ಸಣ್ಣಗಾಗಲು ರಾತ್ರಿ ಊಟ ಬಿಡಬೇಡಿ ! ಎದುರಿಸಬೇಕಾಗುತ್ತದೆ ಈ ಸಮಸ್ಯೆ !

Side Effects Of Skipping Dinner:ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಬೇಕಾದರೆ ಕಡಿಮೆ ತಿನ್ನಬೇಕು ಎನ್ನುವುದು ಹೆಚ್ಚಿನ ಜನರ ಯೋಚನೆ. ಇದಕ್ಕಾಗಿ ರಾತ್ರಿಯ  ಭೋಜನ ಸೇವನೆಯನ್ನು ನಿಲ್ಲಿಸಿ ಬಿಡುತ್ತಾರೆ.

Side Effects Of Skipping Dinner:ಉತ್ತಮ ಆರೋಗ್ಯ ಮತ್ತು ತೂಕ ನಷ್ಟಕ್ಕೆ, ನಾವು ಆರೋಗ್ಯಕರ ಉಪಹಾರ ಮತ್ತು ಲಘು ರಾತ್ರಿಯ ಊಟವನ್ನು ಮಾಡಬೇಕು. ಆದರೆ, ರಾತ್ರಿಯ ಊಟವನ್ನು ಸಂಪೂರ್ಣವಾಗಿ ತ್ಯಜಿಸುವುದರಿಂದ ತೂಕ  ಕಡಿಮೆಯಾಗುತ್ತದೆ ಎಂದು ನೀವು ಅಂದು ಕೊಂಡರೆ ಅದು ಸುಳ್ಳು. ಹೀಗೆ ಮಾಡುವುದರಿಂದ  ತೂಕ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

2 /5

ರಾತ್ರಿಯ ಊಟ ಮಾತ್ರವಲ್ಲ, ಯಾವುದೇ ಸಮಯದಲ್ಲಿ ಭೋಜನವನ್ನು ಸ್ಕಿಪ್ ಮಾಡಿದರೆ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ದೀರ್ಘಕಾಲದವರೆಗೆ ಹೀಗೆ ಆಹಾರವನ್ನು ತ್ಯಜಿಸುತ್ತಾ ಬಂದರೆ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.  

3 /5

ರಾತ್ರಿ ಊಟ ಮಾಡದಿರುವುದು ನಿಮ್ಮ ಮೆದುಳಿನ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು.  ಇದರಿಂದಾಗಿ ನೀವು ಖಿನ್ನತೆಗೆ ಒಳಗಾಗಬಹುದು. 

4 /5

ಭೋಜನವನ್ನು ಬಿಟ್ಟು ಬಿಡುವುದರ ಎರಡನೇ ದೊಡ್ಡ ಅನಾನುಕೂಲವೆಂದರೆ ಅದು ದೇಹದ ಚಯಾಪಚಯ ದರವನ್ನು ನಿಧಾನಗೊಳಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ, ಅಥವಾ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ. 

5 /5

ರಾತ್ರಿ ಊಟ ಮಾಡದೇ ಇದ್ದರೆ, ದೇಹದಲ್ಲಿ ಪ್ರಮುಖ ಪೋಷಕಾಂಶಗಳ ಕೊರತೆ ಉಂಟಾಗಬಹುದು ಮತ್ತು ಮೂಡ್ ಸ್ವಿಂಗ್ ಸಮಸ್ಯೆಯೂ ಎದುರಾಗಬಹುದು. ರಾತ್ರಿ ಏನೂ ತಿನ್ನದೇ ಹಾಗೆಯೇ ಮಲಗುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಇದು ಕಿರಿಕಿರಿಯನ್ನು ಉಂಟುಮಾಡುತ್ತದೆ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.