New Samsung Smartphones Launched: Samsung Galaxy F12 ಹಾಗೂ Samsung Galaxy F02s ಮಾರುಕಟ್ಟೆಗೆ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

New Samsung Smartphones Launched - Galaxy F02s ಅನ್ನು ಲೋ ಬಜೆಟ್ ರೇಂಜ್ ಸೆಗ್ಮೆಂಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಬೆಲೆ ರೂ.8,999ಗಳಿಂದ ಆರಂಭವಾಗುತ್ತಿದೆ. ಇದರಲ್ಲಿ 5000 mAh ಬ್ಯಾಟರಿ ಸಾಮರ್ಥ್ಯ ನೀಡಲಾಗಿದ್ದು ಇದು 13MP ಟ್ರಿಪಲ್ ರಿಯರ್ ಕ್ಯಾಮರಾ ಸೆಟಪ್, ಸ್ನ್ಯಾಪ್ ಡ್ರ್ಯಾಗನ್ 450 ಪ್ರೋಸೆಸರ್ ಗಳಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ HD+ ಡಿಸ್ಪ್ಲೇ ನೀಡಲಾಗಿದೆ.

ನವದೆಹಲಿ: New Samsung Smartphones Launched - ಕೊರಿಯಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾಗಿರುವ Samsung ಪ್ರತಿ ತಿಂಗಳು ಮಾರುಕಟ್ಟೆಗೆ ನೂತನ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದೆ. ಈ ತಿಂಗಳು ಕೂಡ ಕಂಪನಿ ತನ್ನ ಎರಡು ಜಬರ್ದಸ್ತ್ ಫೋನ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಕಂಪನಿ ಇಂದು Samsung Galaxy F12 ಹಾಗೂ  Samsung Galaxy F02s ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಈ ಎರಡೂ ಫೋನ್ ಗಳು ಕೂಡ ಬಜೆಟ್ ಫೋನ್ ಆಗಿವೆ. ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್ ಕಾರ್ಟ್ ಮೇಲೆ ಸ್ಯಾಮ್ಸಂಗ್ ಈ ಫೋನ್ ಗಳನ್ನು ಬಿಡುಗಡೆಗೊಳಿಸಿದೆ.

 

ಇದನ್ನೂ ಓದಿ- Samsung Galaxy M51 ಮೇಲೆ ಸಿಗುತ್ತಿದೆ 6 ಸಾವಿರ ರೂಪಾಯಿಗಳ ರಿಯಾಯಿತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. Samsung Latest News - Samsung Galaxy F12 ಸ್ಮಾರ್ಟ್ ಫೋನ್ ನ ಆರಂಭಿಕ ಬೆಲೆ ರೂ.10,999 ಇದೆ. ಈ ಬೆಲೆಗೆ ನಿಮಗೆ 4 ಜಿಬಿ RAM ಹಾಗೂ 64GB ವೇರಿಯಂಟ್ ಸಿಗಲಿದೆ. ಇನ್ನೊಂದೆಡೆ ಈ ಫೋನ್ ನ 4GB RAM ಹಾಗೂ 128 GB ಸ್ಟೋರೇಜ್  ವೇರಿಯಂಟ್ ನ ಬೆಲೆ ರೂ.11,999 ನಿಗದಿಪಡಿಸಲಾಗಿದೆ.

2 /5

2. Samsung Galaxy F02s ಸ್ಮಾರ್ಟ್ ಫೋನ್ ಬೆಲೆಯ ಕುರಿತು ಹೇಳುವುದಾದರೆ, ಈ ಫೋನ್ ನ ಆರಂಭಿಕ ಬೆಲೆ ರೂ.8,999 ನಿಗದಿಪಡಿಸಲಾಗಿದೆ. ಈ ಬೆಲೆಗೆ ನಿಮಗೆ 3GB RAM ಹಾಗೂ 32 GB ಆಂತರಿಕ ಮೆಮೊರಿಯ ಸ್ಮಾರ್ಟ್ ಫೋನ್ ಸಿಗಲಿದೆ. ಆದರೆ, ಇದರ 4GB RAM ಮತ್ತು 64GB ವೇರಿಯಂಟ್ ಬೆಲೆ ರೂ.9, 999 ನಿಗದಿಪಡಿಸಲಾಗಿದೆ. ಈ ಎರಡೂ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್, ಸ್ಯಾಮ್ಸಂಗ್ ಆನ್ಲೈನ್ ಸ್ಟೋರ್ ಹಾಗೂ ಆಯ್ದ ರಿಟೇಲ್ ಅಂಗಡಿಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿವೆ.

3 /5

3. Samsung Galaxy F12 ವೈಶಿಷ್ಟ್ಯಗಳು ಇಂತಿವೆ - ಈ ಸ್ಮಾರ್ಟ್ ಫೋನ್ ಸೀ ಗ್ರೀನ್, ಸ್ಕೈಬ್ಲೂ, ಹಾಗೂ ಸೆಲೆಸ್ಟಲ್ ಬ್ಲಾಕ್ ಎಂಬ ಮೂರು ಕಲರ್ ಆಪ್ಸನ್ ನಲ್ಲಿ ಸಿಗುತ್ತಿದೆ. ಈ ಸ್ಮಾರ್ಟ್ ಫೋನ್ ನಲ್ಲಿ 6.5 ಇಂಚಿನ HD+ ಇನ್ಫಿನಿಟಿ 5 ಡಿಸ್ಪ್ಲೇ ನೀಡಲಾಗಿದೆ. ಇದು Exynos 850 ಪ್ರಾಸೆಸ್ಸರ್ ಚಾಲಿತವಾಗಿದೆ, ಈ ಫೋನ್ ಹಿಂಭಾಗದಲ್ಲಿ 48 MP ಪ್ರೈಮರಿ ಕ್ಯಾಮರಾ ಜೊತೆಗೆ 5MP, 2MP, 2MP ಕ್ವಾಡ್ ಕ್ಯಾಮರಾ ಸೆಟಪ್ ನೀಡಲಾಗಿದೆ. ಸೇಲ್ಫಿ ಹಾಗೂ ವಿಡಿಯೋ ಕಾಲಿಂಗ್ ಗಾಗಿ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ.

4 /5

4. Samsung Galaxy F02s ವೈಶಿಷ್ಟ್ಯಗಳು ಇಂತಿವೆ - ಈ ಸ್ಮಾರ್ಟ್ ಫೋನ್ ನಲ್ಲಿ ನಿಮಗೆ ಡೈಮಂಡ್ ಬ್ಲೂ, ಡೈಮಂಡ್ ವೈಟ್ ಹಾಗೂ ಡೈಮಂಡ್ ಬ್ಲಾಕ್ ಬಣ್ಣದ ಆಯ್ಕೆಗಳು ಇರಲಿವೆ. ಇದರಲ್ಲಿಯೂ ಕೂಡ ಉತ್ತಮ ವ್ಹಿವಿಂಗ್ ಗಾಗಿ 6.5 ಇಂಚಿನ HD+ ಡಿಸ್ಪ್ಲೇ ನೀಡಲಾಗಿದೆ.  ಈ ಫೋನ್ ಆಕ್ಟಾಕೋರ್ ಕ್ವಾಲ್ ಕಾಂ 450 ಒಳಗೊಂಡಿದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇವು ಒಟ್ಟು 48MP, 5MP ಹಾಗೂ 2MP ಸಾಮರ್ಥ್ಯದ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲಿಂಗ್ ಗಾಗಿ ಮುಂಭಾಗದಲ್ಲಿ 5MP ಕ್ಯಾಮೆರಾ ನೀಡಲಾಗಿದೆ. 

5 /5

5. ಬ್ಯಾಟರಿ ಸಾಮರ್ಥ್ಯ - Samsung Galaxy F12 ಸ್ಮಾರ್ಟ್ ಫೋನ್ ನಲ್ಲಿ 6000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದರೆ, Samsung Galaxy F02sನಲ್ಲಿ 5000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಮೊದಲ ಫೋನ್ ನಲ್ಲಿ 15W USB-C ಫಾಸ್ಟ್ ಜಾರ್ಜರ್ ನೀಡಲಾಗಿದ್ದರೆ, ಎರಡನೇ ಫೋನ್ ನಲ್ಲಿ 15W ಫಾಸ್ಟ್ ಚಾರ್ಜರ್ ನೀಡಲಾಗಿದೆ.