ಪ್ರಸ್ತುತ ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಮೂರನೇ ಅಲೆ ಸೃಷ್ಟಿಯಾಗಿದೆ. ಇದೂ ಸೇರಿದಂತೆ ರಾಷ್ಟ್ರರಾಜಧಾನಿ ದೆಹಲಿ-NCR ನಲ್ಲಿ ಹೆಚ್ಚಾಗುತ್ತಿರುವ ವಾಯುಮಾಲಿನ್ಯ ನಮ್ಮ ಶ್ವಾಸಕೋಶದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಇದು ತುಂಬಾ ಅಪಾಯಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ: ದೇಶ ಹಾಗೂ ವಿದೇಶಗಳಲ್ಲಿ ಕೊರೊನಾ ವೈರಸ್ ಪ್ರಕೋಪ (Corona Pandemic) ಹಾಗೂ ವಾಯುಮಾಲಿನ್ಯದ ಪ್ರಕೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದು ತಮ್ಮ ಶ್ವಾಸಕೋಶದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಾಯುಮಾಲಿನ್ಯ ಕೊರೊನಾ ಪ್ರಕರಣಗಳ ವೇಗವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಏಕೆಂದರೆ ಚಳಿಗಾಲದಲ್ಲಿ ವಾಯುಮಾಲಿನ್ಯದ ಕಾರಣ ಕೆಮ್ಮು ಮತ್ತು ಶೀತದ ಪ್ರಕರಣಗಳು ಹೆಚ್ಚಾಗುತ್ತವೆ. ದೇಶದ ಕೆಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆಮಟ್ಟದ್ದಾಗಿದೆ. ರೋಗ ಹಾಗೂ ವಾಯುಮಾಲಿನ್ಯದಿಂದ ಬಚಾವಾಗಲು ನಮ್ಮ ಶ್ವಾಸಕೋಶವನ್ನು ಶುಚಿಗೊಳಿಸುವುದು ತುಂಬಾ ಆವಶ್ಯಕವಾಗಿದೆ. ಮನೆಯಲ್ಲಿಯೇ ಇದ್ದುಕೊಂಡು ನೀವು ನಿಮ್ಮ ಶ್ವಾಸಕೋಶವನ್ನು ಹೇಗೆ ಶುದ್ಧೀಕರಿಸಬಹುದು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ
ಇದನ್ನು ಓದಿ- ಚಳಿಗಾಲದಲ್ಲಿ ರಾಮಬಾಣ ಮೆಂತ್ಯ, ಇಲ್ಲಿವೆ ಮೆಂತ್ಯದ ಅದ್ಭುತ ಲಾಭಗಳು
ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ದಾಲ್ಚಿನ್ನಿ ಚಹಾ ಬಹಳ ಸಹಾಯಕವಾಗಿದೆ. ದಾಲ್ಚಿನ್ನಿ ನೀರಿನಲ್ಲಿ ಕುದಿಸಿ ಕುಡಿಯಿರಿ. ಆದರೆ ಒಂದು ಲೋಟ ನೀರು ಅರ್ಧದಷ್ಟು ಉಳಿಯುವವರೆಗೆ ನೀವು ದಾಲ್ಚಿನ್ನಿಯನ್ನು ಕುದಿಸಬೇಕು.
ಪ್ರತಿದಿನ ಪ್ರಾಣಾಯಾಮ ಮಾಡುವುದು ಶ್ವಾಸಕೋಶಕ್ಕೆ ಪ್ರಯೋಜನಕಾರಿ. ಈ ಮೂಲಕ, ಶ್ವಾಸಕೋಶದ ಗಾಳಿಯ ಮಾರ್ಗದ ಆರೋಗ್ಯ ಉತ್ತಮವಾಗಿರುತ್ತದೆ. ಏಕೆಂದರೆ ಹಾಗೆ ಮಾಡುವಾಗ ಎದೆಯಲ್ಲಿನ ಲೋಳೆಯು ಹೆಪ್ಪುಗಟ್ಟುವುದಿಲ್ಲ. ಮೂಗಿನಲ್ಲಿ ರೋಸ್ಮರಿ ಎಣ್ಣೆಯನ್ನು ಒಂದು ಹನಿ ಹಾಕಿ ಪ್ರಾಣಾಯಾಮ ಮಾಡುವುದರಿಂದ ಉತ್ತಮ ಲಾಭ ಸಿಗುತ್ತದೆ.
ಚಳಿಗಾಲದಲ್ಲಿ ಶುಂಠಿ ಚಹಾಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಶುಂಠಿ ಚಹಾದ ರುಚಿ ಬೇರೆ ವಿಷಯ. ಶುಂಠಿ ಚಹಾ ನಮ್ಮ ಶ್ವಾಸಕೋಶಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಶುಂಠಿ ಚಹಾದಲ್ಲಿರುವ ಉರಿಯೂತದ ಅಂಶಗಳು, ಉಸಿರಾಟದ ಪ್ರದೇಶದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತವೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು ಮತ್ತು ಬೀಟಾ ಕ್ಯಾರೋಟಿನ್ ನಂತಹ ಔಷಧೀಯ ಪದಾರ್ಥಗಳನ್ನು ಸಹ ಹೊಂದಿದೆ. ನೀವು ಪ್ರತಿದಿನ ಶುಂಠಿ ಚಹಾವನ್ನು ಕುಡಿಯುವ ಮೂಲಕ ಶ್ವಾಸಕೋಶವನ್ನು ಸ್ವಚ್ಛಗೊಳಿಸಬಹುದು.
ಶ್ವಾಸಕೋಶವನ್ನು ಶುದ್ಧೀಕರಿಸಲು ಆವಿ ಚಿಕಿತ್ಸೆಯು ಅತ್ಯುತ್ತಮ ವಿಧಾನವಾಗಿದೆ. ನೀರಿನ ಆವಿಯಿಂದ ಮುಚ್ಚಲ್ಪಟ್ಟ ಗಾಳಿಯ ಹಾದಿಗಳು ಸಹ ತೆರೆದುಕೊಳ್ಳುತ್ತವೆ, ಜೊತೆಗೆ ಲೋಳೆಯು ಶ್ವಾಸಕೋಶದಿಂದ ಕಣ್ಮರೆಯಾಗುತ್ತದೆ.
ವಾಲ್ನಟ್ ಶ್ವಾಸಕೋಶದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿ ಬಹಳಷ್ಟು ಒಮೆಗಾ -3 ಫ್ಯಾಟಿ ಆಸಿಡ್ ಗಳಿವೆ. ಪ್ರತಿದಿನ ಒಂದು ಮುಷ್ಟಿಯಷ್ಟು ವಾಲ್ನಟ್ ತಿನ್ನುವುದರಿಂದ ಶ್ವಾಸಕೋಶದ ತೊಂದರೆಗಳು ನಿವಾರಣೆಯಾಗುತ್ತವೆ. ಬೀನ್ಸ್ ದೇಹಕ್ಕೆ ಅಗತ್ಯವಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದ., ಆದ್ದರಿಂದ ಇದನ್ನು ಆಹಾರದಲ್ಲಿ ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.