Bollywood couple kissed in public: ಬಾಲಿವುಡ್ ಸ್ಟಾರ್ ಜೋಡಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇಂಡಸ್ಟ್ರಿಯ ಟಾಪ್ ಜೋಡಿಗಳ ವೈಯುಕ್ತಿಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಹಜ. ಇದೀಗ ರಣಬೀರ್-ಆಲಿಯಾದಿಂದ ರಣವೀರ್-ದೀಪಿಕಾವರೆಗೆ ಅನೇಕ ಜೋಡಿಗಳು ಸಾರ್ವಜನಿಕವಾಗಿ ಚುಂಬಿಸಿರುವ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ. ಈ ಪಟ್ಟಿಯಲ್ಲಿ ಯಾವ ತಾರೆಯರ ಹೆಸರು ಸೇರಿದೆ ಎಂಬುದನ್ನು ನೋಡೋಣ
ಈ ಚಿತ್ರದಲ್ಲಿ ನೀವು ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯನ್ನು ಒಟ್ಟಿಗೆ ನೋಡಬಹುದು. ಪ್ರಶಸ್ತಿ ಸಮಾರಂಭದಲ್ಲಿ ಕಪಲ್ಸ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಈ ಚಿತ್ರಗಳು ಅವರ ಮದುವೆ ಮತ್ತು ಆರತಕ್ಷತೆ ಪಾರ್ಟಿಯ ಸಮಯದಲ್ಲಿ ತೆಗೆದಿದ್ದು. ಮದುವೆಯ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ಒಂದರಲ್ಲಿ ಇಬ್ಬರೂ ಪರಸ್ಪರ ಚುಂಬಿಸುತ್ತಿದ್ದಾರೆ. ಮತ್ತೊಂದರಲ್ಲಿ ಆಲಿಯಾ ರಣಬೀರ್ ನಗು ಬೀರಿದ್ದಾರೆ. ಈ ಫೋಟೋಗೆ ರಣಬೀರ್ ಮತ್ತು ಆಲಿಯಾ ಕೂಡ ಸಾಕಷ್ಟು ಟ್ರೋಲ್ ಆಗಿದ್ದರು.
ಸೈಫ್ ಮತ್ತು ಕರೀನಾ ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆಯೇ ತಮ್ಮ ಮನೆಯ ಹೊರಗೆ ಪರಸ್ಪರ ಚುಂಬಿಸಿದರು. ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೋದಿಂದ ದಂಪತಿ ಸಾಕಷ್ಟು ಟ್ರೋಲ್ ಆಗಿದ್ದು, ಮನೆಯಲ್ಲಿ ಇದನ್ನೆಲ್ಲಾ ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಈ ಫೋಟೋ ಪ್ರಶಸ್ತಿ ಸಮಾರಂಭದಲ್ಲಿ ತೆಗೆದಿದ್ದು. ಇದರಲ್ಲಿ ಇಬ್ಬರೂ ಕಿಸ್ ಮಾಡಿದ್ದಾರೆ. ಅಭಿಮಾನಿಗಳು ಫೋಟೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಅವರ ಪ್ರೇಮಕಥೆಯನ್ನು ಅವರ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ.
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಹಲವು ಬಾರಿ ಕ್ಯಾಮರಾ ಮುಂದೆ ರೊಮ್ಯಾಂಟಿಕ್ ಆಗಿದ್ದಾರೆ. ಈ ಜೋಡಿ ಚುಂಬಿಸುತ್ತಿರುವ ಫೋಟೋ ಫಿಲ್ಮ್ಫೇರ್ ಅವಾರ್ಡ್ಸ್ನದ್ದು. ಅಲ್ಲಿ ರಣವೀರ್ ಮೊಣಕಾಲೂರಿ ದೀಪಿಕಾಗೆ ತನ್ನ ಪ್ರಶಸ್ತಿಯನ್ನು ನೀಡಿದಾಗ ದೀಪಿಕಾ ಎಲ್ಲರ ಮುಂದೆ ಬಾಗಿ ಮುತ್ತಿಟ್ಟಿದ್ದರು.