ಭಾರಿ ಬೆಂಕಿ ಅವಘಡದಲ್ಲಿ 10 ಕಾರುಗಳು ಮತ್ತು 80 ಇತರ ವಾಹನಗಳು ಸುಟ್ಟು ಭಸ್ಮವಾಗಿವೆ.
Delhi Metro parking fire : ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 10 ಕಾರುಗಳು ಮತ್ತು 80 ಇತರ ವಾಹನಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ನಂದಿಸಲಾಗಿದೆ. ಅವಘಡದ ಕುರಿತು ತನಿಖೆ ನಡೆಯುತ್ತಿದೆ.
ಬೆಂಕಿಗೆ ಕಾರಣ ಏನು ಎಂಬುದು ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.
"ಮೆಟ್ರೋ ಪಾರ್ಕಿಂಗ್ ಸ್ಥಳದಲ್ಲಿ 10 ಕಾರುಗಳು, 1 ಮೋಟಾರ್ ಸೈಕಲ್, 2 ಸ್ಕೂಟಿ, 30 ಹೊಸ ಇ-ರಿಕ್ಷಾಗಳು, 50 ಹಳೆಯ ಇ-ರಿಕ್ಷಾಗಳು ಬೆಂಕಿಗೆ ಹಾನಿಯಾಗಿದೆ" ಎಂದು ದೆಹಲಿ ಅಗ್ನಿಶಾಮಕ ಸೇವೆಯ ಮುಖ್ಯಸ್ಥ ಅತುಲ್ ಗಾರ್ಗ್ ಹೇಳಿದ್ದಾರೆ.
ದೆಹಲಿಯ ಅಗ್ನಿಶಾಮಕ ಅಧಿಕಾರಿಗಳು ಜಾಮಿಯಾ ನಗರದ ಮೇನ್ ಟಿಕೋನಾ ಪಾರ್ಕ್ನಲ್ಲಿ ಬೆಳಿಗ್ಗೆ 5 ಗಂಟೆಗೆ ಈ ಬೆಂಕಿ ಅವಘಡದ ಕುರಿತು ಕರೆ ಸ್ವೀಕರಿಸಿದರು. 11 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ಒಳಪಡಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಸಂಭವಿಸಿದ ಬೆಂಕಿಯಲ್ಲಿ 10 ಕಾರುಗಳು ಮತ್ತು 80 ಇತರ ವಾಹನಗಳು ಸುಟ್ಟು ಹೋಗಿವೆ. (ANI ಫೋಟೋಗಳು)