ಡಬಲ್ ಚಿನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಇಂದೇ ಆಹಾರಗಳನ್ನು ಬಿಡಿ

Double Chin: ಡಬಲ್ ಚಿನ್ ಸಮಸ್ಯೆಯನ್ನು ತಪ್ಪಿಸಲು ಯಾವ ಆಹಾರಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿಯಿರಿ. 

Double Chin: ವಯಸ್ಸಾದಂತೆ ಮುಖದಲ್ಲಿ ಡಬಲ್ ಚಿನ್ ಕಾಣುವುದು ಸರ್ವೇ ಸಾಮಾನ್ಯ. ಆದರೆ, ಮುಖದಲ್ಲಿ ಸಂಗ್ರಹವಾಗುವ ಕೊಬ್ಬು ಸೌಂದರ್ಯವನ್ನೇ ಹಾಳು ಮಾಡುತ್ತದೆ. ಆದರೆ, ನಾವು ಕೆಲವು ಆಹಾರಗಳಿಂದ ದೂರ ಉಳಿಯುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದಾಗಿದೆ. ಡಬಲ್ ಚಿನ್ ಸಮಸ್ಯೆಯನ್ನು ತಪ್ಪಿಸಲು ಯಾವ ಆಹಾರಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿಯಿರಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಒಬ್ಬೊಬ್ಬರೇ ಇದ್ದಾಗ ಅಡುಗೆ ಮಾಡುವುದೇ ಬೇಸರದ ಕೆಲಸ. ಹಾಗಾಗಿ,ಕೆಲವರು ಬೆಳಿಗ್ಗೆ ಉಪಹಾರದಲ್ಲಿ, ರಾತ್ರಿ ಊಟದ ಸಮಯದಲ್ಲಿ ಒಂದೆರಡು ಬ್ರೆಡ್ ತಿಂದರೆ ಸಾಕು ಎಂದು ದಿನ ತಳ್ಳುತ್ತಾರೆ. ಆದರೆ, ಇದರಿಂದ ಮುಖದಲ್ಲಿ ಕೊಬ್ಬು ಶೇಖರವಾಗುತ್ತದೆ ಎನ್ನುತ್ತಾರೆ ತಜ್ಞರು.

2 /5

ಜಂಕ್ ಫುಡ್ಸ್, ಚಾಟ್ಸ್ ಎಂದರೆ ಎಂತಹವರ ಬಾಯಲ್ಲೂ ನೀರು ಬರುತ್ತದೆ. ಆದರೆ, ಇವು ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರಮೇಣ ಈ ಆಹಾರಗಳು ನಿಮ್ಮ ಡಬಲ್ ಚಿನ್ ಸಮಸ್ಯೆಗೂ ಕಾರಣವಾಗಬಹುದು.

3 /5

ಆಲ್ಕೋಹಾಲ್ ಸೇವನೆಯಿಂದ ಕಿರಿಯ ವಯಸ್ಸಿನಲ್ಲಿಯೇ ಮುಖದಲ್ಲಿ ಡಬಲ್ ಚಿನ್ ಕಾಣಿಸಿಕೊಳ್ಳಬಹುದು.

4 /5

ಪ್ರೋಟೀನ್‌ನ ಪ್ರಮುಖ ಮೂಲವಾಗಿರುವ ರೆಡ್ ಮೀಟ್ ಆರೋಗ್ಯಕ್ಕೆ ಉತ್ತಮ ಆಹಾರ ಎಂಬುದರಲ್ಲಿ ಅನುಮಾನವಿಲ್ಲ. ಹಾಗಂತ, ಇದರ ಅತಿಯಾದ ಸೇವನೆಯು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಇದರ ಪರಿಣಾಮ ನಿಮ್ಮ ಮುಖದ ಮೇಲೂ ಗೋಚರಿಸುತ್ತದೆ.

5 /5

ಕೆಲವು ಆಹಾರಗಳಲ್ಲಿ ರುಚಿ ಹೆಚ್ಚಿಸಲು ಸೋಯಾಸಾಸ್ ಅನ್ನು ಬಳಸಲಾಗುತ್ತದೆ. ಆದರೆ, ಇದು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ, ಮುಖದಲ್ಲಿ ಡಬಲ್ ಚಿನ್ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ, ನೀವೂ ಈ ಆಹಾರಗಳನ್ನು ಅತಿಯಾಗಿ ಸೇವಿಸುವ ಅಭ್ಯಾಸ ಹೊಂದಿದ್ದರೆ, ಡಬಲ್ ಚಿನ್ ಸಮಸ್ಯೆಯನ್ನು ತಪ್ಪಿಸಲು ಇಂದಿನಿಂದಲೇ ಈ ಆಹಾರಗಳಿಂದ ದೂರ ಉಳಿಯಿರಿ. ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.