ್ರೇಕ್ ಅಪ್ ಆದ ಬಳಿಕ ತನ್ನನ್ನು ತಾನು ನೀರಿನಲ್ಲಿ ಮುಳುಗಿಸಿ ಡಾಲ್ಫಿನ್ (Love Story) ಮರಣಹೊಂದಿದೆ. ಹೌದು, ಪೀಟರ್ (Peter) ಎಂಬ ಡಾಲ್ಫಿನ್ (Dolphin) ಯುವತಿಯೋರ್ವಳನ್ನು ತುಂಬಾ ಪ್ರೀತಿಸುತ್ತಿತ್ತು. ಆದರೆ ನಂತರ ಯುವತಿಯಿಂದ ಬೇರ್ಪಟ್ಟ ಡಾಲ್ಫಿನ್ ಹೃದಯ ಚೂರಾದ ಕಾರಣ ತನ್ನ ಪ್ರಾಣವನ್ನು ತಾನೇ ತೆಗೆದುಕೊಂಡಿದೆ.

 

ಇದನ್ನೂ ಓದಿ-ಮೂರನೇ ಬಾರಿ ತನ್ನ ಮದುವೆ ಮುಂದೂಡುತ್ತಿರುವುದಕ್ಕೆ ಪರಿಹಾರ ಕೇಳಿ ಪ್ರಧಾನಿಗೆ ಪತ್ರ ಬರೆದ ಯುವತಿ
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. 23ರ ಹರೆಯದ ಯುವತಿಯ ಪ್ರೀತಿಯಲ್ಲಿ ಬಿದ್ದ ಡಾಲ್ಫಿನ್ - 'ದಿ ಸನ್'ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, 1960 ರ ದಶಕದಲ್ಲಿ, ಆರು ವರ್ಷದ ಬಾಟಲಿನೋಸ್ ಡಾಲ್ಫಿನ್ 23 ವರ್ಷದ ಸಂಶೋಧನಾ ಸಹಾಯಕಿ ಮಾರ್ಗರೆಟ್ ಹೋವ್ (Margaret Hov) ಅವಳೊಂದಿಗೆ ಅಫೇರ್ ನಲ್ಲಿತ್ತು (Love Affair). ಮಾರ್ಗರೆಟ್ ಹತ್ತು ವಾರಗಳ ಕಾಲ ಪ್ರವಾಸದಲ್ಲಿದ್ದರು, ಆದರೆ ಸಂದರ್ಭಗಳು ಅವರನ್ನು ಬೇರ್ಪಡಿಸಿದಾಗ, ಪೀಟರ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದು ಉಸಿರಾಡಲು ನಿರಾಕರಿಸಿ, ತಾನಿರುವ ಟ್ಯಾಂಕ್ ನಲ್ಲಿಯೇ ಮುಳುಗಿ ಪ್ರಾಣಬಿಟ್ಟಿದೆ. ಈ ಪ್ರಕರಣವನ್ನು ಇಂದಿಗೂ ಕೂಡ ಆತ್ಮಹತ್ಯೆ (Dolphin Suicide) ಎಂದು ಪರಿಗಣಿಸಲಾಗುತ್ತದೆ.

2 /5

2. ಸಂಶೋಧನೆಯೊಂದರ ವೇಳೆ ಇಬ್ಬರು 10 ವಾರ ಜೋತೆಯಾಗಿದ್ದರು - ಮಾನವ ಭಾಷೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಕರಿಸಲು ಡಾಲ್ಫಿನ್‌ಗಳಿಗೆ ಕಲಿಸಲು ವಿನ್ಯಾಸಗೊಳಿಸಲಾದ ನಾಸಾ ಪ್ರಾಯೋಜಿತ  ಪ್ರಯೋಗದಲ್ಲಿ ಮಾರ್ಗರೆಟ್ ಮತ್ತು ಪೀಟರ್ ಮೊದಲು  ಭೇಟಿಯಾಗಿದ್ದಾರೆ. ಡಾಲ್ಫಿನ್‌ಗಳೊಂದಿಗೆ ಮನುಷ್ಯರು ಹೇಗೆ ಮಾತನಾಡಬಲ್ಲರು ಎಂಬುದನ್ನು ಕಂಡುಹಿಡಿಯುವುದು ಈ ಪ್ರಯೋಗದ ಉದ್ದೇಶವಾಗಿತ್ತು. ನೀರು ತುಂಬಿಸಲಾಗಿದ್ದ ಒಂದು ಬೃಹತ್ ಟ್ಯಾಂಕ್ ನಲ್ಲಿ ಮಾರ್ಗಾರೇಟ್ ಹಾಗೂ ಪೀಟರ್ ಹತ್ತು ವಾರಗಳ ಕಾಲ ಜೊತೆಯಾಗಿದ್ದರು.

3 /5

3. 22 ಇಂಚ್ ಅಡಿ ಆಳದ ಸಮುದ್ರದ ನೀರಿನಲ್ಲಿ 10 ವಾರ - ಮಾರ್ಗರೆಟ್ ತನ್ನ  ಬಹುತೇಕ ಸಮಯವನ್ನು ಪೀಟರ್‌ನೊಂದಿಗೆ 22 ಇಂಚುಗಳಷ್ಟು ಆಳವಾದ ಸಮುದ್ರದ ನೀರಿನಲ್ಲಿ ಕಳೆದಿದ್ದರು. ಡಾಲ್ಫಿನ್‌ಗಳಿಗೆ ಕಲಿಸಲು ಪ್ರಯತ್ನಿಸುವಾಗ ಇಬ್ಬರೂ ಒಟ್ಟಿಗೆ ವಾಸಿಸಬೇಕು, ಮಲಗಬೇಕು, ಸ್ನಾನ ಮಾಡಬೇಕು, ತಿನ್ನಬೇಕು ಮತ್ತು ಆಡಬೇಕು. ಡಾಲ್ಫಿನ್‌ಗಳು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.

4 /5

4.ಯುವತಿಯ ಮೇಲೆ ಡಾಲ್ಫಿನ್ ಗೆ ಹುಟ್ಟಿದ ಪ್ರೀತಿ - ಈ ಸಂಶೋಧನೆಯಲ್ಲಿ ಡಾಲ್ಫಿನ್ ಗೆ ಇಂಗ್ಲಿಷ್ ಕಲಿಸುವ ಪ್ರಯತ್ನ ವಿಫಲವಾದರೂ ಕೂಡ ಪೀಟರ್ ಶಾರೀರಿಕವಾಗಿ ಮಾರ್ಗರೆಟ್ ಹತ್ತಿರಕ್ಕೆ ಬಂದಿದ್ದನ್ನು ಮತ್ತು ಭಾವನಾತ್ಮಕವಾಗಿ ಆಕೆಯ ಜೊತೆಗೆ ಸಂಬಂಧ ಹೊಂದಿದ್ದನ್ನು ಮಾರ್ಗರೆಟ್ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲ ಡಾಲ್ಫಿನ್ ಕಡುಬಯಕೆಯನ್ನು ಗಮನಿಸಿದ ಮಾರ್ಗರೆಟ್ ಆತನನ್ನು ಸಂತೋಷಪಡಿಸಲು ಹತ್ತಿರವಾಗಿರುವುದಾಗಿ ಹೇಳಿದ್ದಳು.

5 /5

5. ಮಾರ್ಗರೆಟ್ ಳನ್ನು ದೂರಕ್ಕೆ ಸರಿಸಿದ ಬಳಿಕ ಪೀಟರ್ ಪ್ರಾಣವೇ ಕಳೆದುಕೊಂಡಿತು - ಹತ್ತು ವಾರಗಳ ಸಂಶೋಧನೆಯ ಬಳಿಕ ಮಾರ್ಗರೇಟ್ ಳನ್ನು ಪೀಟರ್ ನಿಂದ ದೂರಕ್ಕೆ ಕಳುಹಿಸಲಾಯಿತು. ಬಳಿಕ ಪೀಟರ್ ನನ್ನು ಫ್ಲೋರಿಡಾದ ಡಾ.ಜಾನ್ ಲಿಲಿ (Dr.John Lily) ಅವರ ನಿಗಾವಣೆಯಲ್ಲಿ ಇರಿಸಲಾಯಿತು. ಆಗ ಕೆಲ ವಾರಗಳಲ್ಲೇ ಡಾಲ್ಫಿನ್ ಹೃದಯ ನುಚ್ಚುಹೂರಾಗಿದೆ ಹಾಗೂ ಮಾರ್ಗರೆಟ್ ನಿಂದ ದೂರ ಉಳಿಯುವ ಪರಿಸ್ಥಿತಿ ಬಂದೊದಗಿದ ಕಾರಣ ಅಸು ನೀಗಿದೆ. ಈ ಕುರಿತು ದಿ ಗಾರ್ಡಿಯನ್ ಗೆ ಸಂದರ್ಶನ ನೀಡಿದ ಮಾರ್ಗರೆಟ್ ಪೀಟರ್ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಡಾ. ಲಿಲಿ ತಮಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು ಎಂದು ಹೇಳಿದ್ದಾಳೆ.