ಕುಮಾರಾವಸ್ಥೆಯಲ್ಲಿ ಶನಿ ಸಂಚಾರ ಆರಂಭ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

Shani Gochar 2023: ಕುಮಾರಾವಸ್ಥೆಯಲ್ಲಿ ಶನಿಯ ಸಂಚಾರ ಆರಂಭಗೊಂಡಿದೆ. ಶನಿಯ ಈ ಕುಮಾರಾವಸ್ಥೆ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಕನಕವೃಷ್ಟಿಗೆ ಕಾರಣವಾಗಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ಅವಸ್ಥೆಯನ್ನು ಬದಲಿಸಿ ಸಂಚಾರ ನಡೆಸುತ್ತವೆ. ಇವುಗಳಲ್ಲಿ ಕುಮಾರಾವಸ್ಥೆ ಹಾಗೂ ಯುವಾವಸ್ಥೆಗಳು ಕೂಡ ಶಾಮೀಲಾಗಿವೆ. ಗ್ರಹಗಳ ಈ ಅವಸ್ಥೆ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವವನ್ನುಂಟು ಮಾಡುತ್ತವೆ. ಪ್ರಸ್ತುತ ಕರ್ಮ ಫಲದಾತ ಶನಿ ತನ್ನ ಕುಮಾರಾವಸ್ಥೆಯನ್ನು ಪ್ರವೇಶಿಸಿದ್ದಾನೆ. ಅರ್ಥಾತ್ ಆತ ಏಳು ಡಿಗ್ರಿ ಕೊನದಿಂದ ಸಂಚಾರ ಆರಂಭಿಸಿದ್ದು, 12 ಡಿಗ್ರಿ ಕೋನದವರೆಗೆ ಅದೇ ಅವಸ್ಥೆಯಲ್ಲಿ ಮುಂದುವರೆಯಲಿದ್ದಾನೆ. ಈ ಅವಸ್ಥೆಯಲ್ಲಿ ಶನಿ ಹಲವು ರಾಶಿಗಳ ಜನರಿಗೆ ಶುಭ ಫಲಗಳನ್ನು ನೀಡಲಿದ್ದು ಅವರ ಭಾಗ್ಯವನ್ನು ಬೆಳಗಿ ಅಪಾರ ಧನಸಂಪತ್ತನ್ನು ಕರುಣಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-ಐದು ವರ್ಷಗಳ ಬಳಿಕ ವೃಶ್ಚಿಕ ರಾಶಿಯಲ್ಲಿ ತ್ರಿಗ್ರಹಿ ಯೋಗ, ಧನಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ!

 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮೇಷ ರಾಶಿ: ನಿಮ್ಮ ರಾಶಿಯ ರಾಷ್ಯಾಧಿಪನಾಗಿರುವ ಮಂಗಳ ನವೆಂಬರ್ 16, 2023ರಂದು ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಆತನ ದೃಷ್ಟಿ ಶನಿಯ ಮೇಲೆ ಇರಲಿದೆ. ಹೀಗಾಗಿ ಶನಿಯ ಕುಮಾರಾವಸ್ಥೆ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದ್ದು. ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಶನಿ ಗ್ರಹಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಅತ್ಯಂತ ಲಾಭ ಉಂಟಾಗಲಿದೆ. ಒಂದು ವೇಳೆ ನಿಮ್ಮ ಕೆಲಸ ಅಥವಾ ವ್ಯಾಪಾರ ವಿದೇಶಕ್ಕೆ ಸಂಬಂಧಿಸಿದ್ದಾಗಿದ್ದರೆ, ನಿಮಗೆ ಉತ್ತಮ ಲಾಭ ಉಂಟಾಗಲಿದೆ. 

2 /5

ಸಿಂಹ ರಾಶಿ: ಶನಿ ನಿಮ್ಮ ಗೋಚರ ಜಾತಕದ ದಾಂಪತ್ಯ ಜೀವನದ ಭಾವದಲ್ಲಿ ಕುಮಾರಾವಸ್ಥೆಯಲ್ಲಿ ಸಂಚರಿಸುತ್ತಿದ್ದಾನೆ. ಇದಲ್ಲದೆ ಆತ ಅಲ್ಲಿ ಶಶ ಮಹಾಪುರುಷ ರಾಜಯೋಗ ಕೂಡ ನಿರ್ಮಿಸಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಲಾಭ ಸಿಗಲಿದೆ. ವಿವಾಹಿತರ ವೈವಾಹಿಕ ಜೀವನ ಸುಖದಿಂದ ಕೂಡಿರಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. 

3 /5

ಮಿಥುನ ರಾಶಿ: ನಿಮ್ಮ ರಾಶಿಗೆ ಬುಧ ಅಧಿಪತಿ, ಶನಿಯ ಜೊತೆಗೆ ಬುಧನ ಸ್ನೇಹಭಾವದ ಸಂಬಂಧವಿದೆ. ಇದಲ್ಲದೆ ಶನಿ ನಿಮ್ಮ ಜಾತಕದ ಭಾಗ್ಯ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ನಿಮ್ಮ ಭಾಗ್ಯೋದಯವಾಗುವ ಎಲ್ಲಾ ಸಂಕೇತಗಳಿವೆ. ಧರ್ಮ-ಕರ್ಮ ಕಾರ್ಯಗಳಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಆಕಾಂಕ್ಷೆಗಳು ಈಡೇರಲಿವೆ. ದೇಶ-ವಿದೇಶಗಳ ಯಾತ್ರೆಯಿಂದ ಲಾಭ ಸಿಗಲಿದೆ. ವಿದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿದವರಿಗೆ ಲಾಭ ಸಿಗಲಿದೆ. 

4 /5

ಮಕರ ರಾಶಿ: ಶನಿಯ ಕುಮಾರಾವಸ್ಥೆಯಲ್ಲಿನ ಸಂಚಾರ ಆರ್ಥಿಕವಾಗಿ ನಿಮಗೆ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಒಂದು ಶನಿ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ ಮತ್ತು ಎರಡನೆಯದಾಗಿ ಆತ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ನಿಮಗೆ ಕಾಲಕಾಲಕ್ಕೆ ಧನಲಾಭ ಉಂಟಾಗಲಿದೆ. ಕೆಲಸ ಕಾರ್ಯಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಕೌಟುಂಬಿಕ ಕಲಹಗಳು ದೂರಾಗಲಿವೆ. ನೌಕರವರ್ಗದ ಜನರಿಗೆ ಈ ಗೋಚರ ಲಾಭದಾಯಕ ಸಾಬೀತಾಗಲಿದೆ. ಪ್ರಮೋಷನ್-ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿಯೂ ಕೂಡ ಉತ್ತಮ ಲಾಭ ನಿಮ್ಮದಾಗಲಿದೆ. ಘನತೆ ಗೌರವ ಪ್ರಾಪ್ತಿಯಾಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)