Side Effects Of Cinnamon: ದಾಲ್ಚಿನಿಯ ಆರೋಗ್ಯಕರ ಲಾಭ ನಿಮಗೆ ಗೊತ್ತಿರಬೇಕು ಆದರೆ, ಹಾನಿಯ ಬಗ್ಗೆ ಗೊತ್ತಾ?

Side Effects Of Cinnamon: ಸಾಮಾನ್ಯ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನಿ ಕೂಡ ಒಂದು. ಇದನ್ನು ನೀವು ಪ್ರತಿ ಭಾರತೀಯರ ಮನೆಯಲ್ಲಿ ಕಾಣಬಹುದು. ವಿಶ್ವಾದ್ಯಂತ ಆಹಾರ ಪದಾರ್ಥಗಳಲ್ಲಿ ಇದನ್ನು ಬಳಸಲಾಗುತ್ತದೆ. ಶೀತವಾದಾಗ ದಾಲ್ಚಿನ್ನಿ ಕಷಾಯವನ್ನು ಕುಡಿಯಲು ಸಹ ಸೂಚಿಸಲಾಗುತ್ತದೆ.

Side Effects Of Cinnamon: ಸಾಮಾನ್ಯ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನಿ (Cinnamon) ಕೂಡ ಒಂದು. ಇದನ್ನು ನೀವು ಪ್ರತಿ ಭಾರತೀಯರ ಮನೆಯಲ್ಲಿ ಕಾಣಬಹುದು. ವಿಶ್ವಾದ್ಯಂತ ಆಹಾರ ಪದಾರ್ಥಗಳಲ್ಲಿ ಇದನ್ನು ಬಳಸಲಾಗುತ್ತದೆ. ಶೀತವಾದಾಗ ದಾಲ್ಚಿನ್ನಿ ಕಷಾಯವನ್ನು ಕುಡಿಯಲು ಸಹ ಸೂಚಿಸಲಾಗುತ್ತದೆ. ದಾಲ್ಚಿನ್ನಿ (Harumful Effects Of Cinnamon) ಅದರ ರುಚಿಕರ ಗುಣಗಳ ಹೊರತಾಗಿ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ, ಆದರೆ ಅತಿಯಾಗಿ ದಾಲ್ಚಿನ್ನಿ ಸೇವಿಸುವುದರಿಂದ ಆರೋಗ್ಯಕ್ಕೆ (Health Tips) ಹಾನಿಕಾರಕ ಎಂದು ಸಾಬೀತಾಗಬಹುದು. ಇಂದು ನಾವು ದಾಲ್ಚಿನ್ನಿಯ ಪ್ರತಿಕೂಲ ಪರಿಣಾಮಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Amla For Diabetes: ಡಯಾಬಿಟಿಸ್ ರೋಗಿಗಳಿಗೆ ನೆಲ್ಲಿಕಾಯಿ ಸೇವನೆಯಿಂದ ಸಿಗಲಿದೆ ಈ ಪ್ರಯೋಜನಗಳು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

1. ಅಧ್ಯಯನಗಳ ಪ್ರಕಾರ ಅಧಿಕ ಪ್ರಮಾಣದಲ್ಲಿ ದಾಲ್ಚಿನಿಯ ಸೇವನೆ ಲೀವರ್ ಗೆ ಶಾಶ್ವತ ಹಾನಿ ತಲುಪಿಸಬಹುದು. ಇದರಲ್ಲಿನ ಕೂಮರಿನ್ ಹೆಸರಿನ ಪದಾರ್ಥ ಲೀವರ್ ಆರೋಗ್ಯಕ್ಕೆ ಉತ್ತಮವಲ್ಲ.

2 /5

2. ಪ್ರತಿದಿನ 2 ಚಮಚ ದಾಲ್ಚಿನ್ನಿ ನಿಮ್ಮ ಲಿವರ್ ಆರೋಗ್ಯವನ್ನು ಅಪಾಯಕ್ಕೆ ತಳ್ಳಬಹುದು. ಇದು ಲೀವರ್ ಗೆ (Liver) ತುಂಬಲಾರದ ನಷ್ಟವುಂಟು ಮಾಡುತ್ತದೆ ಇದರಿಂದ ಕೆಲವೊಮ್ಮೆ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಇದೇ ವೇಳೆ ಆರೋಗ್ಯದಿಂದ ಇರಲು, ಒಂದಕ್ಕಿಂತ ಹೆಚ್ಚು ಚಮಚ ದಾಲ್ಚಿನ್ನಿ ಸೇವಿಸಬಾರದು ಎಂದು ಸೂಚಿಸಲಾಗಿದೆ.

3 /5

3. ದಾಲ್ಚಿನ್ನಿಯು ಕೂಮರಿನ್ ಅನ್ನು ಹೊಂದಿರುತ್ತದೆ, ಆದ್ದರಿಂದ ದಾಲ್ಚಿನ್ನಿಯನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು  ಸೇವಿಸಿದರೆ, ಇದು ಕೆಲವು ಭಾಗಗಳಲ್ಲಿ ಕ್ಯಾನ್ಸರ್ ಗೆಡ್ಡೆಗಳನ್ನು ಬೆಳೆಸುವ ಅಪಾಯ ಹೆಚ್ಚುತ್ತದೆ. ದಾಲ್ಚಿನ್ನಿಯ ಈ ಕಾರ್ಸಿನೋಜೆನಿಕ್ ಪರಿಣಾಮವು ಕಾಲಾನಂತರದಲ್ಲಿ ಡಿಎನ್ಎ ಅವನತಿಗೆ ಕಾರಣವಾಗುತ್ತದೆ, ಇದು ಅಂತಿಮವಾಗಿ ದೇಹದಲ್ಲಿ ಕೆಲವು ರೀತಿಯ ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ನೀವು ಪ್ರತಿದಿನ ಎಷ್ಟು ದಾಲ್ಚಿನ್ನಿ ಸೇವಿಸುತ್ತಿದ್ದೀರಿ ಎಂಬುದರ ಮೇಲೆ ನಿಗಾ ಇಡುವುದು ಸೂಕ್ತ.

4 /5

4. ದಾಲ್ಚಿನ್ನಿ ಎರಡು ವಸ್ತುಗಳಿಂದ ಮಾಡಲ್ಪಟ್ಟಿದೆ. ಅವುಗಳಲ್ಲಿ ಒಂದು ನಾವು ಈಗಾಗಲೇ ನಿಮಗೆ ಹೇಳಿದ್ದೇವೆ ಅಂದರೆ ಕೂಮರಿನ್ ಮತ್ತು ಇನ್ನೊಂದು ರಾಸಾಯನಿಕ ಸಂಯುಕ್ತ, ಇದನ್ನು ಸಿನ್ನಮಾಲ್ಡಿಹೈಡ್ ಎಂದು ಕರೆಯಲಾಗುತ್ತದೆ. ಸಿನಮಾಲ್ಡಿಹೈಡ್ ನಿಮ್ಮ ದೇಹಕ್ಕೆ ಪ್ರವೇಶಿಸಿದ ತಕ್ಷಣ ನಿಮ್ಮ ದೇಹದ ದ್ರವಗಳೊಂದಿಗೆ ಕೆಲಸ ಮಾಡುತ್ತದೆ, ಉದಾಹರಣೆಗೆ ಅದು ನಿಮ್ಮ ಬಾಯಿಗೆ ಸಂಪರ್ಕಕ್ಕೆ ಬರುತ್ತದೆ. ಅತಿಯಾಗಿ ತಿಂದರೆ ಬಾಯಿಯಲ್ಲಿ ಅಲರ್ಜಿ ಉಂಟಾಗಬಹುದು. ಇದು ಬಾಯಿಯಲ್ಲಿ ಉರಿಯುವುದು, ಹುಣ್ಣುಗಳು ಮತ್ತು ಒಸಡುಗಳು ಮತ್ತು ನಾಲಿಗೆಯ ಸುತ್ತ ಊತವನ್ನು ಉಂಟುಮಾಡಬಹುದು. ಆದರೆ, ನೀವು ದೊಡ್ಡ ಪ್ರಮಾಣದಲ್ಲಿ ದಾಲ್ಚಿನ್ನಿ ಸೇವಿಸಿದಾಗ ಮಾತ್ರ ಇದು ಸಂಭವಿಸುತ್ತದೆ.

5 /5

5. ದಾಲ್ಚಿನ್ನಿ ಟೈಪ್ -2 ಮಧುಮೇಹ ಹೊಂದಿರುವ ರೋಗಿಗಳಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ ಎಂದು ಪರಿಗಣಿಸಲಾಗಿದೆ. ಆದರೆ, ಅತಿಯಾಗಿ ತಿನ್ನುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆಯಾಗಬಹುದು.