ವಿಶ್ವದ ಅತ್ಯಂತ ದುಬಾರಿ Bag ಲಾಂಚ್, ಈ ಬೆಲೆಯಲ್ಲಿ ನೀವು 53 ಆಡಿ / 1060 ಮಾರುತಿ ಕಾರ್ ಖರೀದಿಸಬಹುದು

ಇಟಲಿಯ ಐಷಾರಾಮಿ ಬ್ರಾಂಡ್ ಬೋರಿನಿ ಮಿಲನೇಸಿ ವಿಶ್ವದ ಅತ್ಯಂತ ದುಬಾರಿ ವ್ಯಾನಿಟಿ ಬ್ಯಾಗ್ ಬಿಡುಗಡೆ ಮಾಡಿದೆ.

  • Nov 29, 2020, 19:59 PM IST

ನವದೆಹಲಿ: ಇಟಲಿಯ ಐಷಾರಾಮಿ ಬ್ರಾಂಡ್ ಬೋರಿನಿ ಮಿಲನೇಸಿ ವಿಶ್ವದ ಅತ್ಯಂತ ದುಬಾರಿ ವ್ಯಾನಿಟಿ ಬ್ಯಾಗ್ ಬಿಡುಗಡೆ ಮಾಡಿದೆ. ಇದರ ಬೆಲೆ ಎಷ್ಟು ಹೆಚ್ಚಾಗಿದೆ ಎಂದರೆ ನೀವು ಈ ಬೆಲೆಯಲ್ಲಿ ನೀವು 53 ಆಡಿ ಕ್ಯೂ 8 ಕಾರು ಅಥವಾ 1060 ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಖರೀದಿಸಬಹುದು.

 

ಇದನ್ನು ಓದಿ-  Anti-Ageing: ಈ ದೇಶದಲ್ಲಿ ಮುಪ್ಪಾಗಿರುವವರನ್ನು ಮತ್ತೆ ಯುವಕರನ್ನಾಗಿಸುತ್ತಾರೆ

1 /5

ಇಟಾಲಿಯನ್ ಐಷಾರಾಮಿ ಬ್ರಾಂಡ್ ಬೋರಿನಿ ಮಿಲನೇಸಿ ಈ ವ್ಯಾನಿಟಿ ಬ್ಯಾಗ್ 6 ಮಿಲಿಯನ್ ಯುರೋಗಳಷ್ಟು ಬೆಲೆಗೆ ಬಿಡುಗಡೆ ಮಾಡಿದೆ. ಅಂದರೆ ಸುಮಾರು 53 ಕೋಟಿ ರೂಪಾಯಿಗಳು, ಇದು ವಿಶ್ವದ ಅತ್ಯಂತ ದುಬಾರಿ ವ್ಯಾನಿಟಿ ಬ್ಯಾಗ್ ಆಗಿದೆ.

2 /5

ಈ ವ್ಯಾನಿಟಿ ಬ್ಯಾಗ್ ಬಿಡುಗಡೆ ಮಾಡಿರುವ Boarini Milanesi, ಈ ಬ್ಯಾಗ್ ಮಾರಾಟದಿಂದ ಸಂಗ್ರಹವಾಗುವ ಹಣವನ್ನು ಸಮುದ್ರ ಸ್ವಚ್ಛಗೊಳಿಸಲು ದಾನ ಮಾಡುವುದಾಗಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೊಂಡಿದೆ.

3 /5

ಬೋರಿನಿ ಮಿಲನೆಸಿ ಬಿಡುಗಡೆ ಮಾಡಿರುವ ಈ ಬ್ಯಾಗ್ ಬೆಲೆಯಲ್ಲಿ ನೀವು 53 Audi Q8 ಅಥವಾ 1060 ಮಾರುತಿ ವ್ಯಾಗನ್ R ಖರೀದಿಸಬಹುದು. ಆಡಿ ಕ್ಯೂ8 ಕಾರಿನ ಬೆಲೆ ಸುಮಾರು 1 ಕೋಟಿ ರೂ. ಆಗಿದ್ದು, ವ್ಯಾಗನ್ ಆರ್ ಬೆಲೆ ಸುಮಾರು 5 ಲಕ್ಷಗಳಷ್ಟಾಗಿದೆ.

4 /5

ಸಮುದ್ರವನ್ನು ಸ್ವಚ್ಛಗೊಳಿಸುವ ಅಭಿಯಾನದ ಅಡಿ ಈ ಬ್ಯಾಗ್ ತಯಾರಿಸಲಾಗಿದೆ. ಬ್ಲೂ ಕಲರ್ ಬೇಸ್ ನ ಈ ಬ್ಯಾಗ್ ತುಂಬಾ ಹೊಳಪಿನಿಂದ ಕೂಡಿದೆ. ಬ್ಯಾಗ್ ನಲ್ಲಿ 130 ಕ್ಯಾರೆಟ್ ವಜ್ರಗಳು ಹಾಗೂ ಬಿಳಿ ಬಂಗಾರದ 10 ಚಿಟ್ಟೆಗಳನ್ನು ಜೋಡಿಸಲಾಗಿದೆ. ಈ ಬ್ಯಾಗ್ ತಯಾರಿಸಲು 1000 ಗಂಟೆ ಕಾಲಾವಕಾಶ ತಗುಲಿದೆ.

5 /5

ಇದಕ್ಕೂ ಮೊದಲು ಬೋರಿನಿ ಮಿಲನೆಸಿ ಬಿಡುಗಡೆ ಮಾಡಿದ್ದ ಹಾರ್ಟ್ ಆಕಾರದ ಬ್ಯಾಗ್ ಕೂಡ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬ್ಯಾಗ್ 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿತ್ತು ಹಾಗೂ ಅದರಲ್ಲಿ 4517 ವಜ್ರಗಲಿದ್ದವು. ಈ ಬ್ಯಾಗ್ ನಲ್ಲಿ 105 ಹಳದಿ, 56 ಗುಲಾಬಿ ಹಾಗೂ 4356 ಬಣ್ಣ ರಹಿತ ವಜ್ರಗಳನ್ನು ಅಳವಡಿಸಲಾಗಿತ್ತು. ಈ ಬ್ಯಾಗ್ ಬೆಲೆ 2.37 ಮಿಲಿಯನ್ ಯುರೋ ಅಂದರೆ ಸುಮಾರು 21 ಕೋಟಿ ರೂ.ಗಳಷ್ಟು ಆಗಿತ್ತು. ಈ ಬ್ಯಾಗ್ ತಯಾರಿಸಲು ಒಟ್ಟು 8 ಕಾರ್ಮಿಕರು ಸುಮಾರು 8800 ಗಂಟೆಗೂ ಅಧಿಕ ಕಾಲ ಶ್ರಮಿಸಿದ್ದರು.