SBI Investment: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ್.ಡಿ ಯೋಜನೆಯಲ್ಲಿ 3 ರಿಂದ 5 ವರ್ಷದ ಠೇವಣಿ ಮೇಲೆ ಶೇ.5.3 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ.
SBI Investment: ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಹೂಡಿಕೆಗೆ ಒಂದು ಸುವರ್ಣಾವಕಾಶವನ್ನು ನೀಡುತ್ತಿದ್ದು, ಅದರಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆಯಬಹುದು. ವಿಶೇಷವೆಂದರೆ ಎಸ್‌ಬಿಐನ ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 1,000 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 1 ಲಕ್ಷದ 59 ಸಾವಿರ ರೂಪಾಯಿಗಳ ಲಾಭವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ,
ಇದನ್ನೂ ಓದಿ-Edible Oil Price: ದೇಶದ ಶ್ರೀಸಾಮಾನ್ಯರಿಗೊಂದು ಸಂತಸದ ಸುದ್ದಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಹೂಡಿಕೆಗೆ ಒಂದು ಸುವರ್ಣಾವಕಾಶವನ್ನು ನೀಡುತ್ತಿದ್ದು, ಅದರಲ್ಲಿ ನೀವು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಪಡೆಯಬಹುದು. ವಿಶೇಷವೆಂದರೆ ಎಸ್‌ಬಿಐನ ಈ ಯೋಜನೆಯಲ್ಲಿ ತಿಂಗಳಿಗೆ ಕೇವಲ 1,000 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು 1 ಲಕ್ಷದ 59 ಸಾವಿರ ರೂಪಾಯಿಗಳ ಲಾಭವನ್ನು ಪಡೆಯಬಹುದು. ಈ ಯೋಜನೆಯ ಬಗ್ಗೆ ತಿಳಿಯೋಣ ಬನ್ನಿ,
ಎಸ್ಬಿಐ ಆರ್. ಡಿ ಠೇವಣಿ ಮೇಲೆ ಉತ್ತಮ ಬಡ್ಡಿದರ - ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ್.ಡಿ ಯೋಜನೆಯಲ್ಲಿ 3 ರಿಂದ 5 ವರ್ಷದ ಠೇವಣಿ ಮೇಲೆ ಶೇ.5.3 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ. ಅಷ್ಟೇ ಅಲ್ಲ ಒಂದು ವೇಳೆ ನಿಮ್ಮ ಆರ್. ಡಿ ಯೋಜನೆ ಐದು ವರ್ಷವನ್ನು ದಾಟಿದರೆ, ಎಸ್. ಬಿ. ಐ ನಿಮಗೆ ಶೇ.5.4ರಷ್ಟು ಬಡ್ಡಿದರ ನೀಡುತ್ತದೆ.
ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭ - ಒಂದು ವೇಳೆ ಯಾವುದೇ ಹಿರಿಯ ನಾಗರಿಕ ಆರ್. ಡಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅವರಿಗೆ ಶೇ.0.80 ರಷ್ಟು ಹೆಚ್ಚುವರಿ ಬಡ್ಡಿ ದರ ನೀಡಲಾಗುವುದು. ಅಂದರೆ ಎಸ್ಬಿಐ ಹಿರಿಯ ನಾಗರಿಕರಿಗೆ 5 ವರ್ಷಕ್ಕಿಂತ ಹೆಚ್ಚಿನ ಆರ್.ಡಿ ಹೂಡಿಕೆಯ ಮೇಲೆ ಶೇ.6.2ರಷ್ಟು ಬಡ್ಡಿ ದರವನ್ನು ಬಡ್ಡಿದರವನ್ನು ಪಾವತಿಸುತ್ತದೆ.
ಎಸ್ಬಿಐ ಆರ್. ಡಿ ಮೇಲೆ ದಂಡದ ನಿಯಮ - ನೀವು ಎಸ್ಬಿಐ ಆರ್‌ಡಿ ಖಾತೆಯನ್ನು ತೆರೆದಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಪಾವತಿ ಮಾಡದಿದ್ದರೆ, ಎಸ್‌ಬಿಐ ಸಹ ದಂಡವನ್ನು ವಿಧಿಸುತ್ತದೆ. 5 ವರ್ಷಕ್ಕಿಂತ ಕಡಿಮೆ ಅವಧಿಯ ಆರ್‌ಡಿ 100 ರೂ.ಗೆ 1.5 ರೂ. 5 ವರ್ಷ ಮೇಲ್ಪಟ್ಟ ಆರ್‌ಡಿಗಳ ಮೇಲೆ 100 ರೂ.ಗೆ 2 ರೂ.ಗಳನ್ನು ವಿಧಿಸಲಾಗುತ್ತದೆ. ಅಂದರೆ 1000 ರೂಪಾಯಿಯ 20 ರೂಪಾಯಿ ಎಂದರ್ಥ. 6 ತಿಂಗಳವರೆಗೆ ನಿರಂತರವಾಗಿ ಹಣವನ್ನು ಠೇವಣಿ ಮಾಡದಿದ್ದರೆ, SBI ಆ ಯೋಜನೆಯನ್ನು ಮುಚ್ಚುತ್ತದೆ ಮತ್ತು ನಿಮ್ಮ ಉಳಿತಾಯ ಖಾತೆಗೆ ಎಲ್ಲಾ ಹಣವನ್ನು ವರ್ಗಾಯಿಸುತ್ತದೆ
ಎಸ್ಬಿಐ ಆರ್.ಡಿ ಮೇಲೆ ಸೇವಾ ಶುಲ್ಕ - sbi.co.in ಪ್ರಕಾರ, ಹಣವನ್ನು ಸಮಯಕ್ಕೆ 3-4 ಬಾರಿ ಠೇವಣಿ ಮಾಡದಿದ್ದರೆ, ಬ್ಯಾಂಕ್ 10 ರೂ. ವಿಧಿಸುತ್ತದೆ. ಇದನ್ನು ಸೇವಾ ಶುಲ್ಕವಾಗಿ ಪಡೆಯಲಾಗುತ್ತದೆ.