Photos: ಹೋಂಡಾದ ಐಷಾರಾಮಿ ಕಾರು ಸಿವಿಕ್ ಹೇಗಿದೆ ಗೊತ್ತಾ?

ನೂತನ ಸಿವಿಕ್ ನ ಪೆಟ್ರೋಲ್ ಕಾರಿನ ಬೆಲೆ 17 ಲಕ್ಷ ದಿಂದ 23.3 ಲಕ್ಷ ರೂ. ಇದೆ. ಡೀಸೆಲ್ ಕಾರಿನ ಬೆಲೆ 20.49 ಲಕ್ಷ ರೂ.ಗಳಿದ್ದು ಸ್ಕೋಡಾ ಒಕ್ಟಿವಾ, ಟೊಯೊಟಾ ಕೊರೊಲಾ ಹಾಗೂ ಹ್ಯುಂಡೈ ಎಲಾಂಟ್ರ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಹೊಂಡಾ ಸಿವಿಕ್ ರಸ್ತೆಗಿಳಿಯುತ್ತಿದೆ. ಈಗಾಗಲೇ ಕಾರು ಖರೀದಿಗೆ ಬುಕ್ಕಿಂಗ್ ಆರಂಭವಾಗಿದ್ದು, 5 ಬಣ್ಣಗಳಲ್ಲಿ ಕಾರು ಲಭ್ಯವಿದೆ.  

  • Mar 11, 2019, 17:35 PM IST

ಭಾರತೀಯ ಗ್ರಾಹಕರಿಗೆ ಹೊಂಡಾ ಸಂಸ್ಥೆಯು ತನ್ನ ಲಕ್ಷುರಿ ಕಾರ್ ಸಿವಿಕ್ ಅನ್ನು ಮರು ಬಿಡುಗಡೆ ಮಾಡಿದೆ. 2019ರ ನೂತನ ಸಿವಿಕ್ ಕಾರು 10ನೇ ಜನರೇಶನ್ ಕಾರು ಎಂದೇ ಗುರುತಿಸಿಕೊಂಡಿದ್ದು, ಅದ್ಭುತ ಫೀಚರ್ ಗಳನ್ನು ಹಾಗೂ ತಂತ್ರಜ್ಞಾನಗಳನ್ನು ಒಳಗೊಂಡಿದೆ.  ಡಿಜಿಟಲ್ ಸ್ಪೀಡೊ ಮೀಟರ್, ಆಟೋ ಮ್ಯಾಟಿಕ್ ಕಂಟ್ರೋಲ್, ಹಾಗೂ ಎಲ್ಇಡಿ ಹೆಡ್​​ ಲ್ಯಾಂಪ್​ ಅಳವಡಿಸಲಾಗಿದೆ. ಹತ್ತನೇ ಜನರೇಷನ್​​ಗೆ  ಅನುಗುಣವಾದ 1.6 ಲೀಟರ್ ಟರ್ಬೊಚಾರ್ಜರ್ ಪೆಟ್ರೋಲ್ ಇಂಜಿನ್ ಹೊಂದಿದೆ. ಸಿಕ್ಸ್ ಸ್ಪೀಡ್ ಮ್ಯಾನುವೆಲ್ ಮತ್ತು ಅಟೋ ಮ್ಯಾಟಿಕ್ ಗೇರ್ ಬಾಕ್ಸ್ ಹೊಂಡಾ ಸಿವಿಕ್​ನಲ್ಲಿದೆ.  ABS, EBD ಸೇರಿದಂತೆ ಗರಿಷ್ಠ ಸುರಕ್ಷತೆಯ ಬ್ರೇಕ್, ಕ್ರಾಶ್ ಟೆಸ್ಟ್ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಹೊಂದಿದೆ.  1.8 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್  139 bhp ಪವರ್ ಹಾಗೂ  174 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.  1.6 ಲೀಟರ್  i-DTEC ಡೀಸೆಲ್ ಎಂಜಿನ್ 118 bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
 

1 /8

2 /8

3 /8

4 /8

5 /8

6 /8

7 /8

8 /8