ರೂ. 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ ಕೆಜಿಎಫ್‌ ನಟಿ ರವೀನಾ.! ಕಾರಣ ಏನು ಗೊತ್ತಾ..?

Raveena Tandon defamation case : ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಮುಂಬೈನಲ್ಲಿ ಕಾರು ಅಪಘಾತದಿಂದ ಸುದ್ದಿಯಲ್ಲಿದ್ದರು. ಕಾರನ್ನು ರಿವರ್ಸ್ ತೆಗೆದುಕೊಳ್ಳುವಾಗ ನಡೆದ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ನಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ..
 

1 /6

ಇತ್ತೀಚಿಗೆ ಚಿತ್ರರಂಗದ ಮಂದಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟಿ ಹೇಮಾ, ನಟ ದರ್ಶನ್, ಪವಿತ್ರ ಗೌಡ, ಬಿಜೆಪಿ ಫೈರ್ ಬ್ರ್ಯಾಂಡ್ ಕಂಗನಾ ರನೌತ್ ಮತ್ತು ರವೀನಾ ಟಂಡನ್ ಹೀಗೆ ಸಾಲು ಸಾಲು ನಟ ನಟಿಯರು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ.   

2 /6

ನಟಿ ರವೀನಾ ಮುಂಬೈನ ತಮ್ಮ ನಿವಾಸದಲ್ಲಿ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಮೂವರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ರವೀನಾ ಹೊರಗೆ ಬಂದು ಗಾಯಾಳುಗಳನ್ನು ಮಾತನಾಡಿದ್ದರು.  

3 /6

ಇದರಿಂದ ಬಹಳ ಹೊತ್ತು ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ.. ನಟಿ ರವೀನಾ ಜೊತೆ ಅಲ್ಲಿದ್ದವರು ಅನುಚಿತವಾಗಿ ವರ್ತಿಸಿದ್ದಾರೆ. ಇದಲ್ಲದೆ, ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.   

4 /6

ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ರವೀನಾ ಕುಡಿದಿದ್ದರು ಎಂದು ಕಮೆಂಟ್ ಕೂಡ ಮಾಡಿದ್ದಾರೆ. ಇದರಿಂದ ನಟಿ ತೀವ್ರ ಅಸಹನೆ ವ್ಯಕ್ತಪಡಿಸಿದ್ದಾಳೆ. ಘಟನೆ ನಡೆದಾಗ ರವೀನಾ ಟಂಡನ್ ಕುಡಿದಿರಲಿಲ್ಲ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.   

5 /6

ರವೀನಾ ಮದ್ಯಪಾನ ಮಾಡಿದ್ದಾಳೆ ಎಂದು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ವಕೀಲರ ಮೂಲಕ ಆತನಿಗೆ ನೊಟೀಸ್ ಕಳುಹಿಸಲಾಗಿದ್ದು, 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.    

6 /6

ಇಂಡಸ್ಟ್ರಿಯಲ್ಲಿ ತನಗೆ ವಿಶೇಷ ಗೌರವವಿದ್ದು, ಇಂತಹ ಪೋಸ್ಟ್‌ಗಳಿಂದ ತನ್ನ ಇಮೇಜ್ ಹಾಳಾಗುತ್ತದೆ ಎಂದು ರವೀನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಧ್ಯ ವಕೀಲರ ಮುಖಾಂತರ ನೋಟಿಸ್‌ ಕಳುಹಿಸಲಾಗಿದೆ.