Photos: ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ...

ರೆಬೆಲ್ಅಂ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಡ್ರಾಮಾ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಅಂಬರೀಶ್ ಅವರ ಚಿತ್ರಗಳನ್ನು ಯೋಗರಾಜ್ ಭಟ್ರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Nov 27, 2018, 02:01 PM IST

ಬೊಂಬೆ ಆಡ್ಸೋನು, ಮ್ಯಾಲೆ ಕುಂತವ್ನೆ ನಮ್ಗೆ -ನಿಮಗೆ ಯಾಕೆ ಟೆನ್ಷನ್ನು? ... ಲಗಾಮು ದೇವ್ರ ಕೈಲಿ   ನಾವೇನ್ ಮಾಡೋಣ? ಎಲ್ಲಾರೂ ಮುಚ್ಕಂಡು ಡ್ರಾಮ ಆಡೋಣ... ಅಂತ ಹಾಡಿ, ಹೆಜ್ಜೆ ಹಾಕಿದ್ದ ರೆಬೆಲ್ ಸ್ಟಾರ್ ಜೀವನದಲ್ಲೂ ಹಾಗೇ ಇದ್ದವರು. ಯಾವುದೇ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆದದ್ದಾಗಲಿ ಎಂದು ಜೀವನ ಸಾಗಿಸಿದವರು. ಯೋಗರಾಜ್ ಭಟ್ಟರ ನಿರ್ದೇಶನದ 'ಡ್ರಾಮಾ' ಸಿನಿಮಾ ಅವರಲ್ಲಿ ಅಂಬಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಅಷ್ಟೇ ಅಲ್ಲ, ಆ ಹಾಡು ಅವರಿಗೆ ಹೊಂದುವಷ್ಟೇ ಅಚ್ಚುಕಟ್ಟಾಗಿ ಯೋಗರಾಜ್ ಭಟ್ರು ಕೂಡ ಬರೆದಿದ್ರು... ಇದೀಗ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಡ್ರಾಮಾ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ಅಂಬರೀಶ್ ಅವರ ಚಿತ್ರಗಳನ್ನು ಯೋಗರಾಜ್ ಭಟ್ರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರ ಒಂದ್ ಝಲಕ್ ಇಲ್ಲಿದೆ...
 

1/15

2/15

3/15

4/15

5/15

6/15

7/15

8/15

9/15

10/15

11/15

12/15

13/15

14/15

15/15