Padma Awards 2020: ಈ ವರ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ 119 ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 119 ಸೆಲೆಬ್ರಿಟಿಗಳ ಪೈಕಿ 7 ಜನರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮಭೂಷಣ ಮತ್ತು 102 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗೌರವಾನ್ವಿತ ಗಣ್ಯರ ಪೈಕಿ 29 ಮಂದಿ ಮಹಿಳೆಯರಿದ್ದಾರೆ.
Padma Awards 2020: ಈ ವರ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ 119 ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 119 ಸೆಲೆಬ್ರಿಟಿಗಳ ಪೈಕಿ 7 ಜನರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮಭೂಷಣ ಮತ್ತು 102 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗೌರವಾನ್ವಿತ ಗಣ್ಯರ ಪೈಕಿ 29 ಮಂದಿ ಮಹಿಳೆಯರಿದ್ದಾರೆ. ಇದೇ ವೇಳೆ 16 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದರು. ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮ ಪ್ರಶಸ್ತಿಗೆ ಭಾಜನರಾದ ಸೆಲೆಬ್ರಿಟಿಗಳ ಫೋಟೋ ಗ್ಯಾಲರಿ ಇಲ್ಲಿದೆ.
ಇದನ್ನೂ ಓದಿ-Kangana Ranaut: ಪಾಕ್ ನಲ್ಲಿ ಥಲೈವಿ ಟ್ರೆಂಡ್ ಆಗಿದ್ದಕ್ಕೆ ಕಂಗನಾ ಹೇಳಿದ್ದೇನು ಗೊತ್ತೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ - ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ರಾಷ್ಟ್ರಪತಿ ಕೋವಿಂದ್ ಅವರ ಕೈಯಿಂದ ಈ ಗೌರವವನ್ನು ಪಡೆದಿದ್ದಾರೆ.
2. ಪಂಡಿತ್ ಛುನ್ನುಲಾಲ್ ಮಿಶ್ರಾಗೆ ಪದ್ಮವಿಭೂಷಣ - ದೇಶದ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಚುನ್ನುಲಾಲ್ ಮಿಶ್ರಾ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದಲ್ಲದೆ ಜಪಾನ್‌ನ ಮಾಜಿ ಸಚಿವ ಶಿಂಜೋ ಅಬೆ, ಎಸ್‌ಪಿ ಬಾಲಸುಬ್ರಮಣ್ಯಂ, ಡಾ.ಬೆಲ್ಲೆ ಮೋನಪ್ಪ ಹೆಗ್ಡೆ, ಮೌಲಾನಾ ವಹೀದುದ್ದೀನ್ ಖಾನ್, ಬಿ.ಬಿ.ಲಾಲ್, ಸುದರ್ಶನ್ ಸಾಹು ಅವರಿಗೆ ಪದ್ಮವಿಭೂಷಣ ಲಭಿಸಿದೆ.
3. ಪಿವಿ ಸಿಂಧುಗೆ ಪದ್ಮ ಭೂಷಣ ಗೌರವ - ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದಲ್ಲದೇ ತರುಣ್ ಗೊಗೊಯ್, ಸುಮಿತ್ರಾ ಮಹಾಜನ್, ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ) ಸೇರಿದಂತೆ ಹಲವರಿಗೆ ಪದ್ಮಭೂಷಣ ನೀಡಲಾಗಿದೆ.
4. ಏರ್ ಮಾರ್ಷಲ್ ಡಾ. ಪದ್ಮಾ ಬಂಡೋಪಾಧ್ಯಾಯಗೆ ಪದ್ಮಶ್ರೀ - ಪದ್ಮ ಪ್ರಶಸ್ತಿ ಕಾರ್ಯಕ್ರಮದಲ್ಲಿ ಏರ್ ಮಾರ್ಷಲ್ ಡಾ. ಪದ್ಮಾ ಬಂಡೋಪಾಧ್ಯಾಯ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಏರ್ ಮಾರ್ಷಲ್ ಡಾ.ಪದ್ಮಾ ಬಂಡೋಪಾಧ್ಯಾಯ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪದ್ಮಶ್ರೀ ನೀಡಲಾಗಿದೆ.
5. ಗಾಯಕ ಅದನಾನ್ ಸಾಮಿ ಗೆ ಪದ್ಮಶ್ರೀ - ಇದೇ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗಾಯಕ ಅದ್ನಾನ್ ಸಾಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅದ್ನಾನ್ ಸಾಮಿ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
6. ಡಾ. ರಾಮನ್ ಗಂಗಾಖೇಡ್ಕರ್ ಅವರಿಗೆ ಪದ್ಮಶ್ರೀ - ಇದಲ್ಲದೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಮಾಜಿ ಮುಖ್ಯ ವಿಜ್ಞಾನಿ ಡಾ.ರಮನ್ ಗಂಗಾಖೇಡ್ಕರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಡಾ.ರಮನ್ ಗಂಗಾಖೇಡ್ಕರ್ ಅವರಿಗೆ ಈ ಗೌರವ ನೀಡಲಾಗಿದೆ.
7. ಕಂಗನಾ ರಣಾವತ್ ಗೆ ಪದ್ಮಶ್ರೀ - ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಹಾಗೂ ಕಂಗನಾ ರಣಾವತ್ ಕೂಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲಾ ಕ್ಷೇತ್ರದಲ್ಲಿ ಕಂಗನಾ ಅವರ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
8. ರಾಣಿ ರಾಂಪಾಲ್ ಗೆ ಪದ್ಮಶ್ರೀ - ಇತ್ತೀಚೆಗಷ್ಟೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡವನ್ನು ಮುನ್ನಡೆಸಿ ತಂಡದ ನಾಯಕಿಯಾಗಿದ್ದ ರಾಣಿ ರಾಂಪಾಲ್‌ಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ರಾಣಿ ರಾಂಪಾಲ್ ಅವರಿಗೆ ಈ ಗೌರವ ಸಿಕ್ಕಿದೆ.