ಶ್ರಾವಣ ಮಾಸದಲ್ಲಿ ಮನೆಯಲ್ಲಿ ಈ ಗಿಡಗಳನ್ನು ನೆಡಿ: ಸಂತೋಷ, ಸಮೃದ್ಧಿ ಸದಾ ಹಾಗೇ ಇರುತ್ತದೆ

ಹಿಂದೂ ಧರ್ಮದ ಪವಿತ್ರ ತಿಂಗಳು ಮತ್ತು ಶಿವ ಸ್ಮರಣೆಗೆ ಅತ್ಯಂತ ಉತ್ತಮವಾದ ತಿಂಗಳೆಂದರೆ ಅದು ಶ್ರಾವಣ ಮಾಸ. ಜುಲೈ 14ರಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತಿದೆ. ವಸ್ತ್ರ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಸದಾ ಪ್ರಗತಿ ಇರುತ್ತದೆ. ಅಷ್ಟೇ ಅಲ್ಲ, ಶ್ರಾವಣ ಮಾಸದಲ್ಲಿ ಈ ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಕೌಟುಂಬಿಕ ಕಲಹಗಳು, ಆರ್ಥಿಕ ಮುಗ್ಗಟ್ಟಿನಂತಹ ಸನ್ನಿವೇಶಗಳು ಉದ್ಭವಿಸುವುದಿಲ್ಲ. ಶ್ರಾವಣ ಮಾಸದಲ್ಲಿ ನೆಡಲು ಅತ್ಯಂತ ಮಂಗಳಕರವಾದ ಈ ಸಸ್ಯಗಳು ಯಾವುವು ಎಂದು ತಿಳಿಯೋಣ.

1 /5

ವಾಸ್ತು ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಮನೆಯಲ್ಲಿ ಶಮಿ ಗಿಡ ನೆಡುವುದು ತುಂಬಾ ಶುಭ. ಶ್ರಾವಣ  ಮಾಸದಲ್ಲಿ ಈ ಗಿಡವನ್ನು ನೆಟ್ಟವರ ಮನೆಯಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲ ಶಮಿಯ ಗಿಡಕ್ಕೆ ನಿತ್ಯ ಪೂಜೆ ಮಾಡುವುದರಿಂದ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

2 /5

ವಾಸ್ತು ಶಾಸ್ತ್ರದ ಪ್ರಕಾರ, ಶ್ರಾವಣ ಮಾಸದಲ್ಲಿ ಮನಿ ಪ್ಲಾಂಟ್ ಅನ್ನು ನೆಟ್ಟರೆ, ಲಕ್ಷ್ಮಿ ಮಾತೆ ಮನೆಯಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು ಇರುವುದಿಲ್ಲ. ಮನಿ ಪ್ಲಾಂಟ್ ಎಷ್ಟು ವೇಗವಾಗಿ ಬೆಳೆಯುತ್ತದೆಯೋ ಅಷ್ಟು ವೇಗವಾಗಿ ಮನೆ ಪ್ರಗತಿಯಾಗುತ್ತದೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಮೃದ್ಧಿಯಾಗುತ್ತದೆ

3 /5

ವಾಸ್ತು ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ನೆಟ್ಟರೆ ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ ಇರುತ್ತದೆ. ತುಳಸಿ ಗಿಡ ಎಷ್ಟು ಹಸಿರಾಗಿರುತ್ತದೆಯೋ, ಅಷ್ಟು ನಿಮ್ಮ ಮನೆ ಪ್ರಗತಿಯಾಗುತ್ತದೆ. ತುಳಸಿ ಗಿಡವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ನೆಡುವುದು ಶುಭ.

4 /5

ವಾಸ್ತು ಪ್ರಕಾರ ಶ್ರಾವಣ ಮಾಸದಲ್ಲಿ ಬಾಗಿಲಿನ ಮೇಲೆ ಗರಿಕೆಯನ್ನು ಇಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ಈ ಸಸ್ಯದ ಎಲೆಗಳು ಹಸಿರಾಗಿದ್ದರೆ, ಮನೆಯಲ್ಲಿ ಹೆಚ್ಚು ಸಂತೋಷ ಇರುತ್ತದೆ. ಸಸ್ಯವು ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಬೇಕು ಎಂದು ನಂಬಲಾಗಿದೆ.  

5 /5

ವಾಸ್ತು ಶಾಸ್ತ್ರದ ಪ್ರಕಾರ, ದತುರಾ ಸಸ್ಯವು ಶಿವನ ವಾಸಸ್ಥಾನವಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ದತುರಾ ಗಿಡ ನೆಟ್ಟು ಪೂಜೆ ಮಾಡಲಾಗುತ್ತದೆ. ಇದರಿಂದ ಶಿವ ಪ್ರಸನ್ನನಾಗುತ್ತಾನೆ ಅನುಗ್ರಹಿಸುತ್ತಾನೆ ಎಂದು ನಂಬಲಾಗಿದೆ. ಶ್ರಾವಣ ಮಾಸದಲ್ಲಿ ದತುರಾ ಗಿಡವನ್ನು ನೆಟ್ಟ ವ್ಯಕ್ತಿಗೆ ಶಿವನ ವಿಶೇಷ ಅನುಗ್ರಹ ದೊರೆಯುತ್ತದೆ.