ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಮತ್ತು ಕೇತುಗಳನ್ನು ಛಾಯಾ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಇವು ಯಾವಾಗಲೂ ಹಿಮ್ಮುಖ ಚಲನೆಯಲ್ಲಿರುತ್ತವೆ.
ಬೆಂಗಳೂರು : ರಾಹು ಮತ್ತು ಕೇತು ಒಂದೂವರೆ ವರ್ಷಕ್ಕೊಮ್ಮೆ ತಮ್ಮ ರಾಶಿಗಳನ್ನು ಬದಲಾಯಿಸುತ್ತಾರೆ. ಛಾಯಾ ಗ್ರಹಗಳಾದ ರಾಹು-ಕೇತು ಈ ವರ್ಷ ಅಕ್ಟೋಬರ್ 30, 2023 ರಂದು ತಮ್ಮ ರಾಶಿಯನ್ನು ಬದಲಿಸಲಿವೆ. ಅಕ್ಟೋಬರ್ 30 ರಂದು ರಾಹು ಮೀನ ರಾಶಿಗೆ ಮತ್ತು ಕೇತು ಕನ್ಯಾರಾಶಿಗೆ ಪ್ರವೇಶಿಸುತ್ತಾರೆ. ರಾಹು ಕೇತು ಸಂಕ್ರಮಣವು ಕೆಲವು ರಾಶಿಗಳಿಗೆ ಉತ್ತಮ ಫಲ ನೀಡುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಹು ಕೇತು ಸಂಕ್ರಮಣ: ಈ ವರ್ಷ ಅಕ್ಟೋಬರ್ 30, 2023 ರಂದು ರಾಹು-ಕೇತು ತಮ್ಮ ರಾಶಿಯನ್ನು ಬದಲಾಯಿಸಲಿದ್ದಾರೆ. ಅಕ್ಟೋಬರ್ 30 ರಂದು ರಾಹು ಮೀನ ರಾಶಿಗೆ ಮತ್ತು ಕೇತು ಕನ್ಯಾರಾಶಿಗೆ ತೆರಳುತ್ತಾರೆ.
ಗ್ರಹಗಳ ಮೇಲೆ ಪರಿಣಾಮ: ರಾಹು-ಕೇತುಗಳು ಕೇವಲ ಅಶುಭ ಫಲವನ್ನೇ ನೀಡುವುದಿಲ್ಲ. ರಾಹು ಮತ್ತು ಕೇತುಗಳ ಸಂಚಾರವು ಕೆಲವು ರಾಶಿಯವರ ಜೀವನದಲ್ಲಿ ಮಂಗಳಕರ ಫಲ ನೀಡುತ್ತದೆ.
ಮೇಷ: ವ್ಯಾಪಾರಕ್ಕೆ ಇದು ಉತ್ತಮ ಸಮಯವಾಗಿರುತ್ತದೆ. ನಿಮ್ಮ ಉದ್ಯೋಗ ಅಥವಾ ಸ್ಥಳದಲ್ಲಿ ಬದಲಾವಣೆಯಾಗಬಹುದು. ಕೆಲವೊಮ್ಮೆ ನೀವು ಒತ್ತಡವನ್ನು ಎದುರಿಸಬೇಕಾಗುತ್ತದೆ.
ವೃಷಭ: ಕೋಪ ಮತ್ತು ಅಹಂಕಾರ ಯಾವುದೇ ಕಾರಣಕ್ಕೂ ಬೇಡ. ವ್ಯಾಪಾರ ಚೆನ್ನಾಗಿರಲಿದೆ. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆದಾಯ ಹೆಚ್ಚಲಿದೆ.
ಮಿಥುನ: ಜೀವನವನ್ನು ಸಂತೋಷದಿಂದ ಕಳೆಯುತ್ತೀರಿ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ವ್ಯಾಪಾರ ವೃದ್ಧಿಯಾಗಲಿದೆ.
ಕರ್ಕಾಟಕ: ಜೀವನದಲ್ಲಿ ಹಲವು ಸಮಸ್ಯೆಗಳಿಂದ ಮುಕ್ತಿ ಹೊಂದಿ ನೆಮ್ಮದಿಯ ಬದುಕು ನಿಮ್ಮದಾಗುವುದು. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಕಲೆ ಮತ್ತು ಸಂಗೀತದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.
ಸಿಂಹ: ಭೌತಿಕ ಆನಂದ ಹೆಚ್ಚಾಗುತ್ತದೆ. ಅನಿರೀಕ್ಷಿತ ಸ್ಥಳಗಳಿಂದ ಹಣ ಬರುತ್ತದೆ. ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುವಿರಿ.
ಕನ್ಯಾ: ಸಂಪೂರ್ಣ ಆತ್ಮವಿಶ್ವಾಸದಿಂದ ಇರುತ್ತೀರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಬಹುದು. ನೀವು ಕೆಲಸದಲ್ಲಿ ಸಕ್ರಿಯರಾಗಿರುತ್ತೀರಿ. ಹಣದ ಹರಿವು ಹೆಚ್ಚಾಗುತ್ತದೆ.
ತುಲಾ: ನಿಮ್ಮ ಮನದ ಇಚ್ಛೆ ಈಡೇರಲಿದೆ. ವೃತ್ತಿಬದುಕು -ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ವೃಶ್ಚಿಕ: ಜೀವನದಲ್ಲಿ ಏರಿಳಿತಗಳಿರುತ್ತವೆ. ತಾಳ್ಮೆಯಿಂದ ಕೆಲಸ ಮಾಡಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಸೂಕ್ತ. ಕೋಪ ಮತ್ತು ವಿವಾದವನ್ನು ತಪ್ಪಿಸಿ. ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.
ಧನು ರಾಶಿ : ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಲಾಭ ಸಿಗುತ್ತದೆ. ವ್ಯಾಪಾರದಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮದಿಂದ ಜೇಬು ತುಂಬುವುದು.
ಮಕರ: ಎಲ್ಲ ಕೆಲಸಗಳನ್ನು ಆತ್ಮವಿಶ್ವಾಸದಿಂದ ಪೂರ್ಣಗೊಳಿಸುವಿರಿ. ಆದರೆ ಶಾಂತವಾಗಿರಲು ಪ್ರಯತ್ನಿಸಿ. ತಂದೆಯ ಆರೋಗ್ಯದ ಕಡೆ ವಿಶೇಷ ಗಮನವಿರಲಿ.
ಕುಂಭ: ಅನಗತ್ಯ ಕೋಪ ಮತ್ತು ಜಗಳಗಳನ್ನು ತಪ್ಪಿಸಿ. ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಆರೋಗ್ಯದ ಬಗ್ಗೆ ಗಮನ ಕೊಡಬೇಕು.
ಮೀನ: ವ್ಯವಹಾರದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ಆತ್ಮ ವಿಶ್ವಾಸದ ಬಲದಿಂದ ನೀವು ಜಯ ಗಳಿಸುವಿರಿ. ನಿಮ್ಮ ಕೆಲಸಕ್ಕೆ ತಾಯಿಯ ಬೆಂಬಲ ಸಿಗುವುದು.