ಬಾಲಿವುಡ್ನ ಪ್ರಸಿದ್ಧ ಗಾಯಕಿ ಶ್ರೇಯಾ ಘೋಶಾಲ್ ಇದೇ ಮೊದಲ ಬಾರಿಗೆ ಮದುವೆಯ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ನವದೆಹಲಿ: ಬಾಲಿವುಡ್ನ ಪ್ರಸಿದ್ಧ ಗಾಯಕಿ ಶ್ರೇಯಾ ಘೋಶಾಲ್(Shreya ghoshal) ತಮ್ಮ ಐದನೇ ವಿವಾಹ ವಾರ್ಷಿಕೋತ್ಸವವನ್ನು ನಿನ್ನೆ (ಫೆಬ್ರವರಿ 7) ಆಚರಿಸಿದರು. ಈ ಸಂದರ್ಭದಲ್ಲಿ ಅವರು ಕೆಲವು ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶ್ರೇಯಾ ಅವರು ಮೊದಲ ಬಾರಿಗೆ ಮದುವೆಯ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಶ್ರೇಯಾ ಘೋಶಾಲ್ 2015 ರಲ್ಲಿ ಬಂಗಾಳಿ ಪದ್ಧತಿಯಂತೆ ಮದುವೆಯಾದರು. ಅವರು ಮೇಕ್ಅಪ್ ಅನ್ನು ಸಂಪೂರ್ಣ ಒಂದೇ ಶೈಲಿಯಲ್ಲಿ ಮಾಡಿದರು.
ಶ್ರೇಯಾ ಘೋಶಾಲ್ ಅವರ ವಧುವಿನ ಲುಕ್ ಬಹಳ ಸುಂದರವಾಗಿದೆ. ಅವರ ಅಲಂಕಾರವನ್ನು ನೋಡಿದರು ಅವರು ಯಾವುದೇ ರಾಣಿಗಿಂತ ಕಡಿಮೆಯಿಲ್ಲ ಎಂಬಂತೆ ಕಾಣುತ್ತಿದ್ದಾರೆ.
ಶ್ರೇಯಾ ಘೋಶಾಲ್ ತನ್ನ ಗೆಳೆಯ ಶಿಲಾಜಿತ್ ಮುಖೋಪಾಧ್ಯಾಯ ಅವರನ್ನು ವಿವಾಹವಾದರು. ಮಾಧ್ಯಮ ವರದಿಗಳ ಪ್ರಕಾರ - ಮದುವೆಗೆ ಮುಂಚಿತವಾಗಿ, ಇಬ್ಬರೂ ಸುಮಾರು 10 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು.
ಶ್ರೇಯಾ ಘೋಶಾಲ್ ಬಂಗಾಳ ಮೂಲದವರು ಮತ್ತು ಅವರ ಪತಿ ಕೂಡ ಬಂಗಾಳಿ. ಈ ಜೋಡಿ ಹಲವರಿಗೆ ನೆಚ್ಚಿನ ಜೋಡಿಯಾಗಿದೆ.
ಶ್ರೇಯಾ ಅವರ ಫೋಟೋಗಳ ಬಗ್ಗೆ ಅಭಿಮಾನಿಗಳು ಹೆಚ್ಚು ಪ್ರತಿಕ್ರಿಯಿಸುತ್ತಿದ್ದಾರೆ. ಸುಂದರವಾದ ಜೀವನಕ್ಕಾಗಿ ಎಲ್ಲರೂ ಅವರನ್ನು ಅಭಿನಂದಿಸುತ್ತಿದ್ದಾರೆ. (ಫೋಟೊ ಕೃಪೆ: Instagram)