ಕುಂಭದಲ್ಲಿ ಶನಿಯ ಹಿಮ್ಮುಖ ಚಲನೆ: ಈ 3 ರಾಶಿಯ ಜನರಿಗೆ ಭರ್ಜರಿ ಲಾಭ ಸಿಗಲಿದೆ!

Saturn Retrogrades In Aquarius: ಕುಂಭ ರಾಶಿಯಲ್ಲಿರುವ ಶನಿಯು ಆಗಸ್ಟ್ 29ರ ರಾತ್ರಿ 11.40ಕ್ಕೆ ಹಿಮ್ಮುಖ ಚಲನೆ ಪ್ರಾರಂಭಿಸಿದೆ. ಈ ನವೆಂಬರ್ 15ರವರೆಗೆ ಶನಿಯು ಹಿಮ್ಮುಖ ಚಲನೆಯಲ್ಲಿರಲಿದೆ. ಎರಡೂವರೆ ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಕೆಲ ರಾಶಿಗೆ ಬಂಪರ್‌ ಲಾಭವಾಗಲಿದೆ. ​

Saturn Retrogrades In Aquarius: ಶನಿಯು ಎರಡೂವರೆ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. 2023ರಲ್ಲಿ ಕುಂಭ ರಾಶಿಗೆ ಪ್ರವೆಶಿಸಿರುವ ಶನಿಯು 2025ಕ್ಕೆ ರಾಶಿ ಬದಲಾವಣೆ ಮಾಡಲಿದೆ. ಆದರೆ ಶನಿಯು ಇದೇ ಅಗಸ್ಟ್‌ 29ರಿಂದ ಹಿಮ್ಮುಖ ಚಲನೆ ಮಾಡಲಿದೆ. ಕುಂಭ ರಾಶಿಯಲ್ಲಿರುವ ಶನಿಯು ಆಗಸ್ಟ್ 29ರ ರಾತ್ರಿ 11.40ಕ್ಕೆ ಹಿಮ್ಮುಖ ಚಲನೆ ಪ್ರಾರಂಭಿಸಿದೆ. ಈ ನವೆಂಬರ್ 15ರವರೆಗೆ ಶನಿಯು ಹಿಮ್ಮುಖ ಚಲನೆಯಲ್ಲಿ ಇರಲಿದೆ. ಎರಡೂವರೆ ತಿಂಗಳು ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಕೆಲವರು ರಾಶಿಗಳಿಗೆ ಬಂಪರ್‌ ಲಾಭವಾಗಲಿದೆ. ಆ ರಾಶಿಗಳು ಯಾವುವು ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /3

ಶನಿ ದೇವನು ಧನು ರಾಶಿಯ ೩ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುವುದು. ಈ ಅವಧಿಯಲ್ಲಿ ಧನು ರಾಶಿಯವರು ಅನುಕೂಲಕರ ಪ್ರಯೋಜನ ಪಡೆಯುತ್ತೀರಿ, ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಶೌರ್ಯ ಹೆಚ್ಚಾಗಲಿದೆ. ವ್ಯಾಪಾರಿಗಳು ಈ ಅವಧಿಯಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಶನಿಯು ಹಿಮ್ಮುಖ ಚಲನೆಯಲ್ಲಿರುವ ಈ ಅವಧಿಯಲ್ಲಿ ಹಠಾತ್ ಆರ್ಥಿಕ ಲಾಭ ಗಳಿಸುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಪ್ರಯತ್ನಗಳಲ್ಲಿ ಯಶಸ್ಸನ್ನು ಪಡೆಯುವ ಬಲವಾದ ಅವಕಾಶಗಳಿವೆ. ಕುಟುಂಬ ಜೀವನದ ದೃಷ್ಟಿಯಿಂದ ಈ ಸಮಯ ಉತ್ತಮವಾಗಿದೆ.

2 /3

ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಮೇಷ ರಾಶಿಯವರು ತುಂಬಾ ಪ್ರಯೋಜನ ಪಡೆಯುತ್ತೀರಿ. ನಿಮ್ಮ ಆದಾಯದಲ್ಲಿ ಅಗಾಧ ಹೆಚ್ಚಳ ಕಂಡುಬರುತ್ತದೆ. ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಬಹುದು. ನೀವು ಹಣ ಮತ್ತು ಆಸ್ತಿ ಗಳಿಸುತ್ತೀರಿ. ಈ ಅವಧಿಯಲ್ಲಿ ಹೊಸ ಮನೆ, ವಾಹನ ಮುಂತಾದವುಗಳನ್ನು ಖರೀದಿಸಬಹುದು. ನೀವು ಮೊದಲು ಯಾವುದೇ ಹೂಡಿಕೆ ಮಾಡಿದ್ದರೆ ಅದರ ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಉತ್ತಮ ಲಾಭ ಪಡೆಯುತ್ತಾರೆ. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಈ ಅವಧಿ ಅನುಕೂಲಕರವಾಗಿರುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

3 /3

ಕುಂಭ ರಾಶಿಯಲ್ಲಿಯೇ ಶನಿಯು ಹಿಮ್ಮುಖ ಚಲನೆ ಮಾಡುತ್ತಿದೆ. ಶನಿಯ ಹಿಮ್ಮುಖ ಚಲನೆಯು ನಿಮಗೆ ಮಂಗಳಕರ ಫಲ ನೀಡಲಿದೆ. ಶನಿಯು ನಿಮ್ಮ ರಾಶಿಯಲ್ಲೂ ಷಶ ರಾಜಯೋಗವನ್ನು ಸೃಷ್ಟಿಸುತ್ತಿದ್ದಾನೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಸಮಾಜದಲ್ಲಿ ನಿಮ್ಮ ಗೌರವ, ಪ್ರತಿಷ್ಠೆ ಹೆಚ್ಚಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ. ನಿಮ್ಮ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಉತ್ತಮವಾಗಿರಲಿದೆ.