ಈ ದೈತ್ಯ ಗಾತ್ರದ ಒಂದೊಂದು ಮೀನಿನ ಬೆಲೆ ಬರೋಬ್ಬರಿ 15 ಸಾವಿರದಿಂದ 20 ಸಾವಿರ ರೂ.ಗಳು!
ನವದೆಹಲಿ: ಮಹಾರಾಷ್ಟ್ರದ ರತ್ನಗಿರಿಯ ಮಿರ್ಕರ್ವಾಡ ಬಂದರಿನಲ್ಲಿ ಮೀನುಗಾರರೊಬ್ಬರು ಬೀಸಿದ್ದ ಬಲೆಗೆ ಬರೋಬ್ಬರಿ 500 ಕೆ.ಜಿ. ತೂಕದ 4 ವಘಿಲ್ ಮೀನುಗಳು ಸೋಮವಾರ ಸಿಕ್ಕಿವೆ. ಈ ಮೀನುಗಳನ್ನು ಸಮುದ್ರದಿಂದ ದಡಕ್ಕೆ ತರಲು ಕ್ರೇನ್ ಬಳಸಬೇಕಾಯಿತು. ಸಾಮಾನ್ಯವಾಗಿ ವಘಿಲ್ ಮೀನುಗಳು ಸಾಮಾನ್ಯವಾಗಿ 50-60 ಕೆ.ಜಿ ತೂಗುತ್ತವೆ. ಆದರೆ, ಬಲೆಯಲ್ಲಿ ಸಿಕ್ಕ ನಾಲ್ಕು ಮೀನುಗಳಲ್ಲಿ ಪ್ರತಿಯೊಂದೂ ಬರೋಬ್ಬರಿ 500 ಕೆ.ಜಿ. ತೂಕ ಇದ್ದವು. ದೈತ್ಯ ಗಾತ್ರದ ಮೀನುಗಳು ಸಿಕ್ಕ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ಜನರು ಮೀನುಗಳನ್ನು ನೋಡಲು ಮುಗಿಬಿದ್ದರು. ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ರತ್ನಗಿರಿಯ ಮಿರ್ಕರ್ವಾಡ ಬಂದರಿನಲ್ಲಿ ಬೃಹತ್ ಗಾತ್ರದ ಮಿನುಗು ಬಲೆಗೆ ಬಿದ್ದಿವೆ ಎನ್ನಲಾಗಿದೆ. ಮೀನುಗಾರ ರೌಫ್ ರಫೀಕ್ ಸಾಖರ್ಕರ್ ಎಂಬುವರು ಬಿಸಿದ್ದ ಬಲೆಗೆ ಈ ದೈತ್ಯ ಮೀನುಗಳು ಸಿಕ್ಕಿಬಿದ್ದಿವೆ. ಈ ದೈತ್ಯ ಗಾತ್ರದ ಒಂದೊಂದು ಮೀನಿನ ಬೆಲೆ ಬರೋಬ್ಬರಿ 15 ಸಾವಿರದಿಂದ 20 ಸಾವಿರ ರೂ.ಗಳು!