ಶೀಘ್ರದಲ್ಲೇ ಮದುವೆ: ರಾಜಕುಮಾರ್ ರಾವ್ ಹೃದಯ ಕದ್ದ ನಟಿ ಯಾರು ಗೊತ್ತಾ?

ಈಗಾಗಲೇ ಈ ಜೋಡಿ ತಮ್ಮ ಕುಟುಂಬ ಸದಸ್ಯರು, ಬಂಧುಗಳು ಮತ್ತು ಆಪ್ತರಿಗೆ ಮದುವೆ ಆಮಂತ್ರಣ ನೀಡಿದೆ.

ಬಾಲಿವುಡ್ ಖ್ಯಾತ ನಟ ರಾಜಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಮತ್ತು ನಟಿ ಪತ್ರಲೇಖಾ ಅವರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ನವೆಂಬರ್ 10ರಂದು ಈ ಜೋಡಿ ಸಪ್ತಪದಿ ತುಳಿಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಈ ಜೋಡಿ ತಮ್ಮ ಕುಟುಂಬ ಸದಸ್ಯರು, ಬಂಧುಗಳು ಮತ್ತು ಆಪ್ತರಿಗೆ ಮದುವೆ ಆಮಂತ್ರಣ ನೀಡಿದೆ. ಮದುವೆಗೆ ಬೇಕಾದ ಸಕಲ ಸಿದ್ಧತೆಯೂ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನಟ ರಾಜಕುಮಾರ್ ರಾವ್ ಅವರ ಮನಕದ್ದ ಸುಂದರಿ ಯಾರು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಸುಮಾರು 1 ದಶಕದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ರಾಜ್‌ಕುಮಾರ್ ರಾವ್ ಇತ್ತೀಚೆಗೆ ‘ಕಪಿಲ್ ಶರ್ಮಾ ಶೋ’ಗೆ ಬಂದಿದ್ದಾಗ ತಮ್ಮ ಮದುವೆಯ ಬಗ್ಗೆ ಸುಳಿವು ನೀಡಿದ್ದರು. ಮದುವೆ ಬಗ್ಗೆ ಕಪಿಲ್ ಶರ್ಮಾ ನಟನನ್ನು ಪ್ರಶ್ನಿಸಿದ್ದರು. ಈ ವೇಳೆ ನಾಚಿಕೆಯಿಂದಲೇ ಮದುವೆ ಬಗ್ಗೆ ನಟ ಹೇಳಿಕೊಂಡಿದ್ದರು.

2 /6

ಕಾರ್ಯಕ್ರಮವೊಂದರಲ್ಲಿ ನಟ ರಾಜ್‌ಕುಮಾರ್ ರಾವ್ ಅವರು ನಟಿ ಪತ್ರಲೇಖಾರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದರು. ಈ ಸಮಯದಲ್ಲಿ ಪತ್ರಲೇಖಾ ಅವರು ನಟನ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲವಂತೆ. ‘ಲವ್ ಸೆಕ್ಸ್ ಔರ್ ಧೋಕಾ’ ಚಿತ್ರದಲ್ಲಿ ರಾಜಕುಮಾರ್ ನಿರ್ವಹಿಸಿದ ಪಾತ್ರವನ್ನು ಪತ್ರಲೇಖಾ ಇಷ್ಟಪಟ್ಟಿರಲಿಲ್ಲ. ಹೀಗಾಗಿ ನಟನ ವ್ಯಕ್ತಿತ್ವದ ಬಗ್ಗೆ ಅವರು ತಪ್ಪು ಭಾವನೆ ಹೊಂದಿದ್ದರಂತೆ. ಬಳಿಕ ಇಬ್ಬರು ಹತ್ತಿರವಾದಂತೆ ಪತ್ರಲೇಖಾ ಅವರನ್ನು ಇಷ್ಟಪಡಲು ಆರಂಭಿಸಿದರಂತೆ.

3 /6

ಪತ್ರಲೇಖಾರನ್ನು ಮೊದಲು ಜಾಹೀರಾತಿನಲ್ಲಿ ನೋಡಿದ್ದೆ ಎಂದು ರಾಜಕುಮಾರ್ ರಾವ್ ಹೇಳಿಕೊಂಡಿದ್ದಾರೆ. ನಟಿಯನ್ನು ನೋಡಿದ್ದ ಅವರು, ‘ ಈ ಹುಡಿಗ ಎಷ್ಟು ಮುದ್ದಾಗಿದ್ದಾಳೆ, ಸಾಧ್ಯವಾದರೆ ಈಕೆಯನ್ನೇ ಮದುವೆಯಾಗಬೇಕು’ ಎಂದು ಅಂದುಕೊಂಡಿದ್ದರಂತೆ.

4 /6

ಮಾಧ್ಯಮಗಳ ವರದಿಯ ಪ್ರಕಾರ, ಈ ತಾರಾ ಜೋಡಿ ನವೆಂಬರ್ 10, 11 ಅಥವಾ 12 ರಂದು ಮದುವೆಯಾಗುತ್ತಾರೆಂದು ತಿಳಿದುಬಂದಿದೆ. ರಾಜ್‌ಕುಮಾರ್ ರಾವ್ ತಮ್ಮ ಆಪ್ತರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

5 /6

ಪತ್ರಲೇಖಾ ಬಾಲಿವುಡ್ ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್‌ಕುಮಾರ್ ರಾವ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪತ್ರಲೇಖಾ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ತೆರೆಕಂಡ ‘ಸಿಟಿ ಲೈಟ್ಸ್’ ಚಿತ್ರದಲ್ಲಿ ಪತ್ರಲೇಖಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

6 /6

ಇದಾದ ಬಳಿಕ ಪತ್ರಲೇಖಾ ‘ಲವ್ ಗೇಮ್ಸ್’ ಮತ್ತು ‘ನಾನು ಕಿ ಜಾನು’ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪತ್ರಲೇಖಾ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಬದ್ನಾಮ್ ಗಲಿ, ಫರ್ಬಿಡನ್ ಲವ್, ಮೇನ್ ಹೀರೋ ಬೋಲ್ ರಹಾ ಹೂನ್ ಮುಂತಾದ ಕಾರ್ಯಕ್ರಮಗಳನ್ನು ಮಾಡಿದ್ದಾರೆ.