ಮರಗಳು ಮತ್ತು ಸಸ್ಯಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅವುಗಳಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ಅರ್ಥಹೀನ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಒಳಾಂಗಣ ಸಸ್ಯಗಳನ್ನು ಬಹಳ ಉತ್ಸಾಹದಿಂದ ನೆಡುತ್ತಾರೆ. ಒಳಾಂಗಣ ಸಸ್ಯಗಳೊಂದಿಗೆ, ಮನೆ ಮತ್ತು ಕಚೇರಿಯ ವಾತಾವರಣವು ಶುದ್ಧ ಮಾತ್ರವಲ್ಲ, ಹಸಿರು ಮನಸ್ಸಿಗೆ ಶಾಂತಿಯನ್ನು ಕೂಡ ನೀಡುತ್ತದೆ. ಮನೆಯಲ್ಲಿ ಸುಖ-ಶಾಂತಿ, ಸಂತೋಷ, ಸಂಪತ್ತನ್ನು ತರುವ ಕೆಲವು ಗಿಡ, ಮರಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ ಎಂದು ನಿಮಗೆ ತಿಳಿದಿದೆಯೇ? ತಾಯಿ ಲಕ್ಷ್ಮಿಯ ಕೃಪೆಹೊಂದಿರುವ ಅಂತಹ ಸಸ್ಯಗಳು ಮತ್ತು ಮರಗಳು ಯಾವುವು ಎಂದು ತಿಳಿಯೋಣ...
ಮನಿ ಪ್ಲಾಂಟ್ ಸಸಿಗಳನ್ನು ವಾಸ್ತು ಶಾಸ್ತ್ರದಲ್ಲಿ ಶುಭವೆಂದು ಪರಿಗಣಿಸಲಾಗಿದೆ. ಮನಿ ಪ್ಲಾಂಟ್ ಹೆಚ್ಚಾಗಿ ಜನರ ಮನೆಗಳಲ್ಲಿ ಕಂಡುಬರುತ್ತದೆ. ಈ ಸಸ್ಯದ ಬಗ್ಗೆ ಸಸ್ಯವು ಬೆಳೆದಂತೆ, ಮನೆಯಲ್ಲಿ ಸಂಪತ್ತು ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಆದರೆ ಈ ಸಸ್ಯದ ಬಳ್ಳಿ ಯಾವಾಗಲೂ ಮೇಲಕ್ಕೆ ಹೋಗಬೇಕು ಎಂಬುದನ್ನು ನೆನಪಿನಲ್ಲಿಡಿ.
ಶಮೀ ಮರವನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಶಮೀ ಮರವನ್ನು ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಮತ್ತು ಬಡತನ ನಿರ್ಮೂಲನೆಯಾಗುತ್ತದೆ. ನವರಾತ್ರಿಯ ವಿಜಯದಶಮಿಯಂದು ಶಮೀವೃಕ್ಷ ಅಥವಾ ಬನ್ನಿಮರಕ್ಕೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸುವುದರ ಹಿಂದೆ ಅದರದೇ ಆದ ಪೌರಾಣಿಕ ಹಿನ್ನಲೆ ಕೂಡ ಇದೇ. ಹಿಂದೂಧರ್ಮದಲ್ಲಿ ಇತರ ವೃಕ್ಷಗಳಿಗೆ ಪ್ರಮುಖ ಸ್ಥಾನವನ್ನು ನೀಡಿರುವಂತೆ, ಶಮೀವೃಕ್ಷವನ್ನೂ ಪೂಜನೀಯವಾಗಿ ಕಾಣಲಾಗುತ್ತದೆ. ಬನ್ನೀ ಮರವೆಂದೂ ಕರೆಯಲಾಗುವ ಶಮೀ ವೃಕ್ಷಕ್ಕೆ ನವರಾತ್ರಿಯ ನವಮಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದೆಂಬ ನಂಬಿಕೆ ಇದೆ.
ವಾಸ್ತು ಶಾಸ್ತ್ರದಲ್ಲಿ ಮನಿ ಟ್ರೀ ಅನ್ನು ಧನ ವರ್ಷ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದು ವಿಲಕ್ಷಣ ಸಸ್ಯವಾಗಿದ್ದು, ನೀವು ನರ್ಸರಿಯಿಂದ ಖರೀದಿಸಬಹುದು. ಈ ಸಸ್ಯವನ್ನು ನೆಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ನೆಲೆಸುತ್ತದೆ ಎಂದು ನಂಬಲಾಗಿದೆ.
ವಾಸ್ತು ಶಾಸ್ತ್ರದಲ್ಲಿ ಅಶ್ವಗಂಧ ಸಸ್ಯವನ್ನು ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಸಸ್ಯವೆಂದು ಪರಿಗಣಿಸಲಾಗಿದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ನಿಮ್ಮ ಕೆಲಸಗಳು ಸುಸೂತ್ರವಾಗಿ ನಡೆಯುತ್ತವೆ ಮತ್ತು ನಿಮಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗ್ತುತ್ತದೆ.
ಶ್ವೇತಾರ್ಕ ಎಂದು ಕರೆಯಲ್ಪಡುವ ಬಿಳಿ ಎಕ್ಕದ ಗಿಡವನ್ನು ವಾಸ್ತುವಿನಲ್ಲಿ ಬಹಳ ಶ್ರೇಷ್ಠ ಎಂದು ಗುರುತಿಸಲಾಗಿದೆ. ಈ ಸಸ್ಯವನ್ನು ಮನೆಯ ಬಾಗಿಲು ಅಥವಾ ಗ್ಯಾಲರಿಯಲ್ಲಿ ನೆಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಸಸ್ಯವನ್ನು ನೆಡುವುದರಿಂದ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಇದನ್ನು ಗಣಪತಿಯ ಪ್ರತೀಕ ಎಂದು ಹೇಳುವುದೂ ಉಂಟು. ನೀವು ಮನೆಯಿಂದ ಹೊರಡುವಾಗ ಈ ಗಿಡಕ್ಕೆ ನಮಸ್ಕರಿಸಿ ಹೋಗುವುದರಿಂದ ನಿಮ್ಮ ಕೆಲಸ ಯಾವುದೇ ಅಡೆತಡೆ ಇಲ್ಲದೆ ಆಗುತ್ತದೆ ಎಂಬುದು ನಂಬಿಕೆ. ಈ ಸಸ್ಯದಿಂದ ಹಾಲು ಹೊರಬರುತ್ತದೆ ಮತ್ತು ಎಂದಿಗೂ ಹಾಲಿನ ಗಿಡಗಳನ್ನು ಮನೆಯೊಳಗೆ ನೆಡಬಾರದು ಎಂಬುದನ್ನು ನೆನಪಿನಲ್ಲಿಡಿ.