ಇನ್ನು ಮೂರು ತಿಂಗಳಿನಿಂದ ಒಂದೂವರೆ ವರ್ಷದವರೆಗೆ ಈ ರಾಶಿಯವರದ್ದೇ ಮೇಲಾಟ ! ಅಷ್ಟೈಶ್ವರ್ಯ ಹೊತ್ತು ತರುವಳು ಧನಲಕ್ಷ್ಮೀ

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಕ್ಟೋಬರ್ 30 ರಂದು ರಾಹು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ರಾಹುವಿನ ಸ್ಥಾನದಲ್ಲಿನ ಬದಲಾವಣೆಯು ಪ್ರತಿಯೊಬ್ಬರ ಜಾತಕದ ಮೇಲೆ ಪರಿಣಾಮ ಬೀರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಜ್ಯೋತಿಷ್ಯದ ಪ್ರಕಾರ, ರಾಹುವನ್ನು ಅಶುಭ ಗ್ರಹ ಎಂದೇ ಕರೆಯಲಾಗುತ್ತದೆ. ರಾಹು ಯಾವಾಗಲೂ ಹಿಮುಖವಾಗಿಯೇ ಚಲಿಸುತ್ತಿರುತ್ತಾನೆ.  ಮೂರು ತಿಂಗಳ ಬಳಿಕ ರಾಹು ತನ್ನ ರಾಶಿಯನ್ನು ಬದಲಿಸಿ ಮೀನ ರಾಶಿ ಪ್ರವೇಶಿಸುತ್ತಾನೆ.  ಇದರೊಂದಿಗೆ ಕೆಲವು ರಾಶಿಯವರ ಅದೃಷ್ಟವನ್ನೇ ಬೆಳೆಗಲಿದ್ದಾನೆ. ಏನೇ ಕೆಲಸ ಮಾಡಿದರೂ ಯಶಸ್ಸು ಇವರ ಪಾಲಿಗೆ ಇರಲಿದೆ. 

2 /7

ಮೇಷ ರಾಶಿ : ಮೀನ ರಾಶಿಯಲ್ಲಿ  ರಾಹುವಿನ ಸಂಕ್ರಮಣ ಮೇಷ ರಾಶಿಯವರಿಗೆ ಬಹಳ ಪ್ರಾಮುಖ್ಯವಾಗಿರುತ್ತದೆ.  ಈ ರಾಶಿಯವರು ಇಲ್ಲಿಯವರೆಗೆ ಎದುರಿಸುತ್ತಿದ್ದ ಹಣಕಾಸಿನ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಇದರೊಂದಿಗೆ ಪ್ರಗತಿಯ ಹಾದಿ ತೆರೆದುಕೊಳ್ಳುತ್ತದೆ. ಆರ್ಥಿಕ ಸಮಸ್ಯೆ ಬಗೆಹರಿಯುವ ಕಾರಣ ನೆಮ್ಮದಿಯ ಬದುಕು ನಿಮ್ಮದಾಗಲಿದೆ. ಗೌರವ  ಹೆಚ್ಚಾಗಲಿದೆ. 

3 /7

ವೃಷಭ ರಾಶಿ : ವೃಷಭ ರಾಶಿಯವರು ಈ ಸಂದರ್ಭದಲ್ಲಿ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಜಯ ಖಂಡಿತಾ. ಜಯದ ನಿರೀಕ್ಷೆ ಇಟ್ಟುಕೊಂಡೇ ಈ ರಾಶಿಯವರು ಮುಂದುವರಿಯಬಹುದು. ಖ್ಯಾತಿ ಹೆಚ್ಚಾಗುತ್ತದೆ. ವ್ಯಾಪಾರ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. 

4 /7

ಕರ್ಕಾಟಕ ರಾಶಿ : ಈ ರಾಶಿಯವರಿಗೆ ರಾಹುವಿನ ಸಂಚಾರ ಬಹಳ ಅನುಕೂಲಕರ ಫಲವನ್ನು ನೀಡಲಿದೆ. ನಿಮ್ಮ ಉದ್ಯೋಗದಲ್ಲಿ ಉತ್ತುಂಗಕ್ಕೆ ಏರುವ ಕಾಲ ಇದು. ನೀವು ಮಾಡುವ ಪ್ರಯತ್ನಗಳು ಕೈಗೂಡಲಿದೆ. ವಿದೇಶಕ್ಕೆ ತೆರಳುವ ಯೋಗವಿದೆ.  ಆರ್ಥಿಕ ಮತ್ತು ವೃತ್ತಿಪರ ಸ್ಥಿತಿ ಉತ್ತಮವಾಗಿರುತ್ತದೆ. 

5 /7

ತುಲಾ ರಾಶಿ : ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ತುಲಾ ರಾಶಿಯವರಿಗೆ ಅನುಕೂಲಕರವಾಗಿರಲಿದೆ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗಲಿದೆ.  ಸಾಲದಿಂದ ಮುಕ್ತಿಯಾಗುವ ದಿನಗಳು ಹತ್ತಿರದಲ್ಲಿವೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಹೊಸ ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. 

6 /7

ಮೀನ ರಾಶಿ : ರಾಹು ಇದೆ ರಾಶಿಯನ್ನು ಪ್ರವೇಶಿಸುವುದರಿಂದ ಮೀನ ರಾಶಿಯವರಿಗೆ ರಾಹುವಿನ ಸಂಚಾರವು ಶುಭ ಫಲ ನೀಡಲಿದೆ. ಈ ರಾಶಿಯವರ  ಆರ್ಥಿಕ ಸ್ಥಿತಿ ಸುಧಾರಿಸಬಹುದು. ಸಂಪತ್ತು ಗಳಿಸುವ ಹೆಚ್ಚು ಹೆಚ್ಚು ಅವಕಾಶಗಳು ಒದಗಿ ಬರುತ್ತವೆ. ಪಡೆಯುವ ಅವಕಾಶಗಳು ಬರುತ್ತಿವೆ. 

7 /7

ಸೂಚನೆ : ವಿವಿಧ ಮಾಧ್ಯಮಗಳು/ಜ್ಯೋತಿಷ್ಯರು/ ಪಂಚಾಂಗಗಳು/ಪ್ರವಚನಗಳು/ಧಾರ್ಮಿಕ ನಂಬಿಕೆಗಳು/ಗ್ರಂಥಗಳಿಂದ ಮಾಹಿತಿಯನ್ನು ಸಂಗ್ರಹಿಸಿ ಈ ಮಾಹಿತಿಯನ್ನು ನಿಮ್ಮ ಮುಂದಿಡಲಾಗಿದೆ. ನಾವಿಲ್ಲಿ ಕೇವಲ ಮಾಹಿತಿ ಮಾತ್ರ ನೀಡಿದ್ದೇವೆ. ಅದನ್ನು ಯಾವುದೇ ರೀತಿಯಲ್ಲಿ ಬಳಸುವ ಜವಾಬ್ದಾರಿಯು ಸ್ವತಃ ಬಳಕೆದಾರ ಅಥವಾ ಓದುಗರ ಮೇಲಿರುತ್ತದೆ. ZEE KANNADA ಇದಕ್ಕೆ ಜವಾಬ್ದಾರರಲ್ಲ.