Indian Railways: ಮಕ್ಕಳಿಗಾಗಿ ರೈಲ್ವೆಯ ಹೊಸ ಸೌಲಭ್ಯ

                     

ಭಾರತೀಯ ರೈಲ್ವೇ ಲೋವರ್ ಬರ್ತ್: ನೀವು ಭಾರತೀಯ ರೈಲ್ವೇಯಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರೆ ಮಲಗುವ ಬಗ್ಗೆ ಚಿಂತಿಸಬೇಕಿಲ್ಲ. ಲೋವರ್ ಬರ್ತ್‌ನಲ್ಲಿ  ಕೆಲ ಬದಲಾವಣೆ ಮಾಡುವ ಮೂಲಕ ರೈಲ್ವೆ ಇಲಾಖೆ ಈ ಸಮಸ್ಯೆಗೆ ಪರಿಹಾರ ನೀಡಿದೆ. ಭಾರತೀಯ ರೈಲ್ವೇ ಇದನ್ನು ತಾಯಂದಿರ ದಿನದಂದು ಪ್ರಯೋಗವಾಗಿ ಆರಂಭಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ರೈಲ್ವೆಯ ಲಕ್ನೋ ವಿಭಾಗವು ಈ ಸೇವೆಯನ್ನು ಪ್ರಾರಂಭಿಸಿದೆ. ವಾಸ್ತವವಾಗಿ ರೈಲಿನ ಕೆಳಗಿನ ಬರ್ತ್‌ಗೆ ಸಣ್ಣ ಆಸನವನ್ನು ಸೇರಿಸಲಾಗಿದೆ, ಅದನ್ನು ಬೇಬಿ ಬರ್ತ್ ಎಂದು ಹೆಸರಿಸಲಾಗಿದೆ.

2 /4

ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರಿಗೆ ಈ ಆಸನವು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಮಗುವಿನ ಸುರಕ್ಷತೆಗೂ ವಿಶೇಷ ಕಾಳಜಿ ವಹಿಸಲಾಗಿದೆ.

3 /4

ಮಲಗುವಾಗ ಮಗು ಬೀಳದಂತೆ ಅದರಲ್ಲಿ ಸ್ಟಾಪರ್ ಕೂಡ ನೀಡಲಾಗಿದೆ. ಅಗತ್ಯವಿಲ್ಲದಿದ್ದಾಗ ಅದನ್ನು ಮಡಿಸುವ ಮೂಲಕ ನಿಮ್ಮ ಬರ್ತ್ ಅನ್ನು ಸಾಮಾನ್ಯ ಆಸನವಾಗಿ ಪರಿವರ್ತಿಸಬಹುದು. ಆದಾಗ್ಯೂ, ಪ್ರಸ್ತುತ ಇದನ್ನು ಲಕ್ನೋ ಮೇಲ್‌ನ ಒಂದು ಕೋಚ್‌ನ ಎರಡು ಆಸನಗಳಲ್ಲಿ ಮಾತ್ರ ಸ್ಥಾಪಿಸಲಾಗಿದೆ.

4 /4

ರೈಲ್ವೆಯ ಈ ಉಪಕ್ರಮದ ಬಗ್ಗೆ ಟ್ವಿಟರ್‌ನಲ್ಲಿ ಜನರು ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇದನ್ನು ಕೆಲವರು ಹೊಗಳಿದರೆ ಕೆಲವರು ಸಲಹೆ ನೀಡುತ್ತಿದ್ದಾರೆ. ಎಲ್ಲಾ ರೈಲುಗಳಲ್ಲಿ ಬೇಬಿ ಬರ್ತ್ ಅನ್ನು ಸ್ಥಾಪಿಸುವಂತೆ ರಿಚಾ ಚೌಧರಿ ಎಂಬ ಬಳಕೆದಾರರು ಸಲಹೆ ನೀಡಿದ್ದಾರೆ. ಛಬಿ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಟ್ವೀಟ್‌ನಲ್ಲಿ, ಬೇಬಿ ಬರ್ತ್‌ನ ಉದ್ದವನ್ನು ಹೆಚ್ಚಿಸಲು ರೈಲ್ವೆಗೆ ಸಲಹೆ ನೀಡಲಾಗಿದೆ. ಇನ್ನೋರ್ವ ಬಳಕೆದಾರರು, ರೈಲ್ವೆಯ ಈ ಕ್ರಮ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ  3 ವರ್ಷಗಳ ಹಿಂದೆ ತಾವು ರೈಲಿನಲ್ಲಿ ಪ್ರಯಾಣಿಸುವಾಗ ತನ್ನ ಒಂದು ವರ್ಷದ ಮಗು ಸ್ಥಳದ ಕೊರತೆಯಿಂದ ಕೆಳಗೆ ಬಿದ್ದಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.