Rahu Gochar 2022: ಇಂದಿನಿಂದ ಹೊಳೆಯಲಿದೆ ಈ 5 ರಾಶಿಗಳ ಅದೃಷ್ಟ!

                         

Rahu Gochar 2022: ಇಂದು ನೆರಳು ಗ್ರಹಗಳಾದ ರಾಹು ಮತ್ತು ಕೇತು ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಿದ್ದಾರೆ. ರಾಹು-ಕೇತು ಗ್ರಹಗಳ ಸಂಚಾರವು ಜ್ಯೋತಿಷ್ಯದಲ್ಲಿ ಒಂದು ದೊಡ್ಡ ಘಟನೆಯಾಗಿದೆ. ಏಕೆಂದರೆ ಅವರು 18 ತಿಂಗಳುಗಳ ನಂತರ ರಾಶಿಚಕ್ರವನ್ನು ಬದಲಾಯಿಸುತ್ತಾರೆ. ಈ ರೀತಿಯಾಗಿ, ಅವರ ಸ್ಥಿತಿಯ ಬದಲಾವಣೆಯ ಪರಿಣಾಮವು ಜನರ ಜೀವನದ ಮೇಲೆ ದೀರ್ಘಕಾಲ ಇರುತ್ತದೆ. ಈ ಗ್ರಹಗಳನ್ನು ಪಾಪ ಗ್ರಹಗಳು ಎಂದೂ ಕರೆಯುತ್ತಾರೆ. ಆದಾಗ್ಯೂ, ಈ ಗ್ರಹಗಳು ಕೆಲವೊಮ್ಮೆ ಶುಭ ಫಲಿತಾಂಶಗಳಲ್ಲೂ ನೀಡುತ್ತವೆ. ಇಂದು ಅಂದರೆ ಏಪ್ರಿಲ್ 12 ರಂದು ರಾಹು-ಕೇತು ಸಂಕ್ರಮಣವು ಯಾವ ರಾಶಿಯ ಜನರ ಮೇಲೆ ಶುಭ ಪರಿಣಾಮವನ್ನು ಬೀರುತ್ತದೆ ಎಂದು ತಿಳಿಯೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರಾಹು ಕೇತುಗಳ ಸಂಚಾರವು ಮೇಷ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಸಂಬಳ ಹೆಚ್ಚಾಗಬಹುದು. ಹಣದ ಮೂಲಗಳು ಹೆಚ್ಚಾಗುತ್ತವೆ. ಹಣ ಉಳಿತಾಯದಲ್ಲೂ ಯಶಸ್ವಿಯಾಗುತ್ತೀರಿ. ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಉತ್ತಮ.

2 /5

ಕರ್ಕಾಟಕ ರಾಶಿಯ ಜನರಿಗೆ, ರಾಹು-ಕೇತು ಗ್ರಹಗಳ ಈ ಸಂಚಾರವು ವೃತ್ತಿ ಮತ್ತು ವ್ಯಾಪಾರ ಎರಡಕ್ಕೂ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಉದ್ಯೋಗಾಕಾಂಕ್ಷಿಗಳು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಆದಾಯ ಹೆಚ್ಚಾಗಬಹುದು. ಬಡ್ತಿಯನ್ನು ಪಡೆಯುವ ಬಲವಾದ ಅವಕಾಶಗಳಿವೆ. ವ್ಯಾಪಾರಿಗಳಿಗೂ ಲಾಭವಾಗಲಿದೆ. 

3 /5

ಈ ಸಮಯವು ತುಲಾ ರಾಶಿಯವರಿಗೆ ಸಂತೋಷ, ಸಮೃದ್ಧಿ ಮತ್ತು ಗೌರವವನ್ನು ತರುತ್ತದೆ. ಈ ರಾಶಿಯವರು ಕೈ ಹಾಕಿದ ಎಲ್ಲಾ ಕೆಲಸಗಳಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಸಾಕಷ್ಟು ಹಣ ಗಳಿಸುವರು. ಹಣ ಸಂಪಾದಿಸಲು ನೀವು ಹೊಸ ಮಾರ್ಗಗಳನ್ನು ಪ್ರಯತ್ನಿಸಬಹುದು. ನಿಮ್ಮ ಗುರಿಯತ್ತ ನೀವು ಗಮನಹರಿಸಿದರೆ ಯಶಸ್ಸು ಖಂಡಿತ. 

4 /5

ರಾಹು-ಕೇತು ಗ್ರಹಗಳ ಈ ಸಂಕ್ರಮವು ಧನು ರಾಶಿಯವರಿಗೆ ಉತ್ತಮ ವಿತ್ತೀಯ ಲಾಭವನ್ನು ನೀಡುತ್ತದೆ. ಅವರು ಬಹಳಷ್ಟು ಗಳಿಸುತ್ತಾರೆ, ಆದಾಗ್ಯೂ  ವೆಚ್ಚವೂ ಹೆಚ್ಚಾಗುತ್ತವೆ. ಬಡ್ತಿ-ಹೆಚ್ಚಳ ಪಡೆಯುವ ಸಾಧ್ಯತೆಗಳಿವೆ. ಜೀವನದಲ್ಲಿ ಸಂತೋಷವು ಹೆಚ್ಚಾಗುತ್ತದೆ.

5 /5

ಮಕರ ರಾಶಿಯವರಿಗೆ ರಾಹು-ಕೇತುಗಳ ಸಂಚಾರವೂ ಶುಭಕರವಾಗಿರುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ. ತಾಯಿಯಿಂದ ಹಣ ಗಳಿಸಬಹುದು. ಪ್ರಯಾಣಕ್ಕೆ ಹೋಗುವ ಸಾಧ್ಯತೆಗಳಿವೆ. ಉದ್ಯೋಗ ಅಥವಾ ವಾಸಸ್ಥಳದಲ್ಲಿ ಬದಲಾವಣೆಯಾಗಬಹುದು.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.