Cleaning Tips: ಅಡುಗೆ ಮನೆ ಟೈಲ್ಸ್ ನಲ್ಲಿ ಅಂಟಿಕೊಂಡಿರುವ ಎಣ್ಣೆ ಜಿಡ್ಡು, ಕಲೆಗಳನ್ನು ನಿಮಿಷಗಳಲ್ಲಿ ಹೋಗಲಾಡಿಸುತ್ತದೆ ಈ ಸಿಂಪಲ್ ಟಿಪ್ಸ್

Kitchen Cleaning Tips: ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಅಡುಗೆ ಮನೆಯ ಕಲೆ, ಕೊಳೆಗಳನ್ನು ಸುಲಭವಾಗಿ ಪರಿಹಾರ ಮಾಡಬಹುದು. 

Kitchen Cleaning Tips :  ನಮ್ಮ ಮನೆಯ ಪ್ರಮುಖ ಭಾಗವೆಂದರೆ ಅಡುಗೆಮನೆ.  ಅಡುಗೆ ಮನೆಯಲ್ಲಿ ನಾವು ರುಚಿಕರವಾದ ಭಕ್ಷ್ಯಗಳನ್ನು ತಯಾರಿಸುತ್ತೇವೆ. ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಅಡುಗೆ ಮನೆಯಲ್ಲಿ ಹಠಮಾರಿ ಎಣ್ಣೆಯ ಕಲೆಗಳು ಅಂಟಿಕೊಂಡಿರುತ್ತವೆ. ಹೀಗೆ ಅಲ್ಲಲ್ಲಿ ಎಣ್ಣೆ ಜಿಡ್ಡು, ಮಸಾಲೆ ಕಲೆಗಳು ಅಂಟಿಕೊಂಡಿದ್ದಾಗ ಅದನ್ನು ಸ್ವಚ್ಚಗೊಳಿಸುವುದು ಕೂಡಾ ಕಷ್ಟ. ಇದು ಅಡುಗೆ ಮನೆಯ ಲುಕ್ ಅನ್ನು ಹಾಳು ಮಾಡಿ ಬಿಡುತ್ತವೆ. ಆದರೆ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಈ ಕಲೆ, ಕೊಳೆಗಳನ್ನು ಸುಲಭವಾಗಿ ಪರಿಹಾರ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಅಡುಗೆ ಮಾಡಿದ ನಂತರ ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಡುಗೆ ಮಾಡುವಾಗ ಅಲ್ಲಲ್ಲಿ ಎಣ್ಣೆ ಮತ್ತು ಮಸಾಲೆ ಕಲೆಗಳು ಚಿಮುತ್ತಿರುತ್ತದೆ. ಅದನ್ನು ಸುಲಭವಾಗಿ ಸ್ವಚ್ಛಗೊಳಿಸಲು ಅಡಿಗೆ ಸೋಡಾವನ್ನು ಬಳಸಬೇಕು. ಅಡುಗೆ ಸೋಡಾ ಬಳಸಿ ಸ್ವಚ್ಛ ಮಾಡುವುದರಿಂದ ಅಡುಗೆ ಮನೆಯ ಟೈಲ್ಸ್ ಮತ್ತು ಸ್ಲಾಬ್ ಗಳಲ್ಲಿ ಅಂಟಿ  ಕುಳಿತಿರುವ  ಕಲೆಗಳು ಮಾಯವಾಗಿ ಬಿಡುತ್ತವೆ. 

2 /5

ಬಿಳಿ ಟೂತ್ಪೇಸ್ಟ್ ಅಡುಗೆಮನೆಯ ಕೊಳೆಯನ್ನು ಸುಲಭವಾಗಿ ಶುಚಿಗೊಳಿಸಲು ಸಹಾಯ ಮಾಡುತ್ತದೆ. ಯಾವ ಜಾಗದಲ್ಲಿ ಕಲೆ, ಕೊಳೆ ಕಾಣಿಸುತ್ತದೆಯೋ ಅಲ್ಲಿ ಟೂತ್ಪೇಸ್ಟ್ ಅನ್ನು ಹಾಕಿ 5 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಆ ಜಾಗವನ್ನು ಉಜ್ಜಿ ತೊಳೆದರೆ ನಿಮ್ಮ ಅಡುಗೆ ಮನೆ ಫಳ ಫಳನೇ ಹೊಳೆಯಲು ಆರಂಭಿಸುತ್ತದೆ. 

3 /5

ವಿನೆಗರ್ ತೈಲ ಕಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಅತ್ಯುತ್ತಮ ಆಮ್ಲವಾಗಿದೆ. ನೀರಿನಲ್ಲಿ ವಿನೆಗರ್ ಮಿಶ್ರಣ ಮಾಡುವ ಮೂಲಕ ಅಡುಗೆ ಮನೆಯ ಎಣ್ಣೆ ಜಿಡ್ಡಿನಿಂದ ಪರಿಹಾರ ಕಂಡು ಕೊಳ್ಳಬಹುದು. ನೀರಿನಲ್ಲಿ ಬೆರೆಸಿದ ವಿನೆಗರ್ ಮಿಶ್ರಣವನ್ನು ಕೊಳಕು ಅಂಟಿಕೊಂಡಿರುವ ಜಾಗಕ್ಕೆ ಸುರಿಯಬೇಕು. 5 ನಿಮಿಷಗಳ ನಂತರ ಆ ಜಾಗವನ್ನು ಉಜ್ಜಿ ತೊಳೆದರೆ ಸಂಪೂರ್ಣ ಸ್ವಚ್ಛ ಅಡುಗೆ ಮನೆ ನಿಮ್ಮದಾಗುತ್ತದೆ. 

4 /5

ನಿಂಬೆ ಮತ್ತು ವಿನೆಗರ್ ನ ದಪ್ಪ ಪೇಸ್ಟ್ ಅನ್ನು ತಯಾರಿಸಿ, ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಬೇಕು. ನಂತರ ಈ ಮಿಶ್ರಣವನ್ನು ಸ್ವಚ್ಚಗೊಳಿಸಬೇಕಾಗಿರುವ ಜಾಗಕ್ಕೆ ಹಾಕಿ ತಿಕ್ಕಿ ತೊಳೆದರೆ ಅದ್ಭುತ ಹೊಳಪು ಪಡೆಯಬಹುದು.    

5 /5

ನೀವು ಮೊಂಡುತನದ ಎಣ್ಣೆಯ ಕಲೆಗಳನ್ನು ಉಪ್ಪು ನೀರಿನಿಂದಲೂ  ಸ್ವಚ್ಛಗೊಳಿಸಬಹುದು. ಎಣ್ಣೆಯ ಕಲೆಗಳನ್ನು ಹೋಗಲಾಡಿಸಲು ಇದು ಅತ್ಯುತ್ತಮ ಪರಿಹಾರವಾಗಿದೆ.