Best Age to Get Married: ಮದುವೆಯಾಗುವ ಮನಸ್ಸು ಇದ್ದರೂ ಒಳ್ಳೆಯ ಕೆಲಸ, ಸ್ಥಾನಮಾನ ಸಿಗುವವರೆಗೂ ಕಾಯುತ್ತಾರೆ. ಹೀಗಾಗಿ 35 ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸುತ್ತಾರೆ.
What is the "Right" Age to Get Married?: ಯಾವಾಗ ಮದುವೆಯಾಗಬೇಕು ಅನ್ನೋದು ಪ್ರತಿಯೊಬ್ಬರಿಗೂ ಕಾಡುವ ಯಕ್ಷ ಪ್ರಶ್ನೆಯಾಗಿರುತ್ತದೆ. ಇದು ಅವರವರ ವೈಯಕ್ತಿಕ ನಿರ್ಧಾರವಾದರೂ ಸೂಕ್ತ ಸಮಯದಲ್ಲಿ ಮದುವೆಯಾಗುವುದು ಉತ್ತಮ. ಯಾವುದೇ ವ್ಯಕ್ತಿ ಒಂದು ವಯಸ್ಸಿಗೆ ಬಂದ ಮೇಲೆ ಮನೆಯಲ್ಲಿ ಎಲ್ಲರೂ, ಸ್ನೇಹಿತರು, ಆತ್ಮೀಯರು ಮದುವೆಯಾಗುವಂತೆ ಒತ್ತಡ ಹೇರುತ್ತಿರುತ್ತಾರೆ. ಇದು ತುಂಬಾ ಸಾಮಾನ್ಯ ವಿಷಯ. ಹಿಂದಿನ ಕಾಲದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ನಂತರ ಮದುವೆಯ ಬಗ್ಗೆ ಕೆಲವು ಮಾರ್ಗಸೂಚಿಗಳು ಜಾರಿಗೆ ಬಂದವು. ಹೆಣ್ಣಿಗೆ 18ನೇ ವಯಸ್ಸಿಗೆ ಮದುವೆ ಮಾಡಬೇಕು ಅಂತಾ ಪೋಷಕರು ಅಂದುಕೊಂಡಿದ್ದರು. ಆದರೆ ಈಗಿನ ಪೀಳಿಗೆ ಬದಲಾಗಿದೆ. ಇತ್ತೀಚೆಗೆ ಬಹುತೇಕರು 30 ವರ್ಷ ದಾಟಿದರೂ ಅವಿವಾಹಿತರಾಗಿಯೇ ಉಳಿಯುತ್ತಿದ್ದಾರೆ. ಆದರೆ ಮದುವೆಯನ್ನ ಈ ರೀತಿ ತಡಮಾಡುವುದರಿಂದ ಜೀವನದಲ್ಲಿ ದೊಡ್ಡ ದೊಡ್ಡ ಗಂಡಾಂತರಗಳು ಎದುರಾಗುತ್ತವೆ. ಮದುವೆ ತಡವಾಗುವುದರಿಂದ ಆಗುವ ತೊಂದರೆಗಳೇನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಪ್ರಸ್ತುತ ಪೀಳಿಗೆಯ ಜನರು ಹೆಚ್ಚು ವೃತ್ತಿ ಆಧಾರಿತವಾಗಿದ್ದಾರೆ. ಇಂದಿನ ಯುವಕರು ವಿದ್ಯಾಭ್ಯಾಸ ಮತ್ತು ಉದ್ಯೋಗದ ಜೊತೆಗೆ ಬಿಡುವಿಲ್ಲದ ಜೀವನಶೈಲಿಯಿಂದ ಮದುವೆಯನ್ನು ವಿಳಂಬ ಮಾಡುತ್ತಿದ್ದಾರೆ. ಮದುವೆಯಾಗುವ ಮನಸ್ಸು ಇದ್ದರೂ ಒಳ್ಳೆಯ ಕೆಲಸ, ಸ್ಥಾನಮಾನ ಸಿಗುವವರೆಗೂ ಕಾಯುತ್ತಾರೆ. ಹೀಗಾಗಿ 35 ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸುತ್ತಾರೆ. ಮದುವೆಯ ನಂತರ ಸಮಸ್ಯೆಗಳಾಗುವ ಬದಲು, ಮದುವೆಗೆ ಮುನ್ನವೇ ಎಚ್ಚರ ವಹಿಸಿ, ಸೆಟಲ್ ಆದ ನಂತರ ಮದುವೆಯಾಗುವುದು ಒಳ್ಳೆಯದು ಎಂದು ಅನೇಕರು ಭಾವಿಸುತ್ತಾರೆ.
ಹಿಂದಿನ ದಿನಗಳಲ್ಲಿ ತಂದೆ ದುಡಿಯುತ್ತಿದ್ದರೆ ಮಾತ್ರ ಮಕ್ಕಳು ಬದುಕುತ್ತಿದ್ದರು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ತಮ್ಮ ಆಸೆ-ಆಕಾಂಕ್ಷೆ, ಐಷಾರಾಮಿ ಜೀವನಕ್ಕಾಗಿ ಪ್ರತಿಯೊಬ್ಬರೂ ಓಡುತ್ತಿದ್ದಾರೆ. ಪ್ರತಿ ಮನೆಯಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ದೊಡ್ಡ ದೊಡ್ಡ ಜವಾಬ್ದಾರಿಗಳಿವೆ. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ನಂತರ ಮದುವೆಯಾಗಲು ಬಯಸುತ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ, ಆರ್ಥಿಕವಾಗಿ ಬೆಳೆಯುವುದು, ಮನೆ ಕಟ್ಟುವುದು… ಹೀಗೆ ಜವಾಬ್ದಾರಿಗಳ ಮೂಟೆ ಹೆಗಲು ಏರಿರುತ್ತದೆ.
ಇಂದು ಅನೇಕರು ಪ್ರೀತಿಯಲ್ಲಿ ಬಿದ್ದು ಸ್ವಲ್ಪ ಕಾಲ ಒಟ್ಟಿಗೆ ವಾಸಿಸುತ್ತಾರೆ, ನಂತರ ತಮ್ಮ ಸಂಬಂಧವನ್ನು ಕೊನೆಗೊಳಿಸುತ್ತಾರೆ. ಇದರಿಂದ ಅನೇಕರು ಖಿನ್ನತೆಗೆ ಒಳಗಾಗಿ ಮದುವೆಯಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಕಾರಣಗಳಿಂದಲೂ ಮದುವೆ ವಿಳಂಬವಾಗುತ್ತಿದೆ. ಕೆಲವರು ಮದುವೆ, ಸಂಬಂಧ ಮತ್ತು ಸ್ವಾತಂತ್ರ್ಯದ ಭಯದಿಂದ ಮದುವೆಯಿಂದ ದೂರ ಉಳಿಯುತ್ತಿದ್ದಾರೆ. 30 ವರ್ಷಗಳ ನಂತರ ಮದುವೆಯಾಗುವವರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಅಂತಾ ಮನಶ್ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ 30 ವರ್ಷದ ನಂತರ ಪ್ರತಿಯೊಬ್ಬರೂ ಜೀವನದಲ್ಲಿ ಹೇಗೆ ನೆಲೆಸಬೇಕು ಮತ್ತು ಹೇಗೆ ಸಂಪಾದಿಸಬೇಕು ಅನ್ನೋದರ ಕಲ್ಪನೆಯನ್ನು ಹೊಂದಿರುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಹೇಗೆ ಮತ್ತು ಜೀವನವನ್ನು ಆನಂದಿಸುವುದು ಹೇಗೆ? ಅನ್ನೋದರ ತಿಳುವಳಿಕೆ ತಕ್ಕಮಟ್ಟಿಗೆ ಇರುತ್ತದೆ. ನೀವು 25 ವರ್ಷಕ್ಕಿಂತ ಮೊದಲು ಅಥವಾ 25 ವರ್ಷದ ನಂತರ ಮದುವೆಯಾದರೆ ಮಕ್ಕಳನ್ನು ಹೊಂದಲು ಇದು ಸರಿಯಾದ ವಯಸ್ಸು ಎಂದು ಹೇಳಲಾಗುತ್ತದೆ.
ಮದುವೆ ವಿಳಂಬವಾದರೆ ಮಗು ಪ್ರೌಢಾವಸ್ಥೆಯನ್ನು ತಲುಪುವ ಹೊತ್ತಿಗೆ ಪೋಷಕರು ವಯಸ್ಸಾಗುವ ಅಪಾಯವೂ ಇರುತ್ತದೆ. ಇದು ನಿಮಗೆ ಮುಂದೆ ಸಮಸ್ಯೆಯಾಗಬಹುದು. ಮದುವೆ ಅವರವರ ಸ್ವಂತ ನಿರ್ಧಾರವಾಗಿರುತ್ತದೆ. ಇದು ಯಾವುದೇ ವ್ಯಕ್ತಿ ಮಾಡುತ್ತಿರುವ ವೃತ್ತಿ, ಕೆಲಸ ಮತ್ತು ಇತರ ಕಾರ್ಯಗಳನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ತಡವಾಗಿ ಮದುವೆಯಾದರೆ ಈ ತೊಂದರೆಗಳು ಅನಿವಾರ್ಯವೆಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಜೀನವದಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಸರಿಯಾಗಿ ನಿಭಾಯಿಸುವ ಕಲೆ ಹೊಂದಿರುವ ವ್ಯಕ್ತಿ ಈ ಮದುವೆ ಮತ್ತು ಸಂಸಾರವೆಂಬ ಸಾಗರದಲ್ಲಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗುತ್ತಾನೆ. ಇಲ್ಲದಿದ್ದರೆ ಆತನ ಬಾಳು ತುಂಬಾ ಸಂಕಷ್ಟದಿಂದ ಕೂಡಿರುತ್ತದೆ ಅಂತಾ ಅವರು ಸಲಹೆ ನೀಡಿದ್ದಾರೆ.