Salman Khan marriage: ನಟ ಸಲ್ಮಾನ್ ಖಾನ್ ತಮ್ಮ ನಟನೆಯ ಮೂಲಕ ಕೋಟಿಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ, ತಮ್ಮ ವೃತ್ತಿಯ ಕಾರಣದಿಂದಾಗಿ ಅಷ್ಟೆ ಅಲ್ಲ ಸಲ್ಮಾನ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇವರ ಮದುವೆಗೆ ಸಂಬಂಧ ಪಟ್ಟ ಸುದ್ದಿಗಳಂತೂ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡುತ್ತವೆ.

ತಮ್ಮ ಮದುವೆಯ ಕುರಿತಾದ ಪ್ರಶ್ನೆಗಳು ಎದ್ದಾಗಲೆಲ್ಲಾ ತುಟಿಕ್ ಪಿಟುಕ್ ಅನ್ನದೆ ಮೌನ ವಹಿಸುವ ಸಲ್ಮಾನ್ ಖಾನ್ ಈ ಭಾರಿ ಮನಬಿಚ್ಚಿ ಮದುವೆಯ ಕುರಿತು ಮಾತಾನಾಡಿದ್ದಾರೆ. ತಮ್ಮ ತಾಯಿ ಅವರಿಗಾಗಿ ಹುಡುಕಿದ ಹುಡುಗಿಯ ಕುರಿತು ಸಲ್ಮಾನ್ ಖಾನ್ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು, ಸಲ್ಮಾನ್ ಖಾನ್ ಅವರು ಈ ಮುಂಚೆ ಹಲವಾರು ನಟಿಯರೊಂದಿಗೆ ಡೇಟಿಂಗ್ ಮಟಿದ್ದರಾದರೂ, ಯಾರನ್ನು ಸಹ ಮದುವೆಯಾಗುವ ಅದೃಷ್ಟ ಬರಲೇ ಇಲ್ಲ, ಅವರ ಮಾಜಿ ಗೆಳೆತಿಯರೆಲ್ಲಾ ಸದ್ಯ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ತಾಯಿ ಅವರು ಐಶ್ವರ್ಯ ರೈ, ಕತ್ರಿನಾ ಕೈಫ್ ಅಲ್ಲದೆ ಅವರಿಗಿಂತ 17 ವರ್ಷ ಕಿರಿಯಳಾದ ಯುವತಿಯನ್ನು ಮದುವೆ ಮಾಡಿಕೊಡಲು ಬಯಸ್ಸಿದ್ದರಂತೆ.
ಈ ಹಿಂದೆ ರಂಗಸಿರಿಯಾ ಎಂಬ ಕಾರ್ಯಕ್ರಮದ ಸಲುವಾಗಿ ಸಲ್ಮಾನ್ ಖಾನ್ ಅವರು ಸಾನ್ಯ ಇರಾನಿ ಹಾಗೂ ಆಶಿಶ್ ಶರ್ಮಾ ಅವರನ್ನು ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ತಾಯಿ ಯಾರನ್ನು ಸೊಸೆಯಾಗಿ ಮಡಿಕೊಳ್ಳಲು ಬಯಸಿದ್ದರು ಎಂಬುದನ್ನು ಸಲ್ಮಾನ್ ಖಾನ್ ರಿವೀಲ್ ಮಾಡಿದ್ದಾರೆ.
ಸಾನ್ಯ ಇರಾನಿ ಅವರೆಂದರೆ ಸಲ್ಮಾನ್ ಕಾನ್ ಅವರಿಗೆ ತುಂಬಾ ಇಷ್ಟವಂತೆ, ಇದನ್ನು ಸ್ವತಃ ನಟಿಯ ಮುಂದೆಯೇ ಸಲ್ಮಾನ್ ಖಾನ್ ಅವರು ಬಿಚ್ಚಿಟ್ಟಿದ್ದರು.
ಸಂದರ್ಶನದಲ್ಲಿ ಮಾತನಾಡುತ್ತಾ, ನಮ್ಮ ತಾಯಿಯವರಿಗೆ ನೀವೆಂದರೆ ತುಂಬಾ ಇಷ್ಟ ಅವರು ನಿಮ್ಮನ್ನು ಅವರ ಸೊಸೆಯಾಗಿ ಮಾಡಿಕೊಳ್ಳಲು ಬಯಸಿದ್ದರು ಎಂಬುದನ್ನು ಸಲ್ಮಾನ್ ಖಾನ್ ಅವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು, ಈ ವಿಷಯ ಕೇಳುತ್ತಿದ್ದಂತೆ ಸಾನ್ಯ ಇರಾನಿ ಏನು ಮಾತನಾಡದೆ ನಾಚಿ ನೀರಾಗಿದ್ದರು.