Vastu Tips : ನೀವು ಮನೆಯಿಂದ ಹೊರಬಂದ ತಕ್ಷಣ ಈ 5 ವಿಷಯಗಳನ್ನು ನೋಡಿದರೆ ನಿಮಗೆ ಒಲಿಯಲಿದೆ ಅದೃಷ್ಟ! 

ಮನೆಯಿಂದ ಹೊರಡುವಾಗ ಹೂವಿನ ಹಾರವನ್ನು ನೋಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಅವಕಾಶಗಳು ಬರುತ್ತಿವೆ ಎಂದು ಅದು ಹೇಳುತ್ತದೆ.
 

ನವದೆಹಲಿ : ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ಘಟನೆ ಅಚಾನಕ್ಕಾಗಿ ನಡೆಯುವುದಿಲ್ಲ, ಎಲ್ಲದಕ್ಕೂ ಒಂದು ಕಾರಣವಿರುತ್ತದೆ. ನೀವು ಪ್ರತಿದಿನ ನಿಮ್ಮ ಸುತ್ತ ಏನನ್ನು ನೋಡುತ್ತೀರೋ, ಆ ವಿಷಯಗಳು ಭವಿಷ್ಯವನ್ನು ಸೂಚಿಸುತ್ತವೆ. ಈ ಕೆಲವು ಚಿಹ್ನೆಗಳು(ಸೂಚನೆಗಳು) ಅಶುಭಕರವಾದರೆ ಕೆಲವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಅದೃಷ್ಟವನ್ನು ಬೆಳಗಿಸುವಂತಹ ಕೆಲವು ಚಿಹ್ನೆಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

1 /5

ನೀವು ಮನೆಯಿಂದ ಹೊರಬಂದ ತಕ್ಷಣ ಪಾರಿವಾಳವು ನಿಮ್ಮ ಮೇಲೆ ಕೂತರೆ ಅದನ್ನು ಶುಭ ಸಂಕೇತವೆಂದು ಪರಿಗಣಿಸಿ. ಇದು ಸಂಪತ್ತನ್ನು ಹೊಂದಿರುವ ಸಂಕೇತವಾಗಿದೆ.

2 /5

ಮನೆಯಿಂದ ಹೊರಡುವಾಗ ಹೂವಿನ ಹಾರವನ್ನು ನೋಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನಿಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಅವಕಾಶಗಳು ಬರುತ್ತಿವೆ ಎಂದು ಅದು ಹೇಳುತ್ತದೆ.

3 /5

ನೀವು ಮನೆಯಿಂದ ಹೊರಬಂದ ತಕ್ಷಣ ದೇವಸ್ಥಾನದ ಗಂಟೆಗಳ ಶಬ್ದ ಕಿವಿಗೆ ಬಿದ್ದರೆ, ನಿಮ್ಮ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ಅರ್ಥಮಾಡಿಕೊಳ್ಳಿ.

4 /5

ಮನೆಯಿಂದ ಹೊರಡುವಾಗ ಯಾರಾದರೂ ಸೀನುವುದು ಅಶುಭವೆಂದು ಪರಿಗಣಿಸಲಾಗಿದೆಯಾದರೂ, ಎರಡು ಸೀನುಗಳು ಒಟ್ಟಿಗೆ ಬಂದರೆ ಅದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮಗೂ ಸಂಭವಿಸಿದರೆ, ನಿಮ್ಮ ಅದೃಷ್ಟ ಬದಲಾಗಲಿದೆ ಎಂದು ಅರ್ಥಮಾಡಿಕೊಳ್ಳಿ.

5 /5

ನೀವು ಮನೆಯಿಂದ ಹೊರಬಂದ ತಕ್ಷಣ ಹಸು ಕರುವಿಗೆ ಹಾಲುಣಿಸುವುದನ್ನು ನೋಡಿದರೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ಯಾವುದಾದರೂ ಒಳ್ಳೆಯ ಕೆಲಸಕ್ಕಾಗಿ ಮನೆಯಿಂದ ಹೊರಹೋಗುತ್ತಿದ್ದರೆ ನಿಮ್ಮ ಈ ಕೆಲಸವು ಖಂಡಿತವಾಗಿಯೂ ಸುಲಭವಾಗಿ ಆಗುತ್ತದೆ.