ಜ್ಯೋತಿಷ್ಯದ ಪ್ರಕಾರ, ಶನಿಯ ನಂತರ ಇಡೀ ಜಗತ್ತು ಅತಿ ಹೆಚ್ಚು ಹೆದರುವ ಎರಡು ಗ್ರಹಗಳೆಂದರೆ ರಾಹು ಮತ್ತು ಕೇತು.
ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 9 ಗ್ರಹಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ರಾಹು ಮತ್ತು ಕೇತು ಎರಡು ಗ್ರಹಗಳಾಗಿದ್ದು, ಇವುಗಳನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಈ ಗ್ರಹಗಳು ಜ್ಯೋತಿಷ್ಯದಲ್ಲಿ ಯಾವುದೇ ಅಸ್ತಿತ್ವವನ್ನು ಹೊಂದಿಲ್ಲವಾದರೂ, ಶನಿಯ ನಂತರ ಇಡೀ ಜಗತ್ತನ್ನು ಹೆಚ್ಚು ಹೆದರಿಸುವ ಎರಡು ಗ್ರಹಗಳೆಂದರೆ ರಾಹು ಮತ್ತು ಕೇತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ರಾಹು ಜನರಿಗೆ ಅಶುಭವನ್ನು ಮಾತ್ರ ಮಾಡುತ್ತಾನೆ ಎನ್ನುವುದು ಸುಳ್ಳು. ಇತರ ಗ್ರಹಗಳಂತೆ, ರಾಹುವಿನ ರಾಶಿಯ ಬದಲಾವಣೆ ಕೂಡಾ ಎಲ್ಲಾ ರಾಶಿಯವರ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ರಾಹು ಸುಮಾರು ಒಂದೂವರೆ ವರ್ಷಗಳ ಕಾಲ ಒಂದು ರಾಶಿಯಲ್ಲಿ ಇರುತ್ತಾನೆ. ಪಂಚಾಂಗದ ಪ್ರಕಾರ, ಅಕ್ಟೋಬರ್ 30, 2023 ರಂದು ಮಧ್ಯಾಹ್ನ 1.33 ಕ್ಕೆ ರಾಹುವು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕೆಲವು ರಾಶಿಯವರ ಅದೃಷ್ಟವನ್ನು ಬಡಿದೆಬ್ಬಿಸುತ್ತದೆ.
ರಾಹು ಮೇಷ ರಾಶಿಯಿಂದ ಹೊರಬಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದ ಮೇಷ ರಾಶಿಯವರ ಜೀವನದಲ್ಲಿ ಒಳ್ಳೆಯ ಸಮಯ ಪ್ರಾರಂಭವಾಗಲಿದೆ. ಈ ರಾಶಿಯ ಜನರು ರಾಹು ಸಂಚಾರದಿಂದ ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ವಿಶೇಷ ಲಾಭಗಳಿರುತ್ತವೆ.
ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕರ್ಕಾಟಕ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಆದರೂ ಇವರು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ರಾಹು ಸಂಕ್ರಮಣದ ಪ್ರಭಾವದಿಂದ ಅವರು ತಮ್ಮ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವ್ಯಾಪಾರದಲ್ಲಿ ಅಭಿವೃದ್ದಿ ಕಂಡು ಬರಲಿದೆ. ಮನೆ, ವಾಹನ ಖರೀದಿಗೆ ಅವಕಾಶವಿದೆ.
ರಾಹುವಿನ ರಾಶಿಯ ಬದಲಾವಣೆಯಿಂದಾಗಿ, ಹಣದ ಹರಿವು ಹೆಚ್ಚಾಗಲಿದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ಸಾಲ ಕೊಟ್ಟ ಹಣವನ್ನು ಹಿಂತಿರುಗಿ ನಿಮ್ಮ ಕೈ ಸೇರಬಹುದು. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ.