NASA ಬಾಹ್ಯಾಕಾಶದಲ್ಲಿ ದುಬಾರಿ ಟಾಯ್ಲೆಟ್ ಗಳನ್ನು ಕಳುಹಿಸುತ್ತಿದೆ.ಈ ವರ್ಷ ಚಂದ್ರನ ಮೇಲೆ ಸುಮಾರು 174 ಕೋಟಿ ರೂ. ಮೌಲ್ಯದ ಟಾಯ್ಲೆಟ್ ಕಳುಹಿಸುತ್ತಿದೆ.
ನವದೆಹಲಿ: ಬಾಹ್ಯಾಕಾಶದಲ್ಲಿ ಹೇಗೆ ಹಣ ಖರ್ಚು ಮಾಡಬೇಕು ಎಂದು ನೀವು ಆಲೋಚಿಸುತ್ತಿದ್ದೀರಾ? ಆದರೆ ಬಾಹ್ಯಾಕಾಶದಲ್ಲಿ NASA ಖರ್ಚುಗಳನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಲಿದೆ. ಬಾಹ್ಯಾಕಾಶದಲ್ಲಿ ಶೌಚಾಲಯ ನಿರ್ಮಿಸಲು NASA 14 ಮಿಲಿಯನ್ ಪೌಂಡ್ ಅಥವಾ 86 1,86,48,000 ಖರ್ಚು ಮಾಡುತ್ತಿದೆ.
ಇದನ್ನು ಓದಿ- ಹೊಸ ಆಕಾಶಗಂಗೆಯನ್ನು ಪತ್ತೆಹಚ್ಚಿದ ಭಾರತೀಯ ವಿಜ್ಞಾನಿಗಳು, ಭೇಷ್ ಎಂದ NASA
ಹೊಸ ಡಿಸೈನ್ ನಿಂದ ತಯಾರಿಸಲಾಗಿರುವ ಈ ಟಾಯ್ಲೆಟ್ ಅನ್ನು ಚಂದ್ರನ ಮೇಲೆ ಕಳುಹಿಸುವುದಕ್ಕೂ ಮುನ್ನ ಅದನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪರೀಕ್ಷೆಗಾಗಿ NASA ಕಳುಹಿಸುತ್ತಿದೆ. ಇದನ್ನು ಓದಿ-ಎಚ್ಚರ! ಭೂಮಿ ಬಗ್ಗೆ ಹೊಸ ಭವಿಷ್ಯ ನುಡಿದ ನಾಸಾ
ಹೊಸ ಟಾಯ್ಲೆಟ್ ನ ವಿನ್ಯಾಸ ಟೈಟೇನಿಯಂ ವಿನ್ಯಾಸವಾಗಿದ್ದು, ಇದು ಮೊದಲಿನ ಟಾಯ್ಲೆಟ್ ಗಿಂತ ಮಹಿಳೆಯರಿಗೆ ಮತ್ತಷ್ಟು ಉತ್ತಮವಾಗಿದೆ. ಇದನ್ನು ಓದಿ-ಮಂಗಳನ ಅಂಗಳದಲ್ಲಿ ಮಾನವನ ಅಸ್ತಿತ್ವ ಹುಡುಕಾಟಕ್ಕೆ ಕೌಂಟ್ ಡೌನ್ ಆರಂಭ, NASAದಿಂದ ಸಿದ್ಧತೆ
NASA ತಯಾರಿಸುತ್ತಿರುವ ಒಂದು ಬಾಹ್ಯಾಕಾಶ ಶೌಚಾಲಯದ ಬೆಲೆ 19 ಮಿಲಿಯನ್ ಡಾಲರ್ ಆಗಿದೆ. ಈ ವರ್ಷ ಹೊಸ ಟಾಯ್ಲೆಟ್ ಒಂದನ್ನು ವಿನ್ಯಾಸಗೊಳಿಸಲಾಗಿದ್ದು, ಇದರ ಬೆಲೆ 23 ಡಾಲರ್ ಅಂದರೆ 174 ಕೋಟಿ ರೂ.ಗಳಾಗಿದೆ. ಈ ಟಾಯ್ಲೆಟ್ ಅನ್ನು ಚಂದ್ರನ ಮೇಲೆ ಕಳುಹಿಸಲಾಗುತ್ತಿದೆ. ಇದನ್ನು ಓದಿ-NASA ಬಿಡುಗಡೆ ಮಾಡಿರುವ ಮಂಗಳ ಗ್ರಹದ ಹೊಸ ಚಿತ್ರದಲ್ಲಿ ಏಲಿಯನ್!
ಈ ಟಾಯ್ಲೆಟ್ ಇಷ್ಟೊಂದು ದುಬಾರಿ ಏಕೆ? ಎಂಬ ಪ್ರಶ್ನೆ ನಿಮಗೂ ಕಾಡಬಹುದು. ಬಾಹ್ಯಾಕಾಶ ಟಾಯ್ಲೆಟ್ ಸಾಮಾನ್ಯ ಟಾಯ್ಲೆಟ್ ನಂತೆ ಇರುವುದಿಲ್ಲ. ಇದೊಂದು ಸೂಪರ್ ಕ್ಲೀನರ್ ವ್ಯಾಕ್ಯೂಮ್ ಕ್ಲೀನರ್ ನಂತೆ ಇರುತ್ತದೆ. ಇದನ್ನು ಓದಿ- ಹೊಸ ಬ್ರಹ್ಮಾಂಡ ಪತ್ತೆ ಹಚ್ಚಿನ NASAದ ANITA, ಇಲ್ಲಿ ಸಮಯ ಹಿಮ್ಮುಖವಾಗಿ ಚಲಿಸುತ್ತಂತೆ
ಈ ಟಾಯ್ಲೆಟ್ ನಲ್ಲಿ ಅತ್ಯಂತ ದುಬಾರಿ ತಂತ್ರಜ್ಞಾನದ ಪ್ರಯೋಗ ನಡೆಸಲಾಗಿದೆ. ಹೊಸ ತಂತ್ರಜ್ಞಾನದ ಅಡಿ ವಿಶೇಷ ರೂಪದಲ್ಲಿ ಪೈಪ್ ಹಾಗೂ ವ್ಯಾಕ್ಯೂಮ್ ಟ್ಯೂಬ್ ನ ಪ್ರಯೋಗ ಮಾಡಲಾಗುತ್ತದೆ. ಇದರಲ್ಲಿ ಬಳಕೆಯಾಗುವ ನೀರನ್ನು ರೀಸೈಕಲ್ ಮಾಡಲಾಗುತ್ತದೆ. ಹಾಗೂ ವೆಸ್ಟ್ ಅನ್ನು ಸಂಗ್ರಹಿಸಿ ಇಡಲಾಗುತ್ತದೆ. ಇದನ್ನು ಓದಿ - ಬಾಹ್ಯಾಕಾಶದಲ್ಲಿ Shooting ಕೈಗೊಳ್ಳುವ ಮೊದಲ ನಟ Tom Cruise: NASA