Benefits of Walnuts: ಪ್ರತಿದಿನ ನೆನೆಸಿದ ವಾಲ್ನಟ್‌ ಸೇವಿಸಿದ್ರೆ ಇಷ್ಟೆಲ್ಲಾ ಪ್ರಯೋಜನಗಳಿವೆ

Health Benefits of Walnuts: ವಾಲ್ನಟ್ ಬೀಜಗಳು ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ. 

Health Benefits of Walnuts: ಪ್ರತಿದಿನ ಒಂದೆರಡು ವಾಲ್ನಟ್‌ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆದರೆ ಒತ್ತಡಮಯ ಜೀವನದಿಂದ ಇಂದು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಹೀಗಾಗಿ ಆರೋಗ್ಯಕರ ಆಹಾರ ಸೇವಿಸುವುದು ಉತ್ತಮ ಆರೋಗ್ಯದ ದೃಷ್ಟಿಯಿಂದ ಉತ್ತಮ. ನಿಯಮಿತವಾಗಿ ವಾಲ್ನಟ್‌ ಸೇವನೆಯಿಂದ ನೀವು ಹಲವಾರು ಕಾಯಿಲೆಗಳಿಂದ ದೂರವಿರಬಹುದು. ವಾಲ್ನಟ್‌ ಬೀಜಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಾಲ್ನಟ್ ಬೀಜಗಳು ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಹೇರಳವಾಗಿದ್ದು, ಮೆದುಳಿನ ಕಾರ್ಯ ಚಟುವಟಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಪ್ರತಿದಿನ ಒಂದೊಂದು ವಾಲ್ನಟ್ ಬೀಜವನ್ನು ನೆನೆಸಿ ತಿನ್ನುವುದರಿಂದ ನಮ್ಮ ಮಾನಸಿಕ ಅರಿವು, ನೆನಪಿನ ಶಕ್ತಿ ಮತ್ತು ಬುದ್ಧಿವಂತಿಕೆ ಸಹ ಹೆಚ್ಚಾಗುತ್ತದೆ.​

2 /5

ವಾಲ್ನಟ್ ಬೀಜಗಳು ಆರೋಗ್ಯಕರ ಕೊಬ್ಬು ಹಾಗೂ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಇದು ನಮ್ಮ ದೇಹದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ನಮ್ಮ ರಕ್ತದ ಒತ್ತಡವನ್ನು ಆರೋಗ್ಯಕರವಾಗಿ ನಿರ್ವಹಿಸುವುದರ ಜೊತೆಗೆ ನಮ್ಮ ಹೃದಯ ರಕ್ತನಾಳದ ಕಾಯಿಲೆಯನ್ನು ದೂರ ಮಾಡಿ ಹೃದಯಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತದೆ.​​

3 /5

ನೆನೆಸಿದ ವಾಲ್ನಟ್ ಬೀಜಗಳು ಫೈಟಿಕ್ ಆಮ್ಲವನ್ನು ಕಡಿಮೆಗೊಳಿಸುವ ಗುಣವನ್ನು ಹೊಂದಿವೆ. ಹೀಗಾಗಿ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ. ಇದರ ಜೊತೆಗೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟಂತೆ ಮಲಬದ್ಧತೆ, ಅಜೀರ್ಣತೆ ಹಾಗೂ ಹೊಟ್ಟೆಯುಬ್ಬರ ಸಮಸ್ಯೆ ಇರುವುದಿಲ್ಲ. ಕರುಳಿನ ಆರೋಗ್ಯವನ್ನು ಸಹ ಇದು ಉತ್ತಮಪಡಿಸುತ್ತದೆ.

4 /5

ನಮ್ಮ ದೇಹದ ತೂಕವನ್ನು ನಿರ್ವಹಣೆ ಮಾಡುವಲ್ಲಿ ವಾಲ್ನಟ್ ಬೀಜಗಳು ಸಹಕಾರಿಯಾಗಿದೆ. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ನಾರು ಹಾಗೂ ಪ್ರೋಟಿನ್ ಅಂಶವನ್ನು ಒಳಗೊಂಡಿದೆ. ಇವು ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ. ಇದರ ಜೊತೆಗೆ ಕ್ಯಾಲೋರಿಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ನಮ್ಮ ದೇಹದ ತೂಕ ಹೆಚ್ಚಾಗಲು ಬಿಡುವುದಿಲ್ಲ. ಹೀಗಾಗಿ ತೂಕ ನಿರ್ವಹಣೆಗೆ ವಾಲ್ನಟ್‌ ಸಹಕಾರಿಯಾಗಿದೆ. 

5 /5

ನಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವಾಲ್ನಟ್ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿ ವಿಟಮಿನ್ B5 ಮತ್ತು ವಿಟಮಿನ್ E ಪ್ರಮಾಣ ಅಧಿಕವಾಗಿದ್ದು, ಆರೋಗ್ಯಕರ ತ್ವಚೆಗೆ ಇವುಗಳು ಅಗತ್ಯವಾಗಿವೆ. ಈ ಪೌಷ್ಟಿಕ ಸತ್ವಗಳು ನಮ್ಮ ದೇಹದ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಚರ್ಮದ ಒಣಗುವಿಕೆಯಿಂದ ಮುಕ್ತಿ ನೀಡುತ್ತವೆ. ವಯಸ್ಸಾಗುವಿಕೆ ಪ್ರಕ್ರಿಯೆಯಿಂದ ನಮ್ಮನ್ನು ಕಾಪಾಡುತ್ತದೆ ಮತ್ತು ಕಾಂತಿಯುತ ಚರ್ಮ ನಮ್ಮದಾಗುತ್ತದೆ.​