Split Ends Remedies: ಕೂದಲು ಟಿಸಿಲೊಡೆಯುವ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುತ್ತದೆ ಈ ಮನೆ ಮದ್ದುಗಳು

Best remedies for split ends: ಕೂದಲು ಟಿಸಿಲೊಡೆಯುವ (Split Ends ) ಸಮಸ್ಯೆಗೆ  ಮನೆಯಲ್ಲಿಯೇ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಇಂದು ನಾವು ನೀಡಲಿದ್ದೇವೆ.  

Tips to prevent hair breakage: ಪ್ರತಿಯೊಬ್ಬರೂ ತಮ್ಮ ಕೂದಲು ಸುಂದರವಾಗಿರಬೇಕು ಮತ್ತು ಹೊಳೆಯುತ್ತಿರಬೇಕು ಎಂದು ಬಯಸುತ್ತಾರೆ. ಕೂದಲು ಹುಡುಗಿಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಬದಲಾಗುತ್ತಿರುವ ಹವಾಮಾನದಿಂದಾಗಿ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಂಡುಬರುತ್ತವೆ. ಕೂದಲಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಜನರು ಅನೇಕ ದುಬಾರಿ ವಸ್ತುಗಳನ್ನು ಬಳಸುತ್ತಾರೆ. ಇವು ರಾಸಾಯನಿಕಗಳಾಗಿರುವುದರಿಂದ  ಕೂದಲನ್ನು ಹಾನಿಗೊಳಿಸುತ್ತವೆ. ಕೂದಲು ಟಿಸಿಲೊಡೆಯುವ (Split Ends ) ಸಮಸ್ಯೆಗೆ  ಮನೆಯಲ್ಲಿಯೇ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಮಾಹಿತಿಯನ್ನು ಇಂದು ನಾವು ನೀಡಲಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಬದಲಾಗುತ್ತಿರುವ ಋತುಗಳಲ್ಲಿ ಕೂದಲು ಉದುರುವಿಕೆಯೊಂದಿಗೆ ಇತರ ಹಲವು ಸಮಸ್ಯೆಗಳು ಕಂಡುಬರುತ್ತವೆ. ಕೂದಲಿನಲ್ಲಿ Split Ends ಕಾಣಿಸಿಕೊಂಡಾಗ ಅವುಗಳನ್ನು ಕತ್ತರಿಸಲಾಗುತ್ತದೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ. ಇದನ್ನು ಹೋಗಲಾಡಿಸಲು,  ರಾಸಾಯನಿಕಗಳಿಲ್ಲದ ಉತ್ತಮ ಶಾಂಪೂವನ್ನು ಬಳಸಬೇಕು. ಕೂದಲಿಗೆ ಶಾಂಪೂ ಹಚ್ಚಿದ  ನಂತರ, ಕಂಡಿಷನರ್ ಅನ್ನು ಬಳಸಬೇಕು. ಹೀಗೆ ಮಾಡಿದರೆ ಇದು Split Ends ಸಮಸ್ಯೆ  ಕಡಿಮೆಯಾಗುತ್ತದೆ.   

2 /5

ಕೂದಲ ತುದಿ ಒಡೆಯಲು ಆರಂಭವಾದರೆ ಅದು ಬಹಳ ಕೆಟ್ಟದಾಗಿ ಕಾಣಿಸುತ್ತದೆ. ಇದರಿಂದಾಗಿ ಕೂದಲು ಸಂಪೂರ್ಣವಾಗಿ ನಿರ್ಜೀವವಾಗಿ ಬೆಳವಣಿಗೆ ನಿಲ್ಲಿಸುತ್ತದೆ. ನೀವು ವಾರಕ್ಕೊಮ್ಮೆ ಹೇರ್ ಮಾಸ್ಕ್ ಅನ್ನು ಬಳಸಬೇಕು. ಈ ಹೇರ್ ಮಾಸ್ಕ್ ಅನ್ನು ಮನೆಯಲ್ಲಿಯೇ  ತಯಾರಿಸಬಹುದು. ಮೊಟ್ಟೆಯ ಹಳದಿ ಭಾಗವನ್ನು ಹೇರ್ ಮಾಸ್ಕ್ ಗೆ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.ಅಲೋವೆರಾ ಮಾಸ್ಕ್ ಅನ್ನು ಕೂಡಾ ಹಚ್ಚಬಹುದು.    

3 /5

ತಮ್ಮ ಕೂದಲನ್ನು ಪದೇ ಪದೇ ಬ್ರಷ್ ಮಾಡುವವರಿದ್ದಾರೆ. ಆದರೆ ಹಾಗೆ ಮಾಡಬಾರದು. ಇದು ಕೂದಲನ್ನು ದುರ್ಬಲಗೊಳಿಸುತ್ತದೆ. ಕೂದಲು ಒಡೆಯುವುದು ಕೂಡಾ ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದಕೂದಲಿನಲ್ಲಿರುವ ತೇವಾಂಶವೆಲ್ಲವೂ ಮಾಯವಾಗುತ್ತದೆ. 

4 /5

Split Ends  ಸಮಸ್ಯೆಯನ್ನು ಹೋಗಲಾಡಿಸಲು, ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡಬೇಕು. ಆಯಿಲ್ ಮಸಾಜ್ ಮಾಡುವುದರಿಂದ ಕೂದಲು ಉದ್ದ, ದಪ್ಪ ಮತ್ತು ಮೃದುವಾಗುತ್ತದೆ. ಆಯಿಲ್ ಮಾಸಾಜ್ ಮಾಡುವುದರಿಂದ  Split Ends ಸಮಸ್ಯೆಯೂ ಪರಿಹಾರವಾಗುತ್ತದೆ. ಕೂದಲನ್ನು ತಣ್ಣೀರಿನಿಂದ ತೊಳೆಯಬೇಕು ಎನ್ನುವುದು ಕೂಡಾ ಬಹಳ ಮುಖ್ಯ.   

5 /5

ಪಪ್ಪಾಯಿವನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದು ಕೂದಲನ್ನು ಸಹ ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. Split Ends ಸಮಸ್ಯೆಯೂ ದೂರವಾಗುತ್ತದೆ. (ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)