WhatsApp Alert! ಪ್ರಸ್ತುತ ಭಾರತದಲ್ಲಿ ಸುಮಾರು 40 ಕೋಟಿ ಜನರು WhatsApp ಬಳಕೆ ಮಾಡುತ್ತಾರೆ. ಆದರೆ ಇವರಲ್ಲಿ ಬಹುತೇಕರಿಗೆ ತಾವು ಸುರಕ್ಷಿತ ಹಾಗೂ ಖಾಸಗಿಯಾಗಿ ಪರಿಗಣಿಸುವ ಈ ಚಾಟ್ ಒಂದೊಮ್ಮೆ ಅವರ ಜೀವನದ ಎಲ್ಲಾ ರಹಸ್ಯಗಳನ್ನು ಜಗತ್ತಿನ ಮುಂದೆ ಬಹಿರಂಗಪಡಿಸಬಹುದು ಎಂಬುದು ಬಹುಶಃ ತಿಳಿದಿಲ್ಲ. ಇದರಿಂದ ಪಾರಾಗಲು ಏನು ಮಾಡಬೇಕು ಎಂಬುದನೊಮ್ಮೆ ತಿಳಿಯೋಣ ಬನ್ನಿ,
ನವದೆಹಲಿ: WhatsApp Alert...! ವಾಟ್ಸ್ ಆಪ್ ಇಂದು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿದೆ. ಬಂಧು-ಮಿತ್ರರಿಂದ ಹಿಡಿದು ಕಚೇರಿಯ ಎಲ್ಲಾ ರೀತಿಯ ಸಂವಹನಕ್ಕೆ ಇಂದು ವಾಟ್ಸ್ ಆಪ್ ಬಳಕೆಯಾಗುತ್ತಿದೆ. ಇಂತಹುದರಲ್ಲಿ ನಾವು ನಮ್ಮ ಪ್ರತಿಯೊಂದು ಚಾಟ್ ಅನ್ನು ಗೌಪ್ಯವಾಗಿರಿಸುವ ಅನಿವಾರ್ಯತೆ ಎದುರಾಗಿದೆ. ಇಂದು ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತಿದ್ದು. ಈ ಸಲಹೆಗಳನ್ನು ಬಳಸಿ ನೀವೂ ಕೂಡ ನಿಮ್ಮ ವಾಟ್ಸ್ ಆಪ್ ಚಾಟ್ ಅನ್ನು ಸುರಕ್ಷಿತವಾಗಿಸಬಹುದು.
ಇದನ್ನು ಓದಿ- WhatsApp ಮೇಲೆ ಬಂದ ಈ ಲಿಂಕ್ ಮೇಲೆ ಕ್ಲಿಕ್ಕಿಸಬೇಡಿ, ಸರ್ಕಾರ ಜಾರಿಗೊಳಿಸಿದೆ ಈ Alert...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನಿಮ್ಮ ವಾಟ್ಸ್ ಆಪ್ ಚಾಟ್ ಗಳನ್ನು ಸುರಕ್ಷಿತಗೊಳಿಸುವ ಒಂದು ಪ್ರಮುಖ ಮಾರ್ಗವೆಂದರೆ ಅದು two-factor authentication. ಇದನ್ನು ನೀವು ಸಕ್ರೀಯಗೊಳಿಸಬಹುದು. ಇದಕ್ಕಾಗಿ ನೀವು ನಿಮ್ಮ ವಾಟ್ಸ್ ಆಪ್ ಖಾತೆಗೆ ಭೇಟಿ ನೀಡಿ ಬಲ ಭಾಗದಲ್ಲಿ ನೀಡಲಾಗಿರುವ ಮೂರು ಚುಕ್ಕೆಗಳ(:) ಮೇಲೆ ಟ್ಯಾಪ್ ಮಾಡಿ. ಬಳಿಕ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ. ಅಲ್ಲಿ ನಿಮಗೆ two-factor authentication ಆಯ್ಕೆ ಸಿಗಲಿದೆ.
ಒಂದೊಮ್ಮೆ ಈ ಆಯ್ಕೆ ದೊರೆತ ಬಳಿಕ ಅದನ್ನು ನೀವು ಸಕ್ರೀಯಗೊಳಿಸಬೇಕು. ಇದನ್ನು ಆಯ್ಕೆ ಮಾಡಿದಾಗ ನಿಮ್ಮ ಮೊಬೈಲ್ ಸಂಖ್ಯೆಗೆ 6 ಅಂಕಿಗಳ ಪಿನ್ ಬರಲಿದೆ. ಈ ಪಿನ್ ಬಳಸಿ ನೀವು ಈ ಆಯ್ಕೆಯನ್ನು ಸಕ್ರೀಯಗೊಳಿಸಬಹುದು. ಇದರ ಜೊತೆಗೆ ನೀವು ನಿಮ್ಮ ಇ-ಮೇಲ್ ಅನ್ನು ಕೂಡ ಬಳಸಬಹುದು. ಈಗ ನಿಮ್ಮ ಮೊಬೈಲ್ ಬೇರೆಯವರ ಕೈ ಸೇರಿದರೂ ಕೂಡ ನಿಮ್ಮ ದತ್ತಾಂಶ ಅಸುರಕ್ಷಿತತೆಯ ಸಾಧ್ಯತೆ ಕಡಿಮೆಯಾಗುತ್ತದೆ.
ಇದಕ್ಕೂ ಮೊದಲು ವಾಟ್ಸ್ ಆಪ್ ನಲ್ಲಿ ಯಾವುದೇ ರೀತಿಯ ಸಿಕ್ಯೋರಿಟಿ ಆಪ್ಶನ್ ಇರಲಿಲ್ಲ. ಇದೇ ಕಾರಣದಿಂದ ಯಾರು ಬೇಕಾದರೂ ನಿಮ್ಮ ಖಾತೆಗೆ ಎಂಟ್ರಿ ನೀಡಿ ನಿಮ್ಮ ಚಾಟ್ ಅನ್ನು ನೋಡಬಹುದಾಗಿತ್ತು. ಆದರೆ, ಇದೀಗ ನಿಮ್ಮ ಬಳಿ ಖಾತೆ ಲಾಕ್ ಮಾಡುವ ಆಪ್ಶನ್ ಕೂಡ ಇದೆ. ಇದೀಗ ನೀವು ನಿಮ್ಮ ಫೋನ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ ಪ್ರವೈಸಿ ಆಪ್ಶನ್ ನಲ್ಲಿ ಈ ಆಯ್ಕೆಯನ್ನು ಸಕ್ರೀಯಗೊಳಿಸಬಹುದು.
ಇದಲ್ಲದೆ ನೀವು ನಿಮ್ಮ ವಾಟ್ಸ್ ಆಪ್ ಖಾತೆಯಲ್ಲಿಯೂ ಕೂಡ ಫಿಂಗರ್ ಪ್ರಿಂಟ್ ಲಾಕ್ ಅಳವಡಿಸಬಹುದು. ಇದಕ್ಕಾಗಿ ನೀವು ವಾಟ್ಸ್ ಆಪ್ ನ ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ. ಬಳಿಕ ಅಲ್ಲಿರುವ ಪ್ರೈವೆಸಿ ಆಪ್ಶನ್ ನ ಕೆಳಭಾಗದಲ್ಲಿ ನಿಮಗೆ Fingerprint Lock ಕಾಣಿಸಿಕೊಳ್ಳಲಿದೆ. ಇದನ್ನು ಕೂಡ ನೀವು ಸಕ್ರೀಯಗೊಳಿಸಬಹುದು. ಇತರರಿಂದ ನೀವು ನಿಮ್ಮ ಚಾಟ್ ಅನ್ನು ಸುರಕ್ಷಿತಗೊಳಿಸುವುದೇ ಈ ಆಯ್ಕೆಗಳ ಪ್ರಮುಖ ಉದ್ದೇಶವಾಗಿದೆ.