Musuri Krishnamurthy wife and sons : ಹಿರಿಯ ನಟ ಮುಸುರಿ ಕೃಷ್ನಮೂರ್ತಿ ಕನ್ನಡ ಸಿನಿರಂಗದ ಅದ್ಭುತ ಆಸ್ತಿ. ತಮ್ಮ ನಟನಾ ಕೌಶಲ್ಯದಿಂದ ಚಂದನವನ್ನು ಮುಗಿಲೆತ್ತರಕ್ಕೆ ತೆಗೆದುಕೊಂಡು ಹೋದ ಅಪರೂಪದ ನಟರಲ್ಲಿ ಒಬ್ಬರು. ಖಳನಾಯಕನಾಗಿ ಸಿನಿಪಯಣ ಆರಂಭಿಸಿದ ನಟ, ನಂತರ ಹಾಸ್ಯ ಪಾತ್ರಗಳಲ್ಲಿ ನಟಿಸಿ ಕೀರ್ತಿ ಪಡೆದರು.
1930 ರಲ್ಲಿ ಮೈಸೂರಿನ ಬೆಟ್ಟದಪುರದಲ್ಲಿ ವಿಶ್ವೇಶ್ವರಯ್ಯ ಎಂಬ ಜಮೀನ್ದಾರರ ಮಗನಾಗಿ ಜನಿಸಿದ ಇವರು, ಬಾಲ್ಯದಿಂದಲೂ ಸಂಗೀತ ಮತ್ತು ಅಭಿನಯಗಳಲ್ಲಿ ಆಸಕ್ತಿ ಹೊಂದಿದ್ದರು. 1943 ರಲ್ಲಿ ಬಿಡುಗಡೆಯಾದ ʼವಾಣಿʼ ಸಿನಿಮಾದಲ್ಲಿ ಬಾಲನಟನಾಗಿ ನಟಿಸುವ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು.
1953 ರಲ್ಲಿ ಮಂಗಳ ಗೌರಿ, ಕನ್ಯಾದಾನ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿಜರ್ನಿ ಆರಂಭಿಸಿದರು. ಸುಶೀಲಮ್ಮ ಎಂಬುವವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯರಿದ್ದಾರೆ. ಪುತ್ರ ಜಯಸಿಂಹ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕ, ನಿರ್ದೇಕರಾಗಿ ಸಕ್ರಿಯವಾಗಿದ್ದಾರೆ.
ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಾಲಕ ಕೃಷ್ಣಮೂರ್ತಿಯವರು ಅದ್ಥುತ ಅಭಿನಯವನ್ನು ಕಂಡ ಕಣಗಾಲ್ ಪ್ರಭಾಕರಶಾಸ್ತ್ರಿಯವರು ತಮ್ಮ ಚಾಮುಂಡೇಶ್ವರಿ ನಾಟಕ ಸಂಸ್ಥೆಯಲ್ಲಿ ಅವಕಾಶ ದೊರಕಿಸಿಕೊಟ್ಟರು. ಕೆಲಕಾಲದ ನಂತರ ಗುಬ್ಬಿ ವೀರಣ್ಣನವರ ನಾಟಕ ಕಂಪನಿಗೆ ಸೇರಿದರು.
ಹಿರಣ್ಣಯ್ಯನವರ ನಾಟಕ ಮಂಡಳಿಯಲ್ಲೂ ಸೇವೆ ಸಲ್ಲಿಸಿದ ಕೃಷ್ಣಮೂರ್ತಿಯರು ಹಲವಾರು ನಾಟಕ ಕಂಪನಿಗಳಲ್ಲಿ ರಂಗಕರ್ಮಿಯಾಗಿ ಕಲಾ ಪ್ರದರ್ಶನ ನೀಡಿದ್ದಾರೆ. ಪಿಟೀಲು ಚೌಡಯ್ಯನವರ ʼವಾಣಿʼ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. 55ನೇ ವಯಸ್ಸಿನಲ್ಲಿ ಮುಸುರಿ ಕೃಷ್ಣಮೂರ್ತಿಯವರು 1985ರಲ್ಲಿ ಮರಣ ಹೊಂದಿದರು.
ಕೃಷ್ಣಮೂರ್ತಿಯವರ ಮಕ್ಕಳಾದ ಗುರುದತ್ ಮುಸುರಿ, ಜಯಸಿಂಹ ಮುಸುರಿ ತಮ್ಮ ತಂದೆಯ ವೃತ್ತಿಯನ್ನ ಮುಂದುವರೆಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ಇವರು, ಹಲವಾರು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಗುರುದತ್ ಮುಸುರಿ ಛಾಯಾಗ್ರಾಹಕರಾಗಿಯೂ ಕೆಲಸ ಮಾಡುತ್ತಿದ್ದಾರೆ.