Sidharth Kiaraa : 'ಪರ್ಮನೆಂಟ್‌ ಬುಕ್ಕಿಂಗ್‌ ಆದ್ವಿ' ಎಂದ ಶೇರ್‌ ಷಾ ಜೋಡಿ.. ಇಲ್ಲಿದೆ ಸಿದ್‌ ಕಿಯಾರಾ ವೆಡ್ಡಿಂಗ್ ಅಲ್ಬಮ್‌

Sidharth Kiara Wedding Photo: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಫೋಟೋಗಳು ವೈರಲ್‌ ಆಗುತ್ತಿವೆ. ಇದರಲ್ಲಿ ವಧು - ವರರಿಬ್ಬರೂ ತುಂಬಾ ಸುಂದರವಾಗಿ ಕಂಡಿದ್ದಾರೆ.

Sidharth Kiara Wedding Photo: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಫೋಟೋಗಳು ವೈರಲ್‌ ಆಗುತ್ತಿವೆ. ಇದರಲ್ಲಿ ವಧು - ವರರಿಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದು, ಯಾರ ದೃಷ್ಟಿಯೂ ಬೀಳದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

1 /5

ಕಿಯಾರಾ ಅಡ್ವಾಣಿ ವಧುವಾಗಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ವರನಾಗಿ ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದರು ಮತ್ತು ಇದೀಗ ಅಂತಿಮವಾಗಿ ಇಬ್ಬರೂ ಈ ವಿಶೇಷ ಕ್ಷಣದ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.  

2 /5

ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ವಧು ಕೂಡ ಗುಲಾಬಿಯಂತೆ ಅರಳಿದ್ದಾಳೆ. ಕಿಯಾರಾ ಅವರ ಅತ್ಯಾಕರ್ಷಕ ಲೆಹೆಂಗಾವನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ, ಅದರೊಂದಿಗೆ ಕಿಯಾರಾ ಬೆಳ್ಳಿ ಮತ್ತು ಗ್ರೀನ್‌ ಸ್ಟೋನ್‌ನ ಆಭರಣಗಳನ್ನು ಧರಿಸಿದ್ದರು. ತುಂಬಾ ಸುಂದರವಾದ ಮತ್ತು ಭಾರವಾದ ಹಾರದೊಂದಿಗೆ, ಕಿವಿಯೋಲೆಗಳನ್ನು ಹಾಕಿದ್ದರು.

3 /5

ಮದುವೆಯ ದಿನದಂದು, ಕಿಯಾರಾ ತುಂಬಾ ಲೈಟ್‌ ಮೇಕಪ್ ಮಾಡಿದ್ದಾರೆ, ಅದು ಅವಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತು. ಸಿದ್ಧಾರ್ಥ್ ಅವರ ಲುಕ್ ಬಗ್ಗೆ ಮಾತನಾಡುತ್ತಾ, ಅವರು ಚಗೋಲ್ಡನ್ ಶೆರ್ವಾನಿಯಲ್ಲಿ ಹ್ಯಾಂಡ್ಸಮ್‌ ಆಗಿ ಕಾಣುತ್ತಿದ್ದರು. ಸಿದ್ಧಾರ್ಥ್ ಮತ್ತು ಕಿಯಾರಾ ಜೋಡಿಯನ್ನು ಜನರು ಇಷ್ಟಪಟ್ಟಿದ್ದಾರೆ. ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಒಂದೇ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

4 /5

ಇದರಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಒಬ್ಬರಿಗೊಬ್ಬರು ಚುಂಬಿಸುತ್ತಿದ್ದಾರೆ. ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಇಬ್ಬರೂ ಶೇರ್ ಷಾ ಸಿನಿಮಾದ ಸಂಭಾಷಣೆಯನ್ನು ಬರೆದಿದ್ದಾರೆ - "ಈಗ ನಮ್ಮ ಶಾಶ್ವತ ಬುಕ್ಕಿಂಗ್ ಆಗಿದೆ.. ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಬೇಕು.'

5 /5

ಕಿಯಾರಾ ಮತ್ತು ಸಿದ್ಧಾರ್ಥ್ ಅವರ ಈ ಫೋಟೋಗಳು ಎಲ್ಲರ ಗಮನಸೆಳೆದಿವೆ. ಅದೇ ಸಮಯದಲ್ಲಿ, ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಈ ಜೋಡಿಯ ಮೇಲೆ ಸಾಕಷ್ಟು ಪ್ರೀತಿಯನ್ನು ಸುರಿಸುತ್ತಿದ್ದಾರೆ. ಇಬ್ಬರೂ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಮತ್ತು ಈಗ ಅವರು ಅಂತಿಮವಾಗಿ ವಿವಾಹವಾಗಿದ್ದಾರೆ.