LIC: ಕೇವಲ ಒಂದೇ ಬಾರಿ Premium ಪಾವತಿಸಿ ಜೀವನ ಪೂರ್ತಿ 20,000 Pension ಪಡೆಯಿರಿ

ಹೊಸದಾಗಿ ಜಾರಿಗೆ ತರಲಾಗಿರುವ ಜೀವನ ಅಕ್ಷಯ್ VII, LICಯ ಇಮ್ಮಿಡೆಟ್ ಆನ್ಯೂಟಿ ಪ್ಲಾನ್ (Immediate Annuity Plan) ಆಗಿದೆ. ಜೀವನ ಶಾಂತಿ ಒಂದು ಡಿಫರ್ಡ್ ಸ್ಥಗಿತ ಅನ್ಯೂಟಿ ಪ್ಲಾನ್ ((Deferred annuity plan) ಆಗಿ ಮಾರ್ಪಟ್ಟಿದೆ.

  • Nov 27, 2020, 13:09 PM IST

ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಜೀವನ ವಿಮಾ ನಿಗಮ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಫ್ಲಾಗ್ ಶಿಪ್ ಅನ್ಯೂಟಿ ಪ್ಲಾನ್ ಜೀವನ ಅಕ್ಷಯ್ ಯೋಜನೆಯನ್ನು ಪುನಃ ಪ್ರಾರಂಭಿಸಿದೆ. ಇದೊಂದು ಪಿಂಚಣಿ ಯೋಜನೆಯಾಗಿದೆ. ಕೆಲ ತಿಂಗಳ ಹಿಂದೆಯೇ ಭಾರತೀಯ ಜೀವ ವಿಮಾ ನಿಗಮ ಜೀವನ ಶಾಂತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಜೀವನ ಅಕ್ಷಯ ಯೋಜನೆಯನ್ನು ಹಿಂದಕ್ಕೆ ಪಡೆದಿತ್ತು. ಆದರೆ ಸಂಸ್ಥೆ ಇದೀಗ ಮತ್ತೆ ಈ ಯೋಜನೆಯನ್ನು ಜಾರಿಗೆ ತಂದಿದೆ.

 

ಇದನ್ನು ಓದಿ- ನಾಮಿನಿ ಮಾಡುವುದು ಏಕೆ ಮುಖ್ಯ? ಅದರ ನಿಯಮಗಳ ಬಗ್ಗೆ ನಿಮಗೆಷ್ಟು ಗೊತ್ತು?

1 /5

ಹೊಸದಾಗಿ ಜಾರಿಗೆ ತರಲಾಗಿರುವ ಜೀವನ ಅಕ್ಷಯ್ VII, LICಯ ಇಮ್ಮಿಡೆಟ್ ಆನ್ಯೂಟಿ ಪ್ಲಾನ್ (Immediate Annuity Plan) ಆಗಿದೆ. ಜೀವನ ಶಾಂತಿ ಒಂದು ಡಿಫರ್ಡ್ ಸ್ಥಗಿತ ಅನ್ಯೂಟಿ ಪ್ಲಾನ್ ((Deferred annuity plan) ಆಗಿ ಮಾರ್ಪಟ್ಟಿದೆ. ಹೀಗಾಗಿ ಜೀವನ ಶಾಂತಿ ಯೋಜನೆಯನ್ನು ಕೂಡ ಇದೀಗ ತಿದ್ದುಪಡಿ ಮಾಡಲಾಗಿದೆ. ಇದರಿಂದ ಜೀವನ ಅಕ್ಷಯ ಯೋಜನೆಯೊಂದಿಗೆ ಇದರ ಹೋಲಿಕೆ ನಿಲ್ಲಲಿದೆ.

2 /5

LICಯ ಜೀವನ ಅಕ್ಷಯ ಪಾಲಸಿಯಲ್ಲಿ ನೀವು ಕೇವಲ ಬಾರಿ ಪ್ರೇಮಿಯಂ ಪಾವತಿಸಿ ಪ್ರತಿ ತಿಂಗಳು 20 ಸಾವಿರ ರೂ ಪಿಂಚಣಿ ಪಡೆಯಬಹುದು. LICಯ ಜೀವನ ಅಕ್ಷಯ ಯೋಜನೆಯಲ್ಲಿ ಗ್ರಾಹಕರು ಒಂದೇ ಬಾರಿಗೆ ಹಣ ಪಾವತಿಸಿ ಅನ್ಯೂಟಿಯ ಒಟ್ಟು 10 ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಅವಕಾಶ ಇದೆ. ಅಂದರೆ ಜೀವನ ಶಾಂತಿಯ ಹೊರತುಪಡಿಸಿ A-J ಆಯ್ಕೆಗಳು ಕೇವಲ LICಯ ಜೀವನ ಅಕ್ಷಯ ಸ್ಕೀಮ್ ನಲ್ಲಿ ಸಿಗಲಿವೆ.

3 /5

ಯಾವುದೇ ಭಾರತೀಯ ನಾಗರಿಕರು ಈ ಪಾಲಸಿಯನ್ನು ಪಡೆಯಬಹುದು. ಜೀವನ ಅಕ್ಷಯ ಪಾಲಸಿ ಪಡೆಯಬಹುದು. ಇದರಲ್ಲಿ ನೀವು ಕೇವಲ ಒಂದು ಲಕ್ಷ ಹೂಡಿಕೆ ಮಾಡಿಯೂ ಕೂಡ ಪಿಂಚಣಿಯ ಲಾಭ ಪಡೆಯಬಹುದು. ಆದ್ರೆ, ಮಾಸಿಕ 20 ಸಾವಿರ ಪಿಂಚಣಿ ಪಡೆಯಲು ಈವು ಹೆಚ್ಚಿನ ಹೂಡಿಕೆ ಮಾಡಬೇಕು. ಈ ಯೋಜನೆಯಲ್ಲಿ ಅತ್ಯಧಿಕ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಜೀವನ ಅಕ್ಷಯ ಯೋಜನೆಯ ಅಡಿ 30 ರಿಂದ 85 ವರ್ಷ ವಯಸ್ಸಿನ ವ್ಯಕ್ತಿಗಳು ಪಾಲಸಿ ಪಡೆಯಬಹುದು.

4 /5

ಜೀವನ್ ಅಕ್ಷಯ್ ಪಾಲಿಸಿಯಲ್ಲಿ ನಿಮಗೆ ಒಟ್ಟು 10 ಆಯ್ಕೆಗಳನ್ನು ಸಿಗಲಿವೆ. ಇವುಗಳಲ್ಲಿ ಒಂದು ಆಯ್ಕೆ (A) ಇದ್ದು, ಇದರ ಅಡಿಯಲ್ಲಿ ನೀವು ಪ್ರತಿ ತಿಂಗಳು ಒಂದೇ ಪ್ರೀಮಿಯಂನಲ್ಲಿ 20 ಸಾವಿರ ರೂಪಾಯಿಗಳ ಪಿಂಚಣಿ ಪಡೆಯಬಹುದು.ನೀವು ಪ್ರತಿ ತಿಂಗಳು ಈ ಪಿಂಚಣಿ ಬಯಸಿದರೆ, ನೀವು ತಿಂಗಳಿಗೆ ಪಿಂಚಣಿ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದಕ್ಕಾಗಿ, ನೀವು ಒಂದು ಸಮಯದಲ್ಲಿ 40,72,000 ರೂ. ಹೂಡಿಕೆ ಮಾಡಬೇಕಾಗುತ್ತದೆ, ಅದರ ನಂತರ ನಿಮ್ಮ ಮಾಸಿಕ ಪಿಂಚಣಿ 20 ಸಾವಿರ ರೂ. ಸಿಗುತ್ತದೆ ನೀವು ಈ ಪಾಲಸಿ ಆಯ್ಕೆ ಮತ್ತು ಆಶ್ವಾಸಿತ ಆಯ್ಕೆಯನ್ನು ಆಯ್ದುಕೊಂಡಿದ್ದರೆ, ಒಂದು ಒಂದೇ ಬಾರಿಗೆ 40.72 ಲಕ್ಷ ಪ್ರಿಮಿಯಂ ಪಾವತಿಸಬೇಕು. ಇದರ ನಂತರ ನಿಮ್ಮ ಮಾಸಿಕ ಪಿಂಚಣಿ ಬರಲು ಆರಂಭಿಸಲಿದೆ. ನಿಮ್ಮ ಒಟ್ಟು ಮಾಸಿಕ ಪಿಂಚಣಿ ರೂ.20,967 ರೂ.ಇರಲಿದೆ.

5 /5

ಈ ಯೋಜನೆಯಲ್ಲಿ ನೀವು ಈ ಪ್ರೇಮಿಯಂ ಅನ್ನು ಮೂರು, ಆರು ಅಥವಾ 12 ತಿಂಗಳ ಆಧಾರದ ಮೇಲೂ ಪಾವತಿಸಬಹುದು. ವಾರ್ಷಿಕವಾಗಿ ಕಂತು ಪಾವತಿಸುತ್ತಿದ್ದರೆ, ನೀವು 2,60,000 ರೂ. ಪಾವತಿಸಬೇಕು, ಆರು ತಿಂಗಳ ಕಂತಿನಲ್ಲಿ ನೀವು 1,27,000 ಪಾವತಿಸಬೇಕು. ಮೂರು ತಿಂಗಳ ಕಂತಿನಲ್ಲಿ ನೀವು 63,250 ಪಾವತಿಸಬೇಕು. ಆ ಬಳಿಕ ನಿಮಗೆ 20,967 ರೂ. ಪಿಂಚಣಿ ಸಿಗಲಿದೆ. ಈ ಪಾಲಸಿಯನ್ನು ನೀವು ತೆಗೆದುಕೊಂಡ ಆರಂಭದಿಂದಲೇ ನಿಮಗೆ ಅನ್ಯೂಟಿ ದರಗಳ ಗ್ಯಾರಂಟಿ ನೀಡಲಾಗುತ್ತದೆ. ಪಾಲಸಿದಾರರಿಗೆ ಜೀವನ ಪೂರ್ತಿ ಅನ್ಯೂಟಿ ನೀಡಲಾಗುತ್ತದೆ. ಇದನ್ನು ನೀವು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿಯೂ ಕೂಡ ಪಡೆಯಬಹುದು.