PHOTO ALBUM: ಸಂಗೀತ್ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಪ್ರಿಯಾಂಕಾ-ನಿಕ್

ಸಹೋದರಿ ಪರಿಣಿತಿ ಚೋಪ್ರಾ ಮತ್ತು ತಾಯಿ ಮಧು ಚೋಪ್ರಾ ಜೊತೆ ನೃತ್ಯ ಮಾಡಿದ ಪ್ರಿಯಾಂಕ.

Dec 3, 2018, 11:51 AM IST

ಜೋದ್ಪುರದ ಉಮ್ಮೆದ್ ಭವನ್ ಪ್ಯಾಲೇಸ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದ ಬಳಿಕ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೇರಿಕಾದ ಗಾಯಕ ನಿಕ್ ಜೋನಾಸ್ ಭಾನುವಾರ ಭಾರತೀಯ ಸಂಪ್ರದಾಯದಂತೆ ವಿವಾಹವಾದರು. 

1/10

ಕುಟುಂಬ ಮತ್ತು ಸ್ನೇಹಿತರೊಂದಿಗೆ

ಮಾಧ್ಯಮ ವರದಿಗಳ ಪ್ರಕಾರ ಪ್ರಿಯಾಂಕಾ ಮತ್ತು ನಿಕ್ ಸೆಲೆಬ್ರಿಟಿಗಳ ವಿವಾಹದಲ್ಲಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸೇರಿದಂತೆ ಒಟ್ಟು 80 ಅತಿಥಿಗಳು ಹಾಜರಿದ್ದರು.

2/10

ಅಂಬಾನಿ ಕುಟುಂಬ ಕೂಡಾ ಕಾರ್ಯಕ್ರಮದಲ್ಲಿ ಭಾಗಿ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಅವರ ವಿವಾಹ ಸಮಾರಂಭದಲ್ಲಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಭಾಗಿಯಾಗಿದ್ದರು.

3/10

ಸಮಾರಂಭದಲ್ಲಿ ಮಸ್ತ್ ಡಾನ್ಸ್

ಪ್ರಿಯಾಂಕಾ ಮತ್ತು ನಿಕ್ ವಿವಾಹ ಸಮಾರಂಭದಲ್ಲಿ ಮಸ್ತ್ ಡಾನ್ಸ್ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ನಿಕ್ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಸಾಕಷ್ಟು ಎಂಜಾಯ್ ಮಾಡಿದ್ದಾರೆ.

4/10

ಕುಟುಂಬಗಳ ನಡುವೆ ನೃತ್ಯ ಸ್ಪರ್ಧೆ

ನಿಕ್ ಮತ್ತು ಪ್ರಿಯಾಂಕ ಕುಟುಂಬದ ನಡುವೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. 

5/10

ತಾಯಿಯೊಂದಿಗೆ ನೃತ್ಯ

ಪ್ರಿಯಾಂಕ ಚೋಪ್ರಾ ತನ್ನ ತಾಯಿ ಮಧು ಚೋಪ್ರಾ ಜೊತೆ ಹೆಜ್ಜೆ ಹಾಕಿದರು.

6/10

ಮುಂಬೈ ಮತ್ತು ದೆಹಲಿಯಲ್ಲಿ ಆರತಕ್ಷತೆ

ಮಾಹಿತಿ ಪ್ರಕಾರ ಜೋದ್ಪುರದಲ್ಲಿ ವಿವಾಹವಾದ ಬಳಿಕ ಈ ದಂಪತಿಯ ಆರತಕ್ಷತೆ ಮುಂಬೈ ಮತ್ತು ದೆಹಲಿಯಲ್ಲಿ ಆಯೋಜಿಸಲಾಗಿದೆ.

7/10

ದೆಹಲಿ ಆರತಕ್ಷತೆಗೆ ಪ್ರಧಾನಿ ಮೋದಿ ಬರುವ ನಿರೀಕ್ಷೆ

ದೆಹಲಿಯಲ್ಲಿ ನಡೆಯಲಿರುವ ಈ ಜೋಡಿಯ ಆರತಕ್ಷತೆ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. 

8/10

ವಿಶೇಷ ರೀತಿಯಲ್ಲಿ ಅಲಂಕೃತಗೊಂಡಿದ್ದ ಮಂಟಪ

ವರದಿಗಳ ಪ್ರಕಾರ, ಪ್ರಿಯಾಂಕ ಚೋಪ್ರ ಮತ್ತು ನಿಕ್ ಜೊನಸ್ ಅವರ ವಿವಾಹ ಮಂಟಪವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು.

9/10

ಮಂಟಪದ ಎತ್ತರ ಸುಮಾರು 40 ಅಡಿಗಳು

ವಿಶೇಷ ರೀತಿಯಲ್ಲಿ ಅಲಂಕರಿಸಲ್ಪಟ್ಟಿದ್ದ ಈ ಮಂಟಪದ ಎತ್ತರ ಸುಮಾರು 40 ಅಡಿಗಳು ಎನ್ನಲಾಗಿದೆ.

10/10

ಮದುವೆ ಮಂತ್ರ ಹೇಳಿದ 11 ಪುರೋಹಿತರು

ಅರಮನೆಯ ಪ್ಲಾಜಾ ಪ್ರದೇಶದಲ್ಲಿ ಮಂಟಪವನ್ನು ನಿರ್ಮಿಸಲಾಗಿತ್ತು, ಅಲ್ಲಿ ಬೆಂಗಳೂರಿನ ಪಂಡಿತ್ ಚಂದ್ರಶೇಖರ್ ಶರ್ಮಾ ನೇತೃತ್ವದ 11 ಪಂಡಿತರು ಮದುವೆಯ ಮಂತ್ರ ಹೇಳಿದರು.