Russia: ಪೊಲೀಸಪ್ಪನ ಐಷಾರಾಮಿ ಬಂಗಲೆಯಲ್ಲಿ ಚಿನ್ನದ ಶೌಚಾಲಯ!

                      

ಭ್ರಷ್ಟಾಚಾರದ ಆರೋಪದ ಮೇಲೆ ರಷ್ಯಾದ ಪೊಲೀಸ್ ಅಧಿಕಾರಿಯನ್ನು ವಜಾ ಮಾಡಲಾಗಿದೆ. ರಷ್ಯಾದ ಸ್ಟಾವ್ರೊಪೋಲ್ ಪ್ರದೇಶದ ಪೊಲೀಸ್ ಕರ್ನಲ್ ಅಲೆಕ್ಸಿ ಸಫೊನೊವ್  (Alexey Safonov) ತನ್ನ 35 ಅಧಿಕಾರಿಗಳೊಂದಿಗೆ ಮಾಫಿಯಾ ಗ್ಯಾಂಗ್ ನಡೆಸುತ್ತಿದ್ದನೆಂದು ಆರೋಪಿಸಲಾಗಿದ್ದು, ಲಂಚ ಪಡೆದ ಅನುಮಾನದ ಮೇಲೆ ಬಂಧಿಸಲಾಗಿದೆ. ರಷ್ಯಾದ ತನಿಖಾ ಸಮಿತಿಯು ಸ್ಟಾವ್ರೊಪೋಲ್ನ ದಕ್ಷಿಣ ಪ್ರದೇಶದ ಪೊಲೀಸ್ ಕರ್ನಲ್ ಅಲೆಕ್ಸಿ ಸಫೊನೊವ್ ಮತ್ತು ಇತರ ಆರು ಜನರನ್ನು ಬಂಧಿಸಿದೆ. ಏತನ್ಮಧ್ಯೆ, ರಷ್ಯಾದ ಪೊಲೀಸ್ ಅಧಿಕಾರಿಯ ಐಷಾರಾಮಿ ಮನೆಯ ಚಿತ್ರಗಳು ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಭ್ರಷ್ಟಾಚಾರದ ಆರೋಪದ ಮೇಲೆ ಕೆಲಸದಿಂದ ವಜಾಗೊಂಡಿರುವ ರಷ್ಯಾದ ಪೊಲೀಸ್ ಕರ್ನಲ್ ಅಲೆಕ್ಸಿ ಸಫೊನೊವ್ (Alexey Safonov) ಅವರ ಮನೆಯಲ್ಲಿನ ಶೌಚಾಲಯವನ್ನು ಭವ್ಯವಾಗಿ ಅಲಂಕರಿಸಲಾಗಿದೆ ಮತ್ತು ಶೌಚಾಲಯದ ಆಸನವನ್ನು ಚಿನ್ನದಿಂದ  (Solid Gold Toilet) ಮಾಡಲಾಗಿದೆ. (ಫೋಟೋ ಮೂಲ- ಡೈಲಿಮೇಲ್)

2 /7

ಡೈಲಿಮೇಲ್ ವರದಿಯ ಪ್ರಕಾರ, 45 ವರ್ಷದ ಅಲೆಕ್ಸಿ ಸಫೊನೊವ್ (Alexey Safonov) ವಾಹನ ಚಾಲಕರಿಂದ ಸುಲಿಗೆ ಮಾಡಿ ಲಂಚ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ಇದಲ್ಲದೆ ಸಫೊನೊವ್ ಕ್ರಿಮಿನಲ್ ಗ್ಯಾಂಗ್ ಅನ್ನು ಮುನ್ನಡೆಸುತ್ತಿದ್ದರೂ ಎಂದು ಹೇಳಲಾಗಿದೆ. ಸಫೊನೊವ್ ತನ್ನ ಮನೆಯ ಸ್ನಾನಗೃಹವನ್ನು ನಿರ್ಮಿಸಲು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಮತ್ತು ಇದು ಬರೊಕ್ ಕನ್ನಡಿಗಳು, ಡಬಲ್ ಎಂಡ್ ಸ್ನಾನದ ಉಪಕರಣಗಳು ಸೇರಿದಂತೆ ಈ ಅನೇಕ ಐಶಾರಾಮಿ ವಸ್ತುಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. (ಫೋಟೋ ಮೂಲ - ಡೈಲಿಮೇಲ್)

3 /7

ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗಳು ಪೊಲೀಸ್ ಅಧಿಕಾರಿ ಅಲೆಕ್ಸಿ ಸಫೊನೊವ್ (Alexey Safonov)ಅವರ ಮನೆಯ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಸಫೊನೊವ್ ಅವರ ಐಷಾರಾಮಿ ಮಲಗುವ ಕೋಣೆ ಗಿಲ್ಟ್ ವಾಲ್ಪೇಪರ್, ಹೆವಿ ಸ್ಕ್ರೀನ್ ಮತ್ತು ಐಷಾರಾಮಿ ಹಾಸಿಗೆಯನ್ನು ಒಳಗೊಂಡಿದೆ. (ಫೋಟೋ ಮೂಲ- ಡೈಲಿಮೇಲ್)

4 /7

ಅಲೆಕ್ಸಿ ಸಫೊನೊವ್ (Alexey Safonov) ಅವರ ಮನೆಯ ಸ್ನಾನಗೃಹ ಮತ್ತು ಮಲಗುವ ಕೋಣೆಯ ಹೊರತಾಗಿ, ಅಡುಗೆಮನೆಯಲ್ಲಿಯೂ (Kitchen) ಚಿನ್ನದ ಕಲಾಕೃತಿಗಳಿವೆ. ಅಡುಗೆಮನೆಯಲ್ಲಿ ಅಮೃತಶಿಲೆ ಮತ್ತು ಚಿನ್ನದ ಮಾದರಿಯ ವಾರ್ಡ್ರೋಬ್ ಅನ್ನು ಹೊಂದಿದೆ. (ಫೋಟೋ ಮೂಲ- ಡೈಲಿಮೇಲ್) ಇದನ್ನೂ ಓದಿ- Coronavirus Update: ಭಾರತದಲ್ಲಿ Covid-19ನಿಂದ ಸುಮಾರು 50 ಲಕ್ಷ ಸಾವು, ಸ್ವಾತಂತ್ರ್ಯದ ನಂತರದ ಅತಿ ದೊಡ್ಡ ದುರಂತ ಎಂದ US ವರದಿ

5 /7

ಅಲೆಕ್ಸಿ ಸಫೊನೊವ್ (Alexey Safonov) ಅವರ ಮನೆಯಲ್ಲಿ ದೊಡ್ಡ ದೊಡ್ಡ ಕಣ್ಣು ಕುಕ್ಕುವಂತಹ ಲೈಟಿಂಗ್ ವ್ಯವಸ್ಥೆ ಕೂಡ ಇದೆ. ಇದಲ್ಲದೆ, ಗೋಡೆಗಳ ಮೇಲೆ ಭವ್ಯವಾದ ವರ್ಣಚಿತ್ರಗಳನ್ನು ಸ್ಥಾಪಿಸಲಾಗಿದೆ. (ಫೋಟೋ ಮೂಲ- ಡೈಲಿಮೇಲ್)  

6 /7

ಅಲೆಕ್ಸಿ ಸಫೊನೊವ್ (Alexey Safonov) ಅವರ ಮನೆಯಲ್ಲಿ ಬರೋಕ್ ಮಾರ್ಬಲ್ ಟೈಲಿಂಗ್ ಮತ್ತು ಸೀಲಿಂಗ್ ಜೊತೆಗೆ , ಮೆಟ್ಟಿಲುಗಳ ಬದಿಯ ಕಂಬಿಗಳಲ್ಲೂ ಚಿನ್ನದ ಲೇಪಿತ ಕೆಲಸ ಮಾಡಿಸಲಾಗಿದೆ. (ಫೋಟೋ ಮೂಲ- ಡೈಲಿಮೇಲ್) ಇದನ್ನೂ ಓದಿ- Nuclear Crisis: ಪರಮಾಣು ದಾಳಿಗೆ ಸಿದ್ಧತೆ ನಡೆಸುತ್ತಿದೆಯೇ ಚೀನಾ?

7 /7

ಅಲೆಕ್ಸಿ ಸಫೊನೊವ್(Alexey Safonov)  ಅವರೊಂದಿಗೆ ಈವರೆಗೆ 2 ಲಕ್ಷ ಪೌಂಡ್ (ಸುಮಾರು 2.04 ಕೋಟಿ ರೂ.) ಲಂಚದ ನೇರ ಸಾಕ್ಷ್ಯವನ್ನು ಭ್ರಷ್ಟಾಚಾರ ವಿರೋಧಿ ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ ಮತ್ತು ತನಿಖೆ ಇನ್ನೂ ಮುಂದುವರೆದಿದೆ ಎಂದು ವರದಿಯಾಗಿದೆ. (ಫೋಟೋ ಮೂಲ- ಡೈಲಿಮೇಲ್)