ವೃತ್ತಿ ಜೀವನದ ಕೊನೆಯ ಪಂದ್ಯವಾಡಿದ ‘ಮೂಗುತಿ’ ಸುಂದರಿ: ಟೆನ್ನಿಸ್ ಲೋಕದಲ್ಲಿ ಲೆಕ್ಕವಿಲ್ಲದ ರೆಕಾರ್ಡ್ ಸೃಷ್ಟಿಸಿದ್ದ Sania Mirza

Sania Mirza Retires: ಭಾರತೀಯ ಟೆನಿಸ್ ದಂತಕಥೆ ಸಾನಿಯಾ ಮಿರ್ಜಾ ಇಂದು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ 2023 ಮಿಶ್ರ ಡಬಲ್ಸ್ ಫೈನಲ್‌ ಆಟವಾಡಿ ತಮ್ಮ ಟೆನ್ನಿಸ್ ಪಂದ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಆದರೆ ಈ ಪಂದ್ಯಾಟದಲ್ಲಿ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೋಲು ಕಂಡಿದೆ. ಮಾಜಿ ವಿಶ್ವ ನಂ. 1 ಡಬಲ್ಸ್ ತಾರೆ ತನ್ನ ಹೆಸರಿಗೆ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಸೇರ್ಪಡೆಗೊಳಿಸಿದ್ದಾರೆ. ಈ ಚಿತ್ರಗಳ ಸಂಗ್ರಹದಲ್ಲಿ, ನಾವು ಸಾನಿಯಾ ಮಿರ್ಜಾ ಅವರ ಟಾಪ್ ಸಾಧನೆಗಳನ್ನು ನೋಡೋಣ.

1 /5

ಸಾನಿಯಾ ಮಿರ್ಜಾ ಅವರು 2012 ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಮಹೇಶ್ ಭೂಪತಿ ಅವರ ಜೊತೆ ಆಟವಾಡಿ ಪಡೆದಿದ್ದರು. ಬಳಿಕ 2015 ರ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಯನ್ನು ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಗೆದ್ದಿದ್ದಾರೆ.

2 /5

ಸಾನಿಯಾ ಮಿರ್ಜಾ ಯುಎಸ್ ಓಪನ್‌ನಲ್ಲಿ ಎರಡು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದು, ಅವುಗಳೆಂದರೆ 2014 ರಲ್ಲಿ ಬ್ರೂನೋ ಸೋರೆಸ್ ಜೊತೆ ಮಿಶ್ರ ಡಬಲ್ಸ್ ಮತ್ತು 2015 ರಲ್ಲಿ ಮಾರ್ಟಿನಾ ಹಿಂಗಿಸ್ ಜೊತೆ ಮಹಿಳೆಯರ ಡಬಲ್ಸ್.

3 /5

ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯಾ ಓಪನ್‌ನಲ್ಲಿ ಎರಡು ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವುಗಳೆಂದರೆ 2009 ರ ಮಿಶ್ರ ಡಬಲ್ಸ್‌ನಲ್ಲಿ ಮಹೇಶ್ ಭೂಪತಿ ಜೊತೆ ಮತ್ತು 2016 ರ ಮಹಿಳಾ ಡಬಲ್ಸ್‌ನೊಂದಿಗೆ ಮಾರ್ಟಿನಾ ಹಿಂಗಿಸ್ ಜೊತೆ.

4 /5

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶುಕ್ರವಾರ (ಜನವರಿ 27) ತನ್ನ ಅಂತಿಮ ಗ್ರ್ಯಾಂಡ್ ಸ್ಲಾಮ್ ಪಂದ್ಯವನ್ನು ಆಡಿದ್ದಾರೆ. ರೋಹನ್ ಬೋಪಣ್ಣ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್ 2023 ರ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.

5 /5

ಸಾನಿಯಾ ಮಿರ್ಜಾ 2010 ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. 2018 ರಲ್ಲಿ ಅವರು ಮೊದಲ ಮಗು ಇಜಾನ್ ಗೆ ಜನ್ಮ ನೀಡಿದ್ದಾರೆ. ಸಾನಿಯಾ ಹೆರಿಗೆ ವಿರಾಮದ ನಂತರ 2020 ರಲ್ಲಿ ಟೆನಿಸ್‌ಗೆ ಮರಳಿದರು. ಅಂಕಿತಾ ರೈನಾ ಅವರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.