Honeymoon Photos: ಪತಿ ಜೊತೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಐಎಎಸ್ ಟೀನಾ ದಾಬಿ

ಐಎಎಸ್ ಅಧಿಕಾರಿಗಳಾದ ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ ರೋಮ್ಯಾಂಟಿಕ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನವದೆಹಲಿ: ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ತಮ್ಮ ಪತಿ ಪ್ರದೀಪ್ ಗವಾಂಡೆ ಅವರೊಂದಿಗೆ ಗೋವಾದಲ್ಲಿ ರಜಾದಿನವನ್ನು ಆನಂದಿಸುತ್ತಿದ್ದಾರೆ. ತಮ್ಮ ಹನಿಮೂನ್ ರೋಮ್ಯಾಂಟಿಕ್ ಪೋಟೋಗಳನ್ನು ಸ್ವತಃ ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಟೀನಾ ಮತ್ತು ಪ್ರದೀಪ್ ಅವರ ಮಧುಚಂದ್ರದ ಪ್ರಣಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಜೋಡಿ ಏಪ್ರಿಲ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಮದುವೆಯ ನಂತರ ಮೊದಲ ಬಾರಿಗೆ ಇಬ್ಬರು ಗೋವಾ ಪ್ರವಾಸ ಕೈಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಗೋವಾ ಪ್ರವಾಸದ ವೇಳೆ ಟೀನಾ ದಾಬಿ ತಮ್ಮ ಪತಿ ಪ್ರದೀಪ್ ಗವಾಂಡೆ ಅವರೊಂದಿಗೆ ಬೀಚ್‌ನಲ್ಲಿ ಸಾಕಷ್ಟು ಮೋಜು-ಮಸ್ತಿ ಮಾಡಿದ್ದಾರೆ. ಟೀನಾ ಅವರೇ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹನಿಮೂನ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಮುದ್ರದ ತಟದಲ್ಲಿ ದಂಪತಿ ಸಖತ್ ಎಂಜಾಯ್ ಮಾಡಿದ್ದಾರೆ.

2 /5

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವಾಗ ಟೀನಾ ದಾಬಿ ರೋಮ್ಯಾಂಟಿಕ್ ಸಂದೇಶವಿರುವ ಕ್ಯಾಪ್ಶನ್ ಬರೆದಿದ್ದಾರೆ. ಗೋವಾ ಪ್ರವಾಸದ ಫೋಟೋಗಳಿಗೆ ‘ನಾವು ಅಲೆಗಳ ಜೊತೆ ಒಂದಾಗುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ. ಚಿತ್ರಗಳಲ್ಲಿ ಟೀನಾ ಮತ್ತು ಪ್ರದೀಪ್ ಗವಾಂಡೆ ಗೋವಾದ ಕಡಲತೀರದಲ್ಲಿ ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ಮೋಜು-ಮಸ್ತಿ ಮಾಡಿದ್ದಾರೆ.

3 /5

ಟೀನಾ ದಾಬಿ ಮತ್ತು ಪತಿ ಪ್ರದೀಪ್ ಗವಾಂಡೆ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿವೆ. ಫೋಟೋಗಳನ್ನು ನೋಡಿದ ಅನೇಕರು ದಂಪತಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಅತ್ಯುತ್ತಮ ಜೋಡಿ’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

4 /5

ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ ಜೂನ್ 20ರಂದು ಜೈಪುರದಲ್ಲಿ ಅತ್ಯಂತ ಸರಳವಾಗಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದಾದ ನಂತರ ಜೈಪುರದಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು.

5 /5

ಟೀನಾ ದಾಬಿ ಮೊದಲು ಐಎಎಸ್ ಅಧಿಕಾರಿ ಮತ್ತು ಜಮ್ಮು ಮತ್ತು ಕಾಶ್ಮೀರದ ನಿವಾಸಿ ಅಥರ್ ಅಮೀರ್ ಖಾನ್ ಜೊತೆ ವಿವಾಹವಾಗಿದ್ದರು. ಆದರೆ ಇವರಿಬ್ಬರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಹೀಗಾಗಿ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರೂ ವಿಚ್ಛೇದನ ಪಡೆದುಕೊಂಡು ದೂರವಾದರು. ಬಳಿಕ ಟೀನಾ ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರನ್ನು 2ನೇ ಬಾರಿಗೆ ವಿವಾಹವಾದರು. ಅದೇ ರೀತಿ ಅಥರ್ ಕೂಡ 2ನೇ ಮದುವೆಗೆ ಸಿದ್ಧತೆ ನಡೆಸಿದ್ದು, ಇತ್ತೀಚೆಗಷ್ಟೇ ಡಾ.ಮೆಹ್ರೀನ್ ಖಾಜಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.