Actress Malashri: ಮಾಲಾಶ್ರೀ ಅವರ ತಂಗಿ ಯಾರು ಗೊತ್ತಾ? ಇವರೂ ಕೂಡ ಕನ್ನಡದ ಸ್ಟಾರ್ ನಟಿ!

Malashri Sister: ನಟಿ ಮಾಲಾಶ್ರೀ ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾ ಮಾಡಿದ ಈ ಚೆಲುವೆಗೆ ಸಹೋದರಿಯೊಬ್ಬರಿದ್ದಾರೆ.. ಆಕೆಯೂ ಕನ್ನಡದ ಸ್ಟಾರ್‌ ನಟಿ ಆದರೆ ಯಶಸ್ಸು ಸಿಗದ ಕಾರಣ ಚಿತ್ರರಂಗದಿಂದ ದೂರ ಉಳಿದಿದ್ದಾರೆ.. 
 

1 /5

ಕನ್ನಡ ಸಿನಿ ರಂಗದಲ್ಲಿ ಲೇಡಿ ಟೈಗರ್‌ ಎಂದೇ ಗುರುತಿಸಿಕೊಂಡವರು ನಟಿ ಮಾಲಾಶ್ರೀ.. ಇವರ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕಾಲವೊಂದಿತ್ತು.. ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಿದ್ದ ಮಹಾನ್‌ ಕಲಾವಿದೆ ಈ ನಟಿ..   

2 /5

ಕನ್ನಡಿಗರ ಕನಸಿನ ರಾಣಿ ಎಂಬ ಪಟ್ಟ ಅಲಂಕರಿಸಿದ ಈ ಸ್ಟಾರ್‌ ನಟಿ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು.. ಎಲ್ಲ ದೊಡ್ಡ ದೊಡ್ಡ ಸ್ಟಾರ್‌ ನಟರೊಂದಿಗೂ ತೆರೆ ಹಂಚಿಕೊಂಡು ದೊಡ್ಡ ಹೆಸರು ಮಾಡಿದ್ದಾರೆ..   

3 /5

ನಂಜುಂಡಿ ಕಲ್ಯಾಣ ಚಿತ್ರ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಲಾಶ್ರೀ ಯಾವುದೇ ಭೇದವಿಲ್ಲದೇ ಎಲ್ಲ ಪಾತ್ರಗಳಲ್ಲಿಯೂ ನಟಿಸಿ ಮಿಂಚಿದ್ದಾರೆ.. ರಾಮಾಚಾರಿ, ದುರ್ಗಿ, ಕಿರಣ್‌ ಬೇಡಿ, ಚಾಮುಂಡಿ, ಹೀಗೆ ಹಲವಾರು ಪಾತ್ರಕ್ಕೆ ಜೀವತುಂಬಿದ ಖ್ಯಾತಿ ಇವರದ್ದು..    

4 /5

ನಟಿ ಮಾಲಾಶ್ರೀ ಅವರಿಗೆ ತಂಗಿಯೊಬ್ಬರಿದ್ದಾರೆ.. ಅವರ ಹೆಸರು ಶುಭಾಶ್ರೀ.. ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ ಇವರು ಅಷ್ಟಾಗಿ ಹೆಸರು ಮಾಡಲು ಸಾಧ್ಯವಾಗಲಿಲ್ಲ..  ದೇವರಾಜ್ ನಟನೆಯ ಸರ್ಕಲ್ ಇನ್ಸ್​ಸ್ಟೆಕ್ಟರ್ ಸಿನಿಮಾದಿಂದ ಇವರು ಖ್ಯಾತಿ ಗಳಿಸಿದರು..    

5 /5

ನಂತರ ಅವಕಾಶದಿಂದಾಗಿಯೋ ಅಥವಾ ಅದೃಷ್ಟದಿಂದಾಗಿಯೋ ಶುಭಾಶ್ರೀ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಟ್ಟಿರುವ ಕನ್ನಡದ ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ ತಂಗಿ ಕಾಣಿಸಿಕೊಂಡಿದ್ದರು..