Sankranti 2023: ಈ ಬಾರಿಯ ಸಂಕ್ರಾಂತಿ ಬಹಳ ವಿಶೇಷವಾಗಿದೆ. ಏಕೆಂದರೆ ಶನಿಯ ರಾಶಿಗೆ ಸೂರ್ಯ ಪ್ರವೇಶಿಸಲಿದ್ದಾನೆ. ಶನಿ ಈಗಾಗಲೇ ಈ ರಾಶಿಯಲ್ಲಿ ಕುಳಿತಿದ್ದಾನೆ.
ಬೆಂಗಳೂರು : Sankranti 2023 : ಜ್ಯೋತಿಷ್ಯದ ಪ್ರಕಾರ, ಸೂರ್ಯನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನು ಪ್ರತಿ ತಿಂಗಳು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ ಮಾಘ ಮಾಸದಲ್ಲಿ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಹಿನ್ನೆಲೆಯಲ್ಲಿ ಸೂರ್ಯನ ಈ ಸಂಕ್ರಮಣವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ತಕ್ಷಣ, ಆ ರಾಶಿಯಲ್ಲಿ ಈಗಾಗಲೇ ಇರುವ ಶುಕ್ರ ಮತ್ತು ಶನಿಯೊಂದಿಗೆ ಸಂಯೋಗ ಹೊಂದಲಿದೆ. ಈ ಬಾರಿಯ ಸಂಕ್ರಾಂತಿ ಬಹಳ ವಿಶೇಷವಾಗಿದೆ. ಏಕೆಂದರೆ ಶನಿಯ ರಾಶಿಗೆ ಸೂರ್ಯ ಪ್ರವೇಶಿಸಲಿದ್ದಾನೆ. ಶನಿ ಈಗಾಗಲೇ ಈ ರಾಶಿಯಲ್ಲಿ ಕುಳಿತಿದ್ದಾನೆ. ಶನಿ ಮತ್ತು ಸೂರ್ಯ ತಂದೆ ಮಗನಾಗಿದ್ದರೂ ಇಬ್ಬರ ಮಧ್ಯೆ ಇರುವುದು ಶತ್ರು ಭಾವ. ಹಾಗಾಗಿ ತಂದೆ ಮತ್ತು ಮಗನ ಮುಖಾಮುಖಿ ಕೆಲವು ರಾಶಿಯವರ ಜೀವನದಲ್ಲಿ ಕೂಡಾ ಸಮಸ್ಯೆಯನ್ನು ಉಂಟು ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಸಿಂಹ ರಾಶಿ : ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ, ಸಿಂಹ ರಾಶಿಯ ಜನರು ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ಸಿಂಹ ರಾಶಿಯವರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಯಾರಿಗೂ ಸಾಲ ನೀಡುವ ಗೋಜಿಗೆ ಹೋಗಬೇಡಿ. ಈ ಸಮಯದಲ್ಲಿ ನೀಡಿದ ಸಾಲ ವಾಪಸ್ ಬರುವುದಿಲ್ಲ. ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ತಾಯಿಯ ಕಡೆಯಿಂದ ಕೆಲವು ಅಶುಭ ಸುದ್ದಿಗಳು ಬರಬಹುದು. ಇದರಿಂದ ಮನಸ್ಸು ಖಿನ್ನತೆಗೆ ಒಳಗಾಗಬಹುದು. ಕೌಟುಂಬಿಕ ಜೀವನದಲ್ಲೂ ಏರಿಳಿತಗಳಿರಬಹುದು.
ತುಲಾ ರಾಶಿ : ಈ ರಾಶಿಯ ಜನರು ಕೌಟುಂಬಿಕ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಕುಟುಂಬದಲ್ಲಿ ಬಿರುಕು ಉಂಟಾಗಬಹುದು. ಮಾನಸಿಕವಾಗಿ ತೊಂದರೆಯಾಗುತ್ತದೆ. ಈ ಸಮಯದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರಿಂದ ಅಹಿತಕರ ಸುದ್ದಿಗಳನ್ನು ಪಡೆಯಬಹುದು. ಪ್ರವಾಸಕ್ಕೆ ಹೋಗುವ ಪ್ಲಾನ್ ಇದ್ದರೆ ಹುಷಾರಾಗಿರಿ. ಪೋಷಕರ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಬೇಕು.
ಧನು ರಾಶಿ : ಧನು ರಾಶಿಯ ಜನರು ಈ ಅವಧಿಯಲ್ಲಿ ತಮ್ಮ ಮಾತಿನ ಬಗ್ಗೆ ವಿಶೇಷ ಗಮನ ಹರಿಸಬೇಕು. ಈ ಸಮಯದಲ್ಲಿ ನೀವು ಮಾಡುವ ತಂತ್ರಗಳನ್ನು ಗೌಪ್ಯವಾಗಿಡಿ. ಯಾರೊಂದಿಗೂ ಹಂಚಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಕುಟುಂಬದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಂಬಂಧಗಳಲ್ಲಿ ಬಿರುಕು ಮೂಡಲು ಬಿಡಬೇಡಿ.
ಕುಂಭ ರಾಶಿ : ಸೂರ್ಯ ಸಂಕ್ರಮಣ ಜೀವನದಲ್ಲಿ ಏರುಪೇರುಗಳನ್ನು ಉಂಟು ಮಾಡಲಿದೆ. ಮಾನಸಿಕ ಒತ್ತಡ ಹೆಚ್ಚಾಗುವುದು. ಈ ಸಮಯದಲ್ಲಿ ಖರ್ಚು ಕೂಡಾ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡಿ. ಯಾರಿಗೂ ಹೆಚ್ಚು ಸಾಲ ನೀಡಬೇಡಿ, ಇಲ್ಲದಿದ್ದರೆ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)