Ramachari Kannada Serial: ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?

Ramachari Real Father: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಮಾಚಾರಿ ಕನ್ನಡ ಸಿರೀಯಲ್‌ ಪ್ರೇಕ್ಷಕರ ಮನೆಮಾತಾಗಿದೆ.. ಈ ಧಾರಾವಾಹಿ ನೋಡದ ಹೆಂಗಳೆಯರೇ ಇಲ್ಲ ಎನ್ನುವಂತಾಗಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಇದರಲ್ಲಿನ ಪ್ರತಿಯೊಂದು ಪಾತ್ರವೂ ನೋಡುಗರನ್ನು ಆಕರ್ಷಿಸುತ್ತವೆ.. ಅದೇ ರೀತಿ ನಾಯಕನಾಗಿ ಮಿಂಚುತ್ತಿರುವ ರಾಮಾಚಾರಿ ಕೂಡ.. ಇವರ ಪಾತ್ರಕ್ಕೆ ಅಭಿಮಾನಿಗಳಿಂದ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ.. 
 

1 /9

ಚಾರು-ರಾಮಾಚಾರಿ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿದೆ.. ಈ ಸಿರೀಯಲ್‌ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ.. ಈ ಧಾರವಾಹಿಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಋತ್ವಿಕ್‌..   

2 /9

ಆದರೆ ಇವರ ಹಿನ್ನಲೆ ಬಗ್ಗೆ ಕೆಲವು ಜನರಿಗೆ ಮಾತ್ರ ತಿಳಿದಿದೆ.. ಅಪ್ಪ ಅಮ್ಮನ ಒತ್ತಾಯದ ಮೇರೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರತಿಭೆ ರಿತ್ವಿಕ್..‌ ರಾಮಾಚಾರಿ ಸಿರೀಯಲ್‌ ಪಾತ್ರಕ್ಕಾಗಿ ಸಾಷಕ್ಟು ಅಭ್ಯಾಸಗಳನ್ನು ತೊರೆದ ಹಾರ್ಡ್‌ವರ್ಕ್ರ್‌ ಇವರು..     

3 /9

ಬಣ್ಣದ ಲೋಕಕ್ಕೆ ಎಂಟ್ರಿಕೊಡುವ ಮುನ್ನ ಸಾಕಷ್ಟು ತಯಾರಿಗಳು ಬೇಕಾಗುತ್ತವೆ.. ಜೊತೆಗೆ ಅದೃಷ್ಟವೂ ಬೇಕು.. ಇದರೊಂದಿಗೆ ಕುಟುಂಬದ ಯಾರಾದರೂ ಇಂಡಸ್ಟ್ರಿಯಲ್ಲಿರಬೇಕು ಎನ್ನುತ್ತಾರೆ..   

4 /9

ಆದರೆ ಈ ಇದು ಎಲ್ಲರ ಜೀವನದಲ್ಲೂ ವರ್ಕ್‌ಔಟ್‌ ಆಗುವುದಿಲ್ಲ.. ಎಷ್ಟೋ ನಟ-ನಟಿಯರ ಮಕ್ಕಳು ಯಶಸ್ಸು ಸಿಗದೇ ಬಣ್ಣದ ಲೋಕವನ್ನೇ ಬಿಟ್ಟು ಹಿಂದೆ ಸರಿದವರಿದ್ದಾರೆ..    

5 /9

ಅದೇ ರೀತಿ ರಾಮಾಚಾರಿ ನಟ ರಿತ್ವಿಕ್‌ ತಂದೆ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದಾರೆ.. ಆದರೆ ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿಲ್ಲ..   

6 /9

ಹೌದು ತಮ್ಮ ಸ್ವಂತ ಬುದ್ದಿಯಿಂದಲೇ ಸಿನಿರಂಗದಲ್ಲಿ ಬೆಳೆಯಬೇಕು ಎನ್ನುವುದು ಈ ನಟನ ಆಸೆಯಾಗಿತ್ತು. ಹೀಗಾಗಿ ಆಡಿಷನ್ಕೊಟ್ಟು ಸೆಲೆಕ್ಟ್‌ ಆಗಿ ಸದ್ಯ ಕನ್ನಡಿಗರ ಮನೆಮಾತಾಗಿದ್ದಾರೆ.    

7 /9

ನಟ ರಿತ್ವಿಕ್‌ ಅವರ ತಂದೆಯ ಹೆಸರು ಪ್ರವೀಣ್..‌ ಇವರು ಕನ್ನಡ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.. ನಿರ್ದೇಶಕನಾಗಿ, ನಿರ್ಮಾಪಕನಾಗಿ, ಹಲವು ಸಿನಿಮಾಗಳನ್ನು ಕನ್ನಡ ಸಿನಿರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಿಶೇಷವೆಂದರೇ ಇವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ..     

8 /9

ಆದರೆ ಕನ್ನಡ ಸಿನಿರಂಗದಲ್ಲಿ ಇವರ ಪರಿಚಯ ಕಡಿಮೆ.. ಏಕೆಂದರೆ ಅವರು ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.. ತಾವು ತಮ್ಮ ಕೆಲಸ ಎನ್ನುವಂತೆ ಸರಳ ಜೀವನ ನಡೆಸುತ್ತಿದ್ದಾರೆ..     

9 /9

ಸದ್ಯ ರಾಮಾಚಾರಿ ಸಿರೀಯಲ್‌ನಿಂದ ನಟ ರಿತ್ವಿಕ್‌ ಅವರ ಕ್ರೇಜ್‌ ದೊಡ್ಡದಾಗಿ ಬದಲಾಗಿದೆ ಎಂದರೇ ಅತಿಶಯೋಕ್ತಿಯಲ್ಲ.. ತಮ್ಮ ಅಭಿನಯದಿಂದಲೇ ಎಲ್ಲರಿಗೂ ಮೋಡಿ ಮಾಡುತ್ತಿದ್ದಾರೆ ಈ ನಟ..