Papaya ಹೆಚ್ಚು ತಿನ್ನುವುದರಿಂದ ಈ ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು

ಪಪ್ಪಾಯ ಎಂದರೆ ಪರಂಗಿ ಹಣ್ಣು ಎಷ್ಟು ಪ್ರಯೋಜನಕಾರಿ ಎಂದು ನಮಗೆ ತಿಳಿದಿದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದರ ಜೊತೆಗೆ, ಪಪ್ಪಾಯ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ಆದರೆ ಹೆಚ್ಚು ಪಪ್ಪಾಯ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕವೂ ಹೌದು.

ಬೆಂಗಳೂರು : ಪರಂಗಿ ಹಣ್ಣಿನ ಸೇವನೆಯು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ತೂಕ ನಷ್ಟ, ಚರ್ಮದ ರಕ್ಷಣೆ,  ಜೀರ್ಣಕ್ರಿಯೆಯನ್ನು ಸುಧಾರಿಸುವುದು ಹೀಗೆ ಪಪ್ಪಾಯ ಎಂದರೆ ಪರಂಗಿ ಹಣ್ಣು ನಮ್ಮ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕೇವಲ ಪರಂಗಿ ಹಣ್ಣಷ್ಟೇ ಅಲ್ಲ ಅದರ ಎಲೆಗಳ ರಸವೂ ಆರೋಗ್ಯಕ್ಕೆ ಒಳ್ಳೆಯದು. ಪಪ್ಪಾಯ ಎಲೆಗಳ ರಸವು ಡೆಂಗ್ಯೂ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅಧಿಕ ಪರಂಗಿ ಹಣ್ಣಿನ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಹಲವು ವಿಧಗಳಲ್ಲಿ ಹಾನಿ ಉಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಜೊತೆಗೆ ಕೆಲವರು ಅಪ್ಪಿತಪ್ಪಿಯೂ ಪರಂಗಿ ಹಣ್ಣನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಬನ್ನಿ ಪರಂಗಿ ಹಣ್ಣನ್ನು ಹೆಚ್ಚಾಗಿ ತಿನ್ನುವುದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೆಚ್ಚಿನ ಆರೋಗ್ಯ ತಜ್ಞರು ಗರ್ಭಿಣಿ ಮಹಿಳೆಯರಿಗೆ ಪಪ್ಪಾಯ ತಿನ್ನದಂತೆ ಸಲಹೆ ನೀಡುತ್ತಾರೆ. ಇದಕ್ಕೆ ಕಾರಣವೆಂದರೆ, ಪಪ್ಪಾಯ ಗರ್ಭದಲ್ಲಿ ಬೆಳೆಯುವ ಭ್ರೂಣಕ್ಕೆ ಹಾನಿ ಮಾಡುತ್ತದೆ. ಕೆಲವು ವರದಿಯ ಪ್ರಕಾರ, ಪಪ್ಪಾಯದಲ್ಲಿ ಪಪೈನ್ ಎಂಬ ಅಂಶವಿದೆ, ಇದರಿಂದಾಗಿ ಗರ್ಭದಲ್ಲಿರುವ ಭ್ರೂಣವು ಜನ್ಮಜಾತ ದೋಷಗಳು ಮತ್ತು ಇತರ ಅನೇಕ ಸಮಸ್ಯೆಗಳನ್ನು ಸಹ ಹೊಂದಿರುತ್ತದೆ. ಕಚ್ಚಾ ಪಪ್ಪಾಯ/ಪರಂಗಿ ಕಾಯಿ ತಿನ್ನುವುದರಿಂದ ಗರ್ಭಪಾತದ ಅಪಾಯವೂ ಇದೆ. ಅಂದಹಾಗೆ, ಸ್ತನ್ಯಪಾನ ಮಾಡುವಾಗ ಪರಂಗಿ ಹಣ್ಣಿನಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳೇನು ಎಂಬುದರ ಕುರಿತು ಹೆಚ್ಚಿನ ಸಂಶೋಧನೆ ನಡೆದಿಲ್ಲ. ಆದ್ದರಿಂದ ನೀವು ಗರ್ಭಾವಸ್ಥೆಯಲ್ಲಿ ಮತ್ತು ಸ್ವಲ್ಪ ಸಮಯದವರೆಗೆ ಹೆರಿಗೆಯ ನಂತರವೂ ಪಪ್ಪಾಯಿತಿನ್ನದಿರುವುದು ಉತ್ತಮ ಎಂದು ಹೇಳಲಾಗುತ್ತದೆ.

2 /5

ಪಪ್ಪಾಯಿಯಲ್ಲಿರುವ ಪಪೈನ್ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗುವ ಒಂದು ರೀತಿಯ ಕಿಣ್ವವಾಗಿದೆ. ಆಸ್ತಮಾ ರೋಗಿಯಿದ್ದರೆ ಅಥವಾ ನಿಮಗೆ ಬೇರೆ ಯಾವುದೇ ಉಸಿರಾಟದ ಕಾಯಿಲೆ ಇದ್ದರೆ, ವೈದ್ಯರನ್ನು ಕೇಳದೆ ಪಪ್ಪಾಯವನ್ನು ಸೇವಿಸಬೇಡಿ.

3 /5

ಪರಂಗಿ ಹಣ್ಣಿನಲ್ಲಿ (Papaya) ನಾರಿನ ಪ್ರಮಾಣವು ತುಂಬಾ ಹೆಚ್ಚಾಗಿದ್ದರೂ, ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಇದನ್ನು ರಾಮಬಾಣವೆಂದು ಪರಿಗಣಿಸಲಾಗುತ್ತದೆ, ಆದರೆ ಹೆಚ್ಚು ಪಪ್ಪಾಯ ಸೇವನೆಯಿಂದ ಹೊಟ್ಟೆ ಉಬ್ಬರ ಮತ್ತು ಅತಿಸಾರ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಪಪ್ಪಾಯದಲ್ಲಿ ಲ್ಯಾಟೆಕ್ಸ್ ಕೂಡ ಇರುವುದರಿಂದ ಹೊಟ್ಟೆ ನೋವು ಮತ್ತು ಸೆಳೆತದ ಸಮಸ್ಯೆಯೂ ಉಂಟಾಗಬಹುದು. ಇದನ್ನೂ ಓದಿ - ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿರಿಸಲಿವೆ ಈ 5 ಆಹಾರಗಳು

4 /5

ಬ್ಲಡ್ ಶುಗರ್ (Blood Sugar) ಸಮಸ್ಯೆ ಹೊಂದಿರುವವರು ವೈದ್ಯರ ಸಲಹೆ ಪಡೆಯದೇ ಪರಂಗಿ ಹಣ್ಣನ್ನು ಸೇವಿಸಬಾರದು. ಏಕೆಂದರೆ ಪಪ್ಪಾಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ, ಇದು ಮಧುಮೇಹ ರೋಗಿಗಳಿಗೆ ಅಪಾಯಕಾರಿ. ಇದನ್ನೂ ಓದಿ - ಬೆಳಗಿನ ಉಪಹಾರದಲ್ಲಿ ಈ ಡ್ರಿಂಕ್ ಬಳಸಿ Blood Sugar Level ಕಂಟ್ರೋಲ್ ಮಾಡಿ

5 /5

ಹೃದ್ರೋಗ ಇರುವವರು ಕೂಡ ಪರಂಗಿ ಹಣ್ಣನ್ನು ಹೆಚ್ಚು ತಿನ್ನಬಾರದು. ಅಧಿಕ ಪಪ್ಪಾಯ ಸೇವಿಸುವುದರಿಂದ ಹೃದಯ ಬಡಿತದ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೆ, ಪಪ್ಪಾಯ ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಹೃದಯ ರೋಗಿಗಳು ವೈದ್ಯರನ್ನು ಸಂಪರ್ಕಿಸದೆ ಪಪ್ಪಾಯ ಸೇವಿಸುವುದು ಒಳಿತು. (ಗಮನಿಸಿ: ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ. ಜೀ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.)