Rahu ka Rashi Parivartan 2023 : ನೆನಪಿಡಬೇಕಾದ ಅಂಶ ಎಂದರೆ ರಾಹು ಯಾವಾಗಲೂ ಕೆಟ್ಟ ಫಲಿತಾಂಶಗಳನ್ನು ಮಾತ್ರ ನೀಡುವುದಿಲ್ಲ. ಯಾರ ಜಾತಕದಲ್ಲಿ ರಾಹು ಬಲವಾದ ಸ್ಥಾನದಲ್ಲಿರುತ್ತಾನೆಯೋ ಆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ರಾಹುವನ್ನು ಛಾಯಾ ಗ್ರಹ ಎಂದು ಕರೆಯಲಾಗುತ್ತದೆ. ರಾಹು ಕೇತು ಶನಿ ಸಾಮಾನ್ಯವಾಗಿ ಜನರನ್ನು ಕಾಡುವುದೇ ಹೆಚ್ಚು. ಹೀಗಾಗಿ ಈ ಗ್ರಹಗಳ ಬಗ್ಗೆ ಜನರ ಮನಸ್ಸಿನಲ್ಲಿ ಭಯ ಕೂಡಾ ಹೆಚ್ಚು. ಈ ಗ್ರಹಗಳಿಗೆ ಸಂಬಂಧಿಸಿದಂತೆ ಏನೇ ದೋಷವಿದ್ದರೂ ಮೊದಲು ಪರಿಹಾರ ಮಾಡಲಾಗುತ್ತದೆ. ಜಾತಕದಲ್ಲಿ ರಾಹು ದೋಷವಿದ್ದರೆ, ವ್ಯಕ್ತಿಯು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆರ್ಥಿಕ ಸ್ಥಿತಿ ತುಂಬಾ ಹದಗೆಡುತ್ತದೆ, ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ರಾಹು ಯಾವಾಗಲೂ ಕೆಟ್ಟ ಫಲಿತಾಂಶಗಳನ್ನು ಮಾತ್ರ ನೀಡುವುದಿಲ್ಲ. ಯಾರ ಜಾತಕದಲ್ಲಿ ರಾಹು ಬಲವಾದ ಸ್ಥಾನದಲ್ಲಿರುತ್ತಾನೆಯೋ ಆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಹು ಈ ವರ್ಷ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹವೆಂದರೆ ಅದು ರಾಹು. ರಾಹು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ. ಅಕ್ಟೋಬರ್ 30 ರಂದು ಮಧ್ಯಾಹ್ನ 12.30 ಕ್ಕೆ ಸರಿಯಾಗಿ ರಾಹು ಮಂಗಳನ ರಾಶಿಯು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರೀತಿ ರಾಹು ತನ್ನ ಸ್ಥಾನವನ್ನು ಬದಲಿಸುತ್ತಿದ್ದಂತೆಯೇ 3 ರಾಶಿಯವರ ಅದೃಷ್ಟ ಬೆಳಗುತ್ತದೆ. ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಹು ಸಂಕ್ರಮಣವು ಮೇಷ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದವಾಗಲಿದೆ. ಇವರು ಅನುಭವಿಸಿದ್ದ ಕಷ್ಟ ನಷ್ಟಗಳಿಗೆ ವಿರಾಮ ಬೀಳುವುದು. ಮುಂದೆ ಯಾವ ಕೆಲಸ ಮಾಡಿದರೂ ಆರ್ಥಿಕ ಲಾಭ ಗ್ಯಾರಂಟಿ. ಉದ್ಯೋಗದಲ್ಲಿ ಕೂಡಾ ಪ್ರಗತಿಯಾಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ರಾಹುವಿನ ರಾಶಿ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ವ್ಯಾಪಾರದಲ್ಲಿ ವಿಶೇಷ ಲಾಭವಾಗುವುದು. ಹೊಸ ಮನೆ, ವಾಹನ ಖರೀದಿಸಬಹುದು. ಆದರೆ ತಾಳ್ಮೆ ಮತ್ತು ಸಂಯಮವನ್ನು ಅನುಸರಿಸುವ ಅವಶ್ಯಕತೆಯಿದೆ. ರಾಹು ಸಂಕ್ರಮಣದ ಅವಧಿ ನಿಮ್ಮ ಪಾಲಿಗೆ ಅದೃಷ್ಟ ತರಲಿದೆ.
ರಾಹು ಅಕ್ಟೋಬರ್ 2023 ರಲ್ಲಿ ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮೀನ ರಾಶಿಯವರಿಗೆ ವಿಶೇಷ ಲಾಭವಾಗುವುದು. ಆರ್ಥಿಕ ಪ್ರಗತಿಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಸಾಲ ನೀಡಿದ ಹಣವನ್ನು ಸಹ ಮರಳಿ ಪಡೆಯಬಹುದು. ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)