ಫಸ್ಟ್‌ ಟೈಮ್‌ ಬಿಕಿನಿ ತೊಟ್ಟ ಶ್ರದ್ಧಾ ಶ್ರೀನಾಥ್..! ವ್ಹಾವ್‌... ಎಂದ ಫ್ಯಾನ್ಸ್‌... ಫೊಟೋಸ್‌ ಇಲ್ಲಿವೆ..

Shraddha Srinath : ದಕ್ಷಿಣ ಭಾರತದ ಸಿನಿ ಜಗತ್ತಿನಲ್ಲಿ ಮುಂಚೂಣಿ ನಟಿಯರಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಒಬ್ಬರು.. ಹಾಲಿಡೇ ಎಂಜಾಯ್‌ ಮಾಡುತ್ತಿರುವ ಚೆಲುವೆ ಮೊದಲ ಬಾರಿಗೆ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದಾರೆ.. ಸಧ್ಯ ಶ್ರದ್ಧಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. 
 

1 /7

ಬೆಂಗಳೂರು ಮೂಲದ ನಟಿ ಶ್ರದ್ಧಾ ಶ್ರೀನಾಥ್ ಕಾನೂನು ವ್ಯಾಸಂಗ ಮುಗಿಸಿ ನಟನೆಯ ಮೇಲಿನ ಆಸಕ್ತಿಯಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 33 ವರ್ಷದ ಈ ಸುಂದರಿ, 2015 ರಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ 'ಕೊಹಿನೂರ್' ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು.  

2 /7

2016 ರಲ್ಲಿ ತೆರೆಕಂಡ ಯು ಟರ್ನ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿನ ಅವರ ಪಾತ್ರ ಅಭಿಮಾನಿಗಳ ಮನಗೆದ್ದಿತು. ಅತ್ಯುತ್ತಮ ಅಭಿನಯಕ್ಕಾಗಿ ಕೆಲವು ಪ್ರಶಸ್ತಿಗಳನ್ನು ಸಹ ಪಡೆದರು.  

3 /7

ಅಲ್ಲದೆ, ಮಣಿರತ್ನಂ ನಿರ್ದೇಶನದ ಕಾರ್ತಿ ಮತ್ತು ಅದಿತಿ ರಾವ್ ಅಭಿನಯದ ತಮಿಳಿನ 'ಕಾಟು ಉಯಡೈ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇವಾನ್ ತಂತ್ರನ್ ಚಿತ್ರದಲ್ಲಿ ಗೌತಮ್ ಕಾರ್ತಿಕ್ ಜೊತೆ ನಟಿಸಿದರು.  

4 /7

ಶ್ರದ್ಧಾ ಶ್ರೀನಾಥ್ ಅವರಿಗೆ ಹೈಪ್‌ ನೀಡಿದ ಸಿನಿಮಾ ಅಂದ್ರೆ, 2017 ರಲ್ಲಿ ತೆರೆಕಂಡ ವಿಕ್ರಮ್ ವೇದ. ಇದರಲ್ಲಿ ಮಾಧವನ್ ಎದುರು ತುಂಬಾ ಬೋಲ್ಡ್ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನ ಕದ್ದರು.  

5 /7

ಕನ್ನಡ, ತೆಲುಗು, ತಮಿಳು, ನಂತರ ಸಧ್ಯ ಬಾಲಿವುಡ್‌ನತ್ತ ಶ್ರದ್ಧಾ ಶ್ರೀನಾಥ್ ಗಮನ ಹರಿಸುತ್ತಿದ್ದಾರೆ.. ಜೊತೆಗೆ ಹಲವಾರು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.  

6 /7

ಶ್ರದ್ಧಾ ನಟನೆಯ ಕಳೆದ ವರ್ಷ ತೆರೆಕಂಡ ‘ಇರುಗಪಟ್ಟು’ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಸದ್ಯ ಹಿಂದಿ ಸಿನಿಮಾವೊಂದರ ಶೂಟಿಂಗ್‌ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ.  

7 /7

ಸಧ್ಯ ರಜೆಯ ದಿನಗಳನ್ನು ಎಂಜಾಯ್‌ ಮಾಡಲು ಥಾಯ್ಲೆಂಡ್‌ಗೆ ತೆರಳಿರುವ ಶ್ರದ್ಧಾ ಶ್ರೀನಾಥ್, ದೋಣಿಯಲ್ಲಿ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದಾರೆ.. ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ..