Sarath Babu Movie: ʼಅಮೃತವರ್ಷಿಣಿʼ ಖ್ಯಾತಿಯ ಶರತ್‌ ಬಾಬು ಹಿಟ್‌ ಸಿನಿಮಾಗಳ ಲಿಸ್ಟ್‌..! ಇಲ್ಲಿದೆ ನೋಡಿ..

Sarath Babu Movie: ʼಅಮೃತವರ್ಷಿಣಿʼ ನಟ ಶರತ್‌ ಬಾಬು, ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

Sarath Babu : ಬಹುಭಾಷಾ ನಟ ಶರತ್ ಬಾಬು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಹೈದರಾಬಾದ್​‌ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು ಒಂದು ತಿಂಗಳಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 

1 /7

ʼಅಮೃತವರ್ಷಿಣಿʼ ಸಿನಿಮಾದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದ ನಟ ಶರತ್‌ ಬಾಬು 1951 ಜುಲೈ 31  ರಂದು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಅಮುದಲಾ ಗ್ರಾಮದಲ್ಲಿ ಜನಿಸಿದರು. ಸ್ನೇಹಿತರ ಮಾತಿಂದ ಪ್ರೇರೆಪಿತರಾಗಿ ಸಿನಿಮಾ ರಂಗದತ್ತ ಒಲವು ತೋರಿದರು.   

2 /7

ಮೊದಲಿಗೆ  ಪೊಲೀಸ್ ಅಧಿಕಾರಿ ಕನಸು ಕಂಡಿದ್ದ ಶರತ್ ಬಾಬು ಅವರಿಗೆ ನಟನೆಯತ್ತ ಮನಸ್ಸು ವಾಲುತ್ತದೆ. ʼರಾಮ ರಾಜ್ಯಂʼ ಎಂಬ ತೆಲುಗು ಸಿನಿಮಾ ಮೂಲಕ ನಟರಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.   

3 /7

1978 ರಲ್ಲಿ ತೆರೆಕಂಡ  ʼನಿಝಲ್ ನಿಜಮಗಿರದುʼ ಸಿನಿಮಾ ಶರತ್ ಬಾಬು  ಅವರಿಗೆ ಖ್ಯಾತಿ ತಂದುಕೊಟ್ಟಿತು.  ಈ ಸಿನಿಮಾಕ್ಕಾಗಿ  ಎಂಟು ʼನಂದಿ ಪ್ರಶಸ್ತಿʼಗಳನ್ನು ಗಳಿಸಿದರು.  

4 /7

ಶರತ್ ಬಾಬು ಮೂಲತಃ ತೆಲುಗು ಇಂಡಸ್ಟ್ರಿಯವರಾಗಿದ್ದರೂ ತಮಿಳಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ನಟನೆಯ ತಮಿಳಿನ 'ನಿಳಲ್ ನಿಜಮಾಗಿರದು' ಚಿತ್ರದ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. 70ಕ್ಕೂ ಹೆಚ್ಚು ತಮಿಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.   

5 /7

ʼತುಳಸಿದಳʼ ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟ  ಶರತ್‌ ಬಾಬು, ಬಳಿಕ ರಮೇಶ್‌ ಅರವಿಂದ್‌ ಹಾಗೂ ಸುಹಾಸಿನಿ ನಟನೆಯ  ಅಮೃತವರ್ಷಿಣಿ  ಚಿತ್ರದ ಮೂಲಕ ಎಲ್ಲರ ಮನದಲ್ಲಿ ಅಚ್ಚುಳಿದಿದ್ದಾರೆ. 

6 /7

ಕನ್ನಡದಲ್ಲಿ ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು ಹೀಗೆ 20ಕ್ಕೂ ಹೆಚ್ಚಿನ ಕನ್ನಡ  ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

7 /7

ಆರಂಭದಲ್ಲಿ ಹೀರೊ, ವಿಲನ್ ಆಗಿ ನಟಿಸಿದ ಶರತ್ ಮುಂದೆ ನಾಯಕನ ಸ್ನೇಹಿತ, ಅಣ್ಣ, ತಮ್ಮ, ತಂದೆ, ನಾಯಕಿಯ ತಂದೆ ಹೀಗೆ ಪೋಷಕರ ಪಾತ್ರಗಳಲ್ಲಿ ನಟಿಸುತ್ತಾ ಜನ ಮಾನಸದಲ್ಲಿ ಅಜರಾಮರರಾಗಿದ್ದಾರೆ.