Remove Bad Luck Remedies: ಬೆಳಗ್ಗೆ ಮಾಡುವ ಈ ಉಪಾಯಗಳೂ ಕೂಡ ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುತ್ತವೆ

Bad Luck Upay: ಸತ್ಕರ್ಮಗಳನ್ನು ಮಾಡಿದರೆ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. ಆದರೆ ಹಲವು ಬಾರಿ, ಒಳ್ಳೆಯ ಕರ್ಮಗಳನ್ನು ಮಾಡಿದ ಬಳಿಕವೂ ಕೂಡ ಒಬ್ಬ ವ್ಯಕ್ತಿಗೆ ಆತ ಬಯಸಿದ್ದೆಲ್ಲವೂ ಸಿಗುವುದಿಲ್ಲ. 

Bad Luck Upay: ಸತ್ಕರ್ಮಗಳನ್ನು ಮಾಡಿದರೆ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. ಆದರೆ ಹಲವು ಬಾರಿ, ಒಳ್ಳೆಯ ಕರ್ಮಗಳನ್ನು ಮಾಡಿದ ಬಳಿಕವೂ ಕೂಡ ಒಬ್ಬ ವ್ಯಕ್ತಿಗೆ ಆತ ಬಯಸಿದ್ದೆಲ್ಲವೂ ಸಿಗುವುದಿಲ್ಲ. ವ್ಯಕ್ತಿಯ ಅದೃಷ್ಟ ಅವನಿಗೆ ಪರವಾಗಿಲ್ಲ ಎಂದರೆ, ಗ್ರಹಗಳ ಕೆಟ್ಟ ಪ್ರಭಾವ ಇದಕ್ಕೆ ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳಗ್ಗೆ ಮಾಡಬೇಕಾದ ಕೆಲ ಕೆಲಸಗಳ ಬಗ್ಗೆ ಉಲ್ಲೇಖಿಸಲಾಗಿದೆ,  ಬೆಳಗ್ಗೆ ಅವುಗಳನ್ನು ನಿಯಮಿತವಾಗಿ ಮಾಡಬೇಕು ಎನ್ನಲಾಗಿದೆ, ಇದರಿಂದ ವ್ಯಕ್ತಿಯ ದುರಾದೃಷ್ಟ ಅದೃಷ್ಟದಲ್ಲಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. 

 

ಇದನ್ನೂ ಓದಿ-Business Idea: ಜಾನುವಾರಗಳ ಬಗ್ಗೆ ಪ್ರೀತಿ ಇದ್ದರೆ, ಇಂದೇ ಈ ಉದ್ಯಮ ಆರಂಭಿಸಿ ಕೈತುಂಬಾ ಸಂಪಾದಿಸಿ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

1 /5

1. ಇಷ್ಟ ದೇವನನ್ನು ಆರಾಧಿಸಿ- ನಿಮ್ಮ ಇಷ್ಟ ದೇವನನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಯ ದುರಾದೃಷ್ಟ ಅದೃಷ್ಟವಾಗಿ ಬದಲಾಗುತ್ತದೆ ಎಂದು ನಂಬಲಾಗಿದೆ. ದೇವರ ಆಶೀರ್ವಾದದಿಂದ, ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಅವನು ಪ್ರಗತಿ ಪಥದಲ್ಲಿ ಮುಂದುವರಿಯುತ್ತಾನೆ.

2 /5

2. ಗಾಯತ್ರಿ ಮಂತ್ರದ ಜಪ ಬಿಕ್ಕಟ್ಟನ್ನು ನಿವಾರಿಸುತ್ತದೆ- ಹಿಂದೂ ಧರ್ಮದ ಅನೇಕ ಮಂತ್ರಗಳಲ್ಲಿ ಗಾಯತ್ರಿ ಮಂತ್ರವೂ ಒಂದಾಗಿದೆ. ಇವು ಅತ್ಯಂತ ಪ್ರಭಾವಶಾಲಿ ಮಂತ್ರಗಳಾಗಿವೆ. ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯಲ್ಲಿ ಸಕಾರಾತ್ಮಕತೆ ಬೆಳೆಯುತ್ತದೆ ಎಂದು ನಂಬಲಾಗಿದೆ. ಇದೇ ವೇಳೆ ದುಃಖ ಮತ್ತು ಬಡತನವೂ ನಿವಾರಣೆಯಾಗುತ್ತದೆ. ಈ ಮಂತ್ರದ ನಿಯಮಿತವಾದ ಪಠಣವು ವ್ಯಕ್ತಿಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ನಂಬಲಾಗಿದೆ.

3 /5

3. ಕಣ್ಣು ತೆರೆದ ತಕ್ಷಣ ಈ ಮಂತ್ರವನ್ನು ಪಠಿಸಿ- ಧಾರ್ಮಿಕ ಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಯು ಬೆಳಗ್ಗೆ ಎದ್ದ ತಕ್ಷಣ ತನ್ನ ಅಂಗೈಗಳನ್ನು ನೋಡಬೇಕು ಎನ್ನಲಾಗಿದೆ. ವ್ಯಕ್ತಿಯ ಕೈಯಲ್ಲಿ ತಾಯಿ ಲಕ್ಷ್ಮಿ, ತಾಯಿ ಸರಸ್ವತಿ ಮತ್ತು ಶ್ರೀವಿಷ್ಣುವಿನ ಸ್ಥಾನವಿದೆ ಎಂದು ನಂಬಲಾಗಿದೆ. ಹೀಗಾಗಿ ಬೆಳಗ್ಗೆ ಎದ್ದಾಕ್ಷಣ, ಒಮ್ಮೆ ಎರಡೂ ಅಂಗೈಗಳನ್ನು ಜೋಡಿಸಿ ನಮಸ್ಕರಿಸಬೇಕು ಮತ್ತು ನಂತರ ಎರಡೂ ಅಂಗೈಗಳನ್ನು ನೋಡುತ್ತಾ  ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿಯ ದುರಾದೃಷ್ಟ ಅದೃಷ್ಟವಾಗಿ ಬದಲಾಗುತ್ತದೆ.  ಮಂತ್ರ ಕರಾಗ್ರೇ ವಸತೇ ಲಕ್ಷ್ಮೀ: ಕರಮಧ್ಯೇ ಸರಸ್ವತಿ. ಕರ್ಮೂಲೇ ತು ಗೋವಿಂದಃ: ಪ್ರಭಾತೇ ಕರದರ್ಶನಮ್.  

4 /5

4. ತುಳಸಿಯಲ್ಲಿ ದೀಪ ಹಚ್ಚಿ- ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನವಿದೆ. ತುಳಸಿಯನ್ನು ನಿಯಮಿತವಾಗಿ ಪೂಜಿಸುವುದರಿಂದ ವ್ಯಕ್ತಿಯ ದುರದೃಷ್ಟ ದೂರವಾಗುತ್ತದೆ ಮತ್ತು ಅವನು ಅದೃಷ್ಟವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಬೆಳಗ್ಗೆ ಎದ್ದ ನಂತರ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ನಿಯಮಿತವಾಗಿ ತುಳಸಿಯ ಮುಂದೆ ತುಪ್ಪದ ದೀಪವನ್ನು ಬೆಳಗಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯಿಂದ ಹೊರ ಹೋಗುತ್ತದೆ.

5 /5

5. ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು - ಸೂರ್ಯನನ್ನು ಎಲ್ಲಾ ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಸೂರ್ಯನು ಪೂರ್ವಜರಿಗೆ ಸಂಬಂಧಿಸಿದ್ದಾನೆ. ಆದ್ದರಿಂದ ನಿತ್ಯವೂ ಸೂರ್ಯ ದೇವರಿಗೆ ನೀರು ಅರ್ಪಿಸುವುದರಿಂದ ಪೂರ್ವಜರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಸ್ನಾನದ ನಂತರ ತಾಮ್ರದ ಪಾತ್ರೆಯಿಂದ ನೀರನ್ನು ಅರ್ಪಿಸುವುದರಿಂದ ವ್ಯಕ್ತಿಗೆ ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಸಿಗುತ್ತದೆ. ಇದೇ ವ್ಯಕ್ತಿ ಒಬ್ಬ ವ್ಯಕ್ತಿಗೆ ಪಿತೃದೋಷವಿದ್ದರೆ ಅದೂ ಕೂಡ ನಿವಾರಣೆಯಾಗುತ್ತದೆ.