ಈ ವರ್ಷದ ಆರಂಭದಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ನ ಸಿಇಒಗಳು ತಮ್ಮ ಗ್ರಾಹಕರಿಗೆ ಇದೇ ರೀತಿಯ ಎಚ್ಚರಿಕೆ ಸೂಚನೆಗಳನ್ನು ನೀಡಿದ್ದರು.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಇ-ಕೆವೈಸಿ ಹಗರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ ಸೈಬರ್ ವಂಚನೆಯ ಘಟನೆಗಳ ವಿರುದ್ಧ ಜಿಯೋ ತನ್ನ ಗ್ರಾಹಕರಿಗೆ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದೆ. ಅಮಾಯಕ ಗ್ರಾಹಕರನ್ನು ವಂಚಿಸಲು ವಂಚಕರ ಜಾಲ ಸಕ್ರಿಯವಾಗಿರುವ ಬಗ್ಗೆ ಕಂಪನಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ನ ಸಿಇಒಗಳು ತಮ್ಮ ಗ್ರಾಹಕರಿಗೆ ಇದೇ ರೀತಿಯ ಎಚ್ಚರಿಕೆ ಸೂಚನೆಗಳನ್ನು ನೀಡಿದ್ದರು. ಇದೀಗ ರಿಲಯನ್ಸ್ ಜಿಯೋ ಕೂಡ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ. ಸೈಬರ್ ವಂಚನೆ ತಪ್ಪಿಸಲು ಏನು ಮಾಡಬಾರದು ಅನ್ನೋದರ ಬಗ್ಗೆ ಜಿಯೋ ಬಳಕೆದಾರರಿಗೆ ಮಾಹಿತಿ ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Jio ತನ್ನ ಪ್ರಕಟನೆಯಲ್ಲಿ ಗ್ರಾಹಕರು ತಮ್ಮ KYC/Aadhaar ವಿವರಗಳನ್ನು ನವೀಕರಿಸಲು ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ನೀಡಿದೆ. ಇಂತಹ ಚಟುವಟಿಕೆಗಳಿಗೆ ಯಾವುದೇ Third Party App ಡೌನ್‌ಲೋಡ್ ಮಾಡುವಂತೆ ಜಿಯೋ ಎಂದಿಗೂ ನಿಮ್ಮನ್ನು ಕೇಳುವುದಿಲ್ಲವೆಂದು ತಿಳಿಸಿದೆ. ‘ದಯವಿಟ್ಟು ಇಂತಹ SMS/ಕರೆಗಳು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ, ಏಕೆಂದರೆ ವಂಚಕರು ನಿಮ್ಮ ಎಲ್ಲಾ ಫೋನ್ ಮಾಹಿತಿಯನ್ನು ಕದ್ದು ವಂಚನೆ ಎಸಗುತ್ತಾರೆ’ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ವಂಚಕರು ಜಿಯೋ ಪ್ರತಿನಿಧಿಗಳಂತೆ ವರ್ತಿಸಿ ಮುಖ್ಯವಾಗಿ ಬಾಕಿ ಉಳಿದಿರುವ ಇ-ಕೆವೈಸಿ (eKYC-Know Yourself) ಗ್ರಾಹಕರ ಆಧಾರ್, ಬ್ಯಾಂಕ್ ಖಾತೆಗಳು ಇತ್ಯಾದಿ ವಿವರಗಳ ನೆಪದಲ್ಲಿ OTP ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಒತ್ತಾಯಿಸುತ್ತಾರೆ. ಮಾಹಿತಿ ಪಡೆದ ಬಳಿಕ ಅವರು ನಿಮಗೆ ಗೊತ್ತಾಗದಂತೆ ವಂಚಿಸುತ್ತಾರೆ.
e-KYC ಪರಿಶೀಲನೆ(Verification)ಗಾಗಿ ಯಾವುದೇ ಸಂಖ್ಯೆಗೆ ಕರೆ ಮಾಡಲು ಕೇಳುವ ಸಂದೇಶಗಳ ಬಗ್ಗೆ ತುಂಬಾ ಎಚ್ಚರದಿಂದಿರಿ.
ಇ-ಕೆವೈಸಿ ಪೂರ್ಣಗೊಳಿಸಲು ಕೇಳುವ ಯಾವುದೇ ಎಸ್‌ಎಂಎಸ್/ಕರೆಯನ್ನು ನಂಬಬೇಡಿ ಅಥವಾ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ನಿಮ್ಮ ಮೊಬೈಲ್ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಎನ್ನುವ ಮೋಸದ ಕರೆಗಳಿಗೆ ಬಲಿಯಾಗಬೇಡಿ ಎಂದು ಕಂಪನಿಯು ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಜಿಯೋ ತನ್ನ ಪ್ರಕಟಣೆಯಲ್ಲಿ ಇ-ಕೆವೈಸಿ ಎಸ್‌ಎಂಎಸ್‌ನಲ್ಲಿ ನೀಡಲಾದ ಸಂಖ್ಯೆಗಳಿಗೆ ಮತ್ತೆ ಕರೆ ಮಾಡದಂತೆ ಗ್ರಾಹಕರಿಗೆ ತಿಳಿಸಿದೆ. ನೋಟಿಸ್‌ನ ಕಾರ್ಯನಿರ್ವಹಣೆಯನ್ನು ವಿವರಿಸುತ್ತಾ ‘ಸಾಮಾನ್ಯವಾಗಿ ವಿವರಗಳನ್ನು ಹಂಚಿಕೊಳ್ಳಲು ಕಾಲ್ ಬ್ಯಾಕ್ ಸಂಖ್ಯೆಯನ್ನು ಸಹ ಉಲ್ಲೇಖಿಸಲಾಗುತ್ತದೆ. ಗ್ರಾಹಕರು ನೀಡಿದ ಸಂಖ್ಯೆಗೆ ಕರೆ ಮಾಡಿದಾಗ ವಂಚಕರು ಹೇಳುವ Third Party ಅಪ್ಲಿಕೇಶನ್ ಅನ್ನು Install ಮಾಡಬೇಕಾಗುತ್ತದೆ. ಇದು ವಂಚಕರು ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ. ಇದರಿಂದ ಗ್ರಾಹಕರ ಫೋನ್ ಮತ್ತು ಸಂಬಂಧಿತ ಬ್ಯಾಂಕ್ ಖಾತೆಗಳ ವಿವರ ಪಡೆದುಕೊಳ್ಳುವುದು ಸೈಬರ್ ವಂಚಕರಿಗೆ ಸುಲಭವಾಗುತ್ತದೆ’ ಅಂತಾ ಜಿಯೋ ಎಚ್ಚರಿಕೆ ಸಂದೇಶ ನೀಡಿದೆ.
ಗ್ರಾಹಕರು Jio ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡುವವರು ಕಳುಹಿಸುವ ಸಂದೇಶಗಳಲ್ಲಿ ಸ್ವೀಕರಿಸಿದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇದು ಕೂಡ ಒಂದು ರೀತಿಯ ಸೈಬರ್ ಕ್ರೈಮ್. ಹೀಗಾಗಿ ಗ್ರಾಹಕರು ಯಾವುದೇ ಮೋಸದ ಕರೆಗಳಿಗೆ ಬಲಿಯಾಗಬಾರದು. ಯಾವುದೇ ಕಾರಣಕ್ಕೂ ಮುಖ್ಯವಾಗಿರುವ ಮಾಹಿತಿಯನ್ನು ನೀಡಬಾರದು ಎಂದು ಜಿಯೋ ಹೇಳಿಕೊಂಡಿದೆ.